ಶಿವಮೊಗ್ಗದ 6 ಇನ್ನರ್ ವೀಲ್ ಕ್ಲಬ್‌ಗಳಿಂದ ವಿಜೃಂಭಣೆಯ ‘ಸ್ನೇಹಿತರ ದಿನಾಚರಣೆ’
ಶಿವಮೊಗ್ಗದ 6 ಇನ್ನರ್ ವೀಲ್ ಕ್ಲಬ್‌ಗಳಿಂದ ವಿಜೃಂಭಣೆಯ ‘ಸ್ನೇಹಿತರ ದಿನಾಚರಣೆ’

ಶಿವಮೊಗ್ಗ:
”ಕಷ್ಟ ಬಂದಾಗ ಕೈ ಬಿಡುವವನು ಸ್ನೇಹಿತನಲ್ಲ, ಕಷ್ಟದಲ್ಲೂ ಕೈ ಹಿಡಿದು ನಡೆಸುವವನೇ ನಿಜವಾದ ಸ್ನೇಹಿತ….
ಸ್ನೇಹವೆಂದರೆ ಕರ್ಣ, ಕೃಷ್ಣ ಸುಧಾಮರ ಹಾಗೆ ಇರಬೇಕಂತೆ, ಸೋಲಿನಲ್ಲೂ ಕೈ ಬಿಡದ ಕರ್ಣ, ಕಷ್ಟ ಬಂದರೂ ಏನನ್ನೂ ಕೇಳದ ಸುಧಾಮ ಹಾಗೂ ಏನೂ ಕೇಳದಿದ್ದರೂ ಸಹಾಯ ಹಸ್ತ ಚಾಚಿದ ಶ್ರೀಕೃಷ್ಣನ ಸ್ನೇಹ ನಮಗೆಲ್ಲರಿಗೂ ಆದರ್ಶ.”
ಎಂಬ ಸುಂದರ ಸಂದೇಶದೊಂದಿಗೆ, ಶಿವಮೊಗ್ಗ ನಗರದ 6 ಇನ್ನರ್ ವೀಲ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ‘ಸ್ನೇಹಿತರ ದಿನಾಚರಣೆ’ಯನ್ನು ಕೃಷಿ ನಗರದಲ್ಲಿರುವ ರೋಟರಿ ರಿವರ್ ಸೈಡ್ ಭವನದಲ್ಲಿ ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಯಿತು.
ಈ ವಿಶೇಷ ಕಾರ್ಯಕ್ರಮವನ್ನು ಆರು ಇನ್ನರ್ ವೀಲ್ ಕ್ಲಬ್‌ಗಳ ಐ.ಎಸ್.ಒ (ISO) ಅಧಿಕಾರಿಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಸಂಘಟಿಸಲಾಯಿತು:
ಶಿವಮೊಗ್ಗ ಕ್ಲಬ್: ಶ್ವೇತಾ ಜೈನ್
ರಿವರ್ ಸೈಡ್ ಕ್ಲಬ್: ಕವಿತಾ ಜೋಯ್ಸ್
ಈಸ್ಟ್ ಕ್ಲಬ್: ಲತಾ ಸೋಮಶೇಖರ್
ಸೆಂಚುರಿ ಕ್ಲಬ್: ರೂಪಾ ರಾಘವೇಂದ್ರ
ನಾರ್ತ್ ಕ್ಲಬ್: ಪ್ರಜ್ಞಾ ಕಿರಣ್
ಮಿಡ್ ಟೌನ್ ಕ್ಲಬ್: ಸುಪ್ರಿಯಾ ಚೇತನ್
ಈ ಸಂಭ್ರಮದ ಕೂಟದಲ್ಲಿ ಇನ್ನರ್ ವೀಲ್ ಕ್ಲಬ್‌ನ ಜಿಲ್ಲಾ ಪೂರ್ವಾಧ್ಯಕ್ಷರು, ಆರೂ ಕ್ಲಬ್‌ಗಳ ಪೂರ್ವಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿಯ ಅಧಿಕಾರಿಗಳು ಹಾಗೂ ಇನ್ನರ್ ವೀಲ್ ಸದಸ್ಯೆಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


