*ಗೋವರ್ಧನ ಟ್ರಸ್ಟ್ ನಿಂದ ಶಿವಮೊಗ್ಗದ 4 ಕಡೆ ದೀಪಾವಳಿ ಗೋಪೂಜೆ*- ಕಾಂತೇಶ್ ಈಶ್ವರಪ್ಪ
*ಗೋವರ್ಧನ ಟ್ರಸ್ಟ್ ನಿಂದ ಶಿವಮೊಗ್ಗದ 4 ಕಡೆ ದೀಪಾವಳಿ ಗೋಪೂಜೆ*

ಶಿವಮೊಗ್ಗದ ಗೋವರ್ಧನ ಟ್ರಸ್ಟ್ ನ.9ರಂದು ಬೆಳಿಗ್ಗೆ 8 ಕ್ಕೆ ವಿನೋಬನಗರದ ಶ್ರೀ ಶಿವಾಲಯದಲ್ಲಿ ದೀಪಾವಳಿ ಗೋಪೂಜೆ ಹಮ್ಮಿಕೊಂಡಿದೆ.
ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಮಾಜಿ ಉಪಮುಖ್ಯಮಂತ್ರಿ, ಟ್ರಸ್ಟಿನ ಮಹಾ ಪೋಷಕರಾದ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆಯಲ್ಲಿ, ಟ್ರಸ್ಟ್ ಅಧ್ಯಕ್ಷ ಕಾಂತೇಶ್ ಈಶ್ವರಪ್ಪ ಗೌರವ ಉಪಸ್ಥಿತಿಯಲ್ಲಿ ದೀಪಾವಳಿ ಗೋಪೂಜೆ ನಡೆಯಲಿದೆ.
ಶ್ರೀಶಿವಾಲಯ, ಕೋಟೆ ರಸ್ತೆಯ ವಾಸವಿ ಪಬ್ಲಿಕ್ ಸ್ಕೂಲ್, ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀನಾಗಸುಬ್ರಮಣ್ಯ ದೇವಸ್ಥಾನ ಮತ್ತು ರವೀಂದ್ರ ನಗರ ಬಡಾವಣೆಯ ಶ್ರೀಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗುದೆ.
ಗೋಪೂಜೆಯು ಅಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ನಡೆಯಲಿದೆ.


