*ಕೃಷಿ- ತೋಟಗಾರಿಕಾ ಮೇಳಕ್ಕೆ ಮೊದಲ ದಿನವೇ 50 ಸಾವಿರ ಜನ ರೈತ- ಜನರ ಭೇಟಿ* *ಗಮನ ಸೆಳೆಯುತ್ತಿರುವ 450 ವಿವಿಧ ಮಾರಾಟ ಮಳಿಗೆಗಳು*
*ಕೃಷಿ- ತೋಟಗಾರಿಕಾ ಮೇಳಕ್ಕೆ ಮೊದಲ ದಿನವೇ 50 ಸಾವಿರ ಜನ ರೈತ- ಜನರ ಭೇಟಿ*
*ಗಮನ ಸೆಳೆಯುತ್ತಿರುವ 450 ವಿವಿಧ ಮಾರಾಟ ಮಳಿಗೆಗಳು*

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳು ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಸಹಯೋಗದೊಂದಿಗೆ ನಡೆಯುತ್ತಿರುವ *ಕೃಷಿ- ತೋಟಗಾರಿಕೆ ಮೇಳ-2025* ನ.7ರ ಶುಕ್ರವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ಸುಮಾರು 50 ಸಾವಿರಕ್ಕೂ ಹೆಚ್ಚಿನ ರೈತರು, ಸಾರ್ವಜನಿಕರು ಇದರಲ್ಲಿ ಪಾಲ್ಗೊಂಡು ದಾಖಲೆ ನಿರ್ಮಿಸಿದರು.
ಈ ಕೃಷಿ- ತೋಟಗಾರಿಕಾ ಮೇಳದಲ್ಲಿ ಒಟ್ಟು 450 ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಇವುಗಳಲ್ಲಿ 225 ಮಳಿಗೆಗಳನ್ನು ಹೈಟೆಕ್ ಮಳಿಗೆಗಳಾಗಿ ರೂಪಿಸಲಾಗಿದೆ.
150 ಎಕಾನಮಿ ಮಳಿಗೆಗಳು, 25 ಯಂತ್ರೋಪಕರಣ ಮಳಿಗೆಗಳು, 40 ಆಹಾರ ಮಳಿಗೆಗಳು ಇಲ್ಲಿದ್ದು, ಗಮನ ಸೆಳೆಯುತ್ತಿವೆ.
*ಕೃಷಿ ಮೇಳದಲ್ಲಿ ಉಚಿತ ಕಾನೂನು ಅರಿವು ಮತ್ತು ಸಲಹೆ*
ದಿನಾಂಕ 7.11.2025 ರಿಂದ 10.11.2025 ರವರೆಗೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ “ಕೃಷಿ ಮೇಳ 2025” ರಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಾರ್ವಜನಿಕರಿಗೆ ಉಚಿತವಾಗಿ ಕಾನೂನು ಸಲಹೆ ಮತ್ತು ಕಾನೂನು ಅರಿವನ್ನು ನೀಡುವ ದೃಷ್ಟಿಯಿಂದ ಕಾನೂನು ಸಲಹಾ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಈ ಕಾನೂನು ಸಲಹಾ ಕೇಂದ್ರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ. ಎಸ್. ರವರು ದಿನಾಂಕ 7-11.2025 ರಂದು ಉದ್ಘಾಟಿಸಿದರು. ಈ ಕಾನೂನು ಸಲಹಾ ಕೇಂದ್ರದಲ್ಲಿ ನಾಲ್ಕು ದಿನಗಳ ಕಾಲ ಪ್ರಾಧಿಕಾರದ ಪ್ಯಾನಲ್ ವಕೀಲರು, ಕಾನೂನು ನೆರವು ಅಭಿರಕ್ಷಕರು ಹಾಗೂ ಸ್ಟೈಫ್0ಡ್ ವಕೀಲರು ಸಾರ್ವಜನಿಕರಿಗೆ ಕಾನೂನು ಸಲಹೆಯನ್ನು ಮತ್ತು ಕಾನೂನು ಅರಿವನ್ನು ನೀಡುವುದರ ಜೊತೆಗೆ ಕಾನೂನು ಸೇವಾ ಪ್ರಾಧಿಕಾರ ನೀಡುವಂತಹ ಸೇವೆಗಳ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಲು ಪ್ರಾಧಿಕಾರದಿಂದ ನಿಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾನೂನು ಸಲಹಾ ಕೇಂದ್ರಕ್ಕೆ ಖುದ್ದಾಗಿ ಭೇಟಿಕೊಟ್ಟು ಕಾನೂನು ಸೇವಾ ಪ್ರಾಧಿಕಾರದ ಸೇವೆಗಳ ಬಗ್ಗೆ ಮತ್ತು ಕಾನೂನಿನ ಬಗ್ಗೆ ಅರಿವು ಪಡೆದುಕೊಳ್ಳುವುದರ ಜೊತೆಗೆ ತಮಗಿರುವಂತಹ ಕಾನೂನು ಸಮಸ್ಯೆಗಳ ಬಗ್ಗೆ ಸಲಹೆಯನ್ನು ಉಚಿತವಾಗಿ ಪಡೆದುಕೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆದಂತಹ ಸಂತೋಷ ಎಂ. ಎಸ್. ರವರು ಪ್ರಕಟಣೆಯ ಮೂಲಕ ಕೋರಿಕೊಂಡಿದ್ದಾರೆ.


