ಶಿವಮೊಗ್ಗದ ಶ್ರೇಯಾ ಎನ್.NDA ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ RANK
ಶಿವಮೊಗ್ಗದ ಶ್ರೇಯಾ ಎನ್.NDA ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ RANK
ಯುಪಿಎಸ್ಸಿ (UPSC) ನಡೆಸಿದ ಅತ್ಯಂತ ಕಠಿಣ ಎನ್ಡಿಎ (NDA) ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ ದೇಶಕ್ಕೇ ಪ್ರಥಮ ರ್ಯಾಂಕ್ ಪಡೆಯುವ ಮೂಲಕ, ಭದ್ರಾವತಿ ತಾಲೂಕಿನ ತಿಮ್ಮಾಪುರ ಗ್ರಾಮದ ಶ್ರೇಯಾ ಎನ್. ಗೌಡ ಅವರು ನಮ್ಮ ಶಿವಮೊಗ್ಗ ಜಿಲ್ಲೆ ಹಾಗೂ ಇಡೀ ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ!
ಬಾಲ್ಯದಿಂದಲೇ ದೇಶಸೇವೆಯ ಕನಸು ಕಂಡು, ಮೊದಲ ಯತ್ನದಲ್ಲೇ ಈ ಐತಿಹಾಸಿಕ ಸಾಧನೆ ಮಾಡಿದ ಶ್ರೇಯಾ ಅವರ ಪರಿಶ್ರಮ, ನಿಷ್ಠೆ ನಿಜಕ್ಕೂ ಪ್ರತಿಯೊಬ್ಬ ಯುವಜನತೆಗೆ ಪ್ರೇರಣಾದಾಯಿ.
ಮಗಳ ಕನಸಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ಅವರ ತಂದೆ ನಾಗೇಂದ್ರ ಜೆ. ಹಾಗೂ ತಾಯಿ ಡಾ. ಆಶಾ ಬಿ.ಎಂ. ಅವರಿಗೂ ಸಂಸದ ಬಿ.ವೈ.ರಾಘವೇಂದ್ರ ಗೌರವಪೂರ್ವಕ ನಮನಗಳನ್ನು ತಿಳಿಸಿದ್ದಾರೆ.
ಶ್ರೇಯಾ ಅವರಿಗೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅತ್ಯುತ್ತಮ ಭವಿಷ್ಯ ಸಿಗಲಿ, ದೇಶಸೇವೆಯ ಅವರ ಕನಸು ಸಾಕಾರಗೊಳ್ಳಲಿ ಎಂದು ಹೃದಯಪೂರ್ವಕವಾಗಿ ಹಾರೈಸಿದ್ದಾರೆ.


