*ಶಿವಮೊಗ್ಗದ ಹೊಸಮನೆಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ 9 ಜನರ ಬಂಧನ* *33,470 ರೂ., ನಗದು ವಶ*
*ಶಿವಮೊಗ್ಗದ ಹೊಸಮನೆಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ 9 ಜನರ ಬಂಧನ*
*33,470 ರೂ., ನಗದು ವಶ*
ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಶಿವಮೊಗ್ಗದ ಹೊಸಮನೆ ಬಡಾವಣೆಯ 9 ಜನರನ್ನು ಬಂಧಿಸಿದ ದೊಡ್ಡಪೇಟೆ ಪೊಲೀಸರು, ಆಟಕ್ಕೆ ಬಳಸಿದ್ದ 33,470 ರೂ ನಗದನ್ನು ವಶಕ್ಕೆ ಪಡೆದಿದ್ದಾರೆ.
ಜೂ.1 ರಂದು ಸಂಜೆ ದೊಡ್ಡಪೇಟೆ ಪೊಲೀಸರು ಹೊಸಮನೆ ಏರಿಯಾದ ಮನೆಯೊಂದರಲ್ಲಿ ಅಂದರ್ ಬಾಹರ್ ಆಡುತ್ತಿದ್ದಾಗ ದಾಳಿ ಮಾಡಿದರು. ಒಂಭತ್ತು ಜನರನ್ನು ಬಂಧಿಸಿದ್ದು, ನಗದು ಹಣದ ಜೊತೆ 8 ಮೊಬೈಲ್ ಗಳು, ಇಸ್ಪೀಟ್ ಕಾರ್ಡ್ ಗಳನ್ನು ವಶಕ್ಕೆ ಪಡೆದು, ಕಲಂ 79,80 ಕೆಪಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದಾರೆ.


