ಕೃಷಿ ವಿವಿಯ ತಜ್ಞರಿಂದ ರೈತರ ತೋಟಗಳಿಗೆ ಕ್ಷೇತ್ರ ಭೇಟಿ
ಕೃಷಿ ವಿವಿಯ ತಜ್ಞರಿಂದ ರೈತರ ತೋಟಗಳಿಗೆ ಕ್ಷೇತ್ರ ಭೇಟಿ
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾಯಾ೯ನುಭವ ಕಾಯ೯ಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೃಷಿ ವಿವಿಯ ತಜ್ಞರಿಂದ ರೈತರ ತೋಟಗಳಿಗೆ ಕ್ಷೇತ್ರ ಭೇಟಿ ಮಾಡಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ತೋಟಗಾರಿಕೆ ತಜ್ಞರಾದ ಡಾ. ಭರತ್ ಅವರು ಅಗಮಿಸಿದ್ದರು. ಗ್ರಾಮದ ಹರೀಶ್ ಅವರ ಅಡಿಕೆ ತೋಟಕ್ಕೆ ಭೇಟಿ ನೀಡಿದರು. ತೋಟವನ್ನು ಪರಿಶೀಲಿಸಿದ ಭರತ್ ರವರು ತೋಟದಲ್ಲಿ ಸುಳಿ ತಿಗಣೆ, ನುಸಿ, ಬಿಳಿ ನೊಣ ಕೀಟಗಳ ಕಾಟ ಹೆಚ್ಚಿದ್ದು ಮತ್ತು ಮರಗಳಲ್ಲಿ ಸತು(ಜಿಂಕ್) ಕೊರತೆಯ ಲಕ್ಷಣಗಳು ಕಾಣುತ್ತಿದೆ ಎಂದು ತಿಳಿಸಿದರು. ಹಾಗೂ ಹಿಂಗಾರ ಒಣಗುವ ರೋಗವನ್ನು ಗಮನಿಸಿ, ಅದರ ಹರಡುವಿಕೆಯನ್ನು ತಡೆಯಲು ಒಣಗಿದ ಹಿಂಗಾರಗಳನ್ನು ಸುಡಬೇಕು ಮತ್ತು ಅದಕ್ಕೆ ‘ಸಾಫ್’,’ಹೆಕ್ಸಕೊನಜ಼ೋಲ್’, ‘ಪ್ರೋಪಿಕೊನಜ಼ೋಲ್’ ಶಿಲೀಂದ್ರನಾಶಕಗಳನ್ನು ಜನವರಿ- ಫೆಬ್ರವರಿ ತಿಂಗಳಲ್ಲಿ ಸಿಂಪಡಿಸುವ ಮೂಲಕ ನಿರ್ವಹಣೆ ಮಾಡಬಹುದೆಂದು ತಿಳಿಸಿದರು.
ಸೂಕ್ಷ್ಮ ಪೋಷಕಾಂಶಗಳ ಕೊರತೆಯ ನಿವ೯ಹಣೆಗಾಗಿ ಸೂಕ್ತ ಪರಿಹಾರಗಳನ್ನು ಸೂಚಿಸಿದರು.
ಅಡಿಕೆಯಲ್ಲಿ ಅಂತರ ಬೆಳೆಗಳಾಗಿ ಕಾಳು ಮೆಣಸು,ಏಲಕ್ಕಿ, ಪಪ್ಪಾಯ,ಜಾಯಿ ಕಾಯಿ ,ಕೋಕೋ ಮುಂತಾದವುಗಳನ್ನು ಬೆಳೆಯಬಹುದು ಎಂದು ತಿಳಿಸಿದರು. ಅಕ್ಕ ಪಕ್ಕದ ರೈತರೂ ಪಾಲ್ಗೊಂಡು ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡರು.