*ಡಿಕೆಶಿ ಜೊತೆ 10 ಜನರ ಪ್ರಮಾಣ ವಚನ;* *ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಜಮೀರ್ ಅಹಮದ್ ಖಾನ್- ಉಪ ಮುಖ್ಯಮಂತ್ರಿಗಳಾ?* *30 ಜನ ನೂತನ ಸಚಿವರು ಯಾರ್ಯಾರು? ಶಿವಮೊಗ್ಗ ಜಿಲ್ಲೆಯಲ್ಲಿ ಸಂಗಮೇಶ್ ರಿಗೆ ಒಲಿದ ಮಂತ್ರಿಪಟ್ಟ?* *ಈ ವೈರಲ್ ಪಟ್ಟಿಯಲ್ಲಿರೋ 30 ಹೆಸರುಗಳು!*

*ಡಿಕೆಶಿ ಜೊತೆ 10 ಜನರ ಪ್ರಮಾಣ ವಚನ;*

*ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಜಮೀರ್ ಅಹಮದ್ ಖಾನ್- ಉಪ ಮುಖ್ಯಮಂತ್ರಿಗಳಾ?*

*30 ಜನ ನೂತನ ಸಚಿವರು ಯಾರ್ಯಾರು? ಶಿವಮೊಗ್ಗ ಜಿಲ್ಲೆಯಲ್ಲಿ ಸಂಗಮೇಶ್ ರಿಗೆ ಒಲಿದ ಮಂತ್ರಿಪಟ್ಟ?*

*ಈ ವೈರಲ್ ಪಟ್ಟಿಯಲ್ಲಿರೋ 30 ಹೆಸರುಗಳು!*

ಡಿ ಕೆ ಶಿವಕುಮಾರ್ ರವರ ಜೊತೆ 10 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನವನ್ನು ಜೂ.3 ರ ಸಂಜೆ ಬೆಂಗಳೂರಿನ ರಾಜಭವನದಲ್ಲಿ ಸ್ವೀಕರಿಸಲಿದ್ದು, ಯಾರು ಯಾರು ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಕುತೂಹಲ ಬಯಲಾಗಿದೆ.

ಜಾರ್ಜ್, ಯತೀಂದ್ರ ಸಿದ್ದರಾಮಯ್ಯ, ಯು.ಟಿ.ಖಾದರ್, ರೂಪಾ ಶಶಿಧರ್, ಎಂ.ಬಿ.ಪಾಟೀಲ, ಸತೀಶ್ ಜಾರಕಿಹೊಳಿ, ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ, ಪರಮೇಶ್ವರ್ ಮತ್ತು ರಾಮಲಿಂಗಾರೆಡ್ಡಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಡಿಕೆಶಿ ಮಂತ್ರಿ ಮಂಡಲದ 30 ಸಚಿವರು ಇವರೇ ಎಂಬ ಪಟ್ಟಿಯ ವ್ಯಾಟ್ಸಾಪ್ ಮೆಸೇಜೊಂದು ವೈರಲ್ ಆಗುತ್ತಿದೆ.

ಈ 30 ಜನ ನೂತನ ಸಚಿವರಾಗುವವರಲ್ಲಿ ಈ ಹಿಂದಿನ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರ ಹೆಸರಿಲ್ಲ…ಬದಲಿಗೆ ಭದ್ರಾವತಿ ಕ್ಷೇತ್ರದ ಹಿರಿಯ ಶಾಸಕರಾದ ಬಿ.ಕೆ.ಸಂಗಮೇಶ್ವರ್ ಹೆಸರು ಕಾಣಿಸಿಕೊಂಡಿದ್ದು, ಈಡಿಗ ಸಮುದಾಯದ ಕೋಟಾದಲ್ಲಿ ಬಿ.ಕೆ.ಹರಿಪ್ರಸಾದ್ ರವರ ಹೆಸರಿದೆ!

ಈ ಪಟ್ಟಿ ಎಷ್ಟರ ಮಟ್ಟಿಗೆ ಸದ್ಯಕ್ಕೆ ನಂಬಲಾರ್ಹವೋ…ಕುತೂಹಲಕ್ಕಂತೂ ಮಜವಾಗಿದೆ.

ಉಪಮುಖ್ಯಮಂತ್ರಿಗಳೆಂದು 3 ಜನರ ಹೆಸರು ಕೂಡ ಇದರಲ್ಲಿದೆ. ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಜಮೀರ್ ಅಹಮದ್ ಖಾನ್ ರವರ ಹೆಸರಿನ ಮುಂದೆ ಉಪಮುಖ್ಯಮಂತ್ರಿ ಎಂದು ನಮೂದಿಸಲಾಗಿದೆ.

ನೀವೂ ಕುತೂಹಲಕ್ಕಾಗಿ ಗಮನಿಸಬಹುದು!