ಮಣ್ಣು ರೈತನ ಕಣ್ಣು*ವಿಶ್ವ ಮಣ್ಣಿನ ದಿನ ಆಚರಿಸಿದ ಕೆಳದಿ ಕೃಷಿ- ತೋಟಗಾರಿಕಾ ವಿವಿ
*ಮಣ್ಣು ರೈತನ ಕಣ್ಣು*
ವಿಶ್ವ ಮಣ್ಣಿನ ದಿನ ಆಚರಿಸಿದ ಕೆಳದಿ ಕೃಷಿ- ತೋಟಗಾರಿಕಾ ವಿವಿ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ,ಶಿವಮೊಗ್ಗ, ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ವಿಶ್ವ ಮಣ್ಣಿನ ದಿನವನ್ನು ಆಚರಿಸಿದರು.
ವಿಶ್ವ ಮಣ್ಣು ದಿನ 2024 ರ ಘೋಷ ವಾಕ್ಯ *ಮಣ್ಣಿನ ಕಾಳಜಿ: ಅಳತೆ,ಮೇಲ್ವಿಚಾರಣೆ, ನಿರ್ವಹಣೆ* ಆಗಿದೆ.
ಡಿಸೆಂಬರ್ 5 ಅನ್ನು ಏಕೆ ಆಯ್ಕೆ ಮಾಡಲಾಯಿತು?
ಥೈಲ್ಯಾಂಡ್ನ ರಾಜ ಎಚ್.ಎಂ.ಕಿಂಗ್ ಭೂಮಿಬೋಲ್ ಮಣ್ಣಿನ ಆರೋಗ್ಯದ ಪ್ರಥಮ ಪ್ರತಿಪಾದಕರಾಗಿದ್ದರಿಂದ ಅವರ ಜನ್ಮದಿನವನ್ನು ಆಯ್ಕೆ ಮಾಡಲಾಯಿತು. 2013ರಲ್ಲಿ ವಿಶ್ವ ಆಹಾರ ಸಂಸ್ಥೆಯು ಡಿಸೆಂಬರ್ 5 ಅನ್ನು ವಿಶ್ವ ಮಣ್ಣು ಆರೋಗ್ಯ ದಿನವೆಂದು ಆಚರಿಸಲು ಘೋಷಿಸಿತು.
ಅಲ್ಲಿಂದ ಇಲ್ಲಿಯವರೆಗೆ ಪ್ರತಿ ವರ್ಷ ಒಂದು ನೂತನ ಘೋಷ ವಾಕ್ಯದೊಂದಿಗೆ ವಿಶ್ವ ಮಣ್ಣು ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ.
‘ವಿಶ್ವ ಮಣ್ಣು ಆರೋಗ್ಯ ದಿನ ಆಚರಿಸಲು ಪ್ರಮುಖ ಕಾರಣಗಳು’
ಮೊದಲನೆಯದಾಗಿ ಮಾನವನು ಪ್ರತಿನಿತ್ಯ ಬಳಸುವಂತಹ ರಾಸಾಯನಿಕ ಪದಾರ್ಥಗಳು. ಆ ಪದಾರ್ಥಗಳ ಅವಶೇಷಗಳು ಮಣ್ಣಿಗೆ ಸೇರಿ ಮಣ್ಣಿನ ಆರೋಗ್ಯವನ್ನು ಕುಂಟಿಸುತ್ತವೆ. ಎರಡನೇಯದಾಗಿ ಭೂಮಿಯಲ್ಲಿ ಪ್ಲಾಸ್ಟಿಕ್ ಪದಾರ್ಥಗಳ ಉಳಿಕೆ.ಇದರಿಂದ ಭೂಮಿಯಲ್ಲಿ ಉಪಯುಕ್ತ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಕ್ಷೀಣಿಸುತ್ತದೆ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಮಾಡಿಸುವುದರ ಮೂಲಕ ಈ ದಿನದ ಮಹತ್ವವನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟರು.