ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ನೆಮ್ಮದಿಯ
ಮಾತಾಡಬೇಡ ಹೃದಯವೇ,
ಬಾಲ್ಯದ

ಭಾನುವಾರ

ಮತ್ತೆಲ್ಲಿ
ಬರುವುದು?!

2.
ಹಸಿವು-ಮೃತ್ಯು-ಪ್ರೇಮ;
ದೇವರಂತೆ
ಕ್ರೂರಿಯೂ…

3.
ಪ್ರತಿಯೊಬ್ಬರ
ಗಡಿಯಾರವೂ ಬೇರೆ ಬೇರೆ…

ಸಮಯ
ಕೂಡ!

4.
ಅವಳು
ಸೂರ್ಯನಂತಿರಬೇಕು;

ಕಂಡವರು
ನೋಡಿದರೆ
ಕಣ್ಣು ಕುರುಡಾಗಬೇಕು…

ಚಂದಿರನಂತಿದ್ದರೂ
ಅವತ್ತು
ಅಮವಾಸ್ಯೆ ಆವರಿಸಿರಬೇಕು!

5.
ಸೇಡು
ತೀರಿಸಿಕೊಳ್ಳುವುದಕ್ಕಿಂತ
ಸೇತುವೆ
ಆಗಿಬಿಡಬೇಕು;
ನಂಬಿಕೆಯಿಂದ
ಹೆಜ್ಜೆಯಿಟ್ಟು
ದಾಟುವರು ಜನ
ಆಗಲಾದರೂ…

– *ಶಿ.ಜು.ಪಾಶ*
8050112067
(9/12/24)