ಪ್ರತಿ ಜಿಲ್ಲೆಯಲ್ಲಿ ಒಂದು ಮದ್ಯವರ್ತಿ ಸಹಕಾರಿ ಸಂಘ ಹಾಗೂ ಪ್ರತಿ ಗ್ರಾಮದಲ್ಲಿ ಒಂದು ಕೃಷಿ ಪತ್ತಿನ ಸಹಕಾರ ಸಂಘ ರಾಜ್ಯ ಸರ್ಕಾರದ ಸಂಕಲ್ಪ ಎಂದ ರಾಜ್ಯ ಸಹಕಾರ ಸಚಿವ ಲಕ್ಷ್ಮಣ ಸಂಗಪ್ಪ ಸವದಿ
ಪ್ರತಿ ಜಿಲ್ಲೆಯಲ್ಲಿ ಒಂದು ಮದ್ಯವರ್ತಿ ಸಹಕಾರಿ ಸಂಘ ಹಾಗೂ ಪ್ರತಿ ಗ್ರಾಮದಲ್ಲಿ ಒಂದು ಕೃಷಿ ಪತ್ತಿನ ಸಹಕಾರ ಸಂಘ
ರಾಜ್ಯ ಸರ್ಕಾರದ ಸಂಕಲ್ಪ ಎಂದ ರಾಜ್ಯ ಸಹಕಾರ ಸಚಿವ ಲಕ್ಷ್ಮಣ ಸಂಗಪ್ಪ ಸವದಿ
ಶಿವಮೊಗ್ಗ: ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪ್ರತಿ ಜಿಲ್ಲೆಯಲ್ಲಿ ಒಂದು ಮದ್ಯವರ್ತಿ ಸಹಕಾರಿ ಸಂಘ ಹಾಗೂ ಪ್ರತಿ ಗ್ರಾಮದಲ್ಲಿ ಒಂದು ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗಬೇಕೆಂಬುದು ರಾಜ್ಯ ಸರ್ಕಾರದ ಸಂಕಲ್ಪವಾಗಿದೆ ಎಂದು ರಾಜ್ಯ ಸಹಕಾರ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ತಿಳಿಸಿದರು.
ಅವರು ಇಂದು ನಗರದ ಲಗಾನ್ ಕಲ್ಯಾಣಮಂದಿರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಅಪೆಕ್ಸ್ ಬ್ಯಾಂಕ್ ಶಿಮುಲ್ ಹಾಲು ಒಕ್ಕೂಟ, ಹಾಗೂ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳು ವೊವಿಧ ಸಹಕಾರ ಸಂಘಗಳ ಸಂಯುಕ್ತಶ್ರಯದಲ್ಲಿ ಆಯೋಜಿಸಿದ್ದ 73ನೇ ರಾಜ್ಯ ಮಟ್ಟದ ಸಹಕಾರ ಸಪ್ತಾಹದ ನಾಲ್ಕನೆ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಸಹಕಾರ ಕ್ಷೇತ್ರಕ್ಕೆ 120 ವರ್ಷಗಳ ಸುಧೀರ್ಘ ಇತಿಹಾಸವಿದೆ. ಈ ಸಂದರ್ಭದಲ್ಲಿ ಸಹಕಾರಿ ಪಿತಾಮಹ ಎಂದೇ ಖ್ಯಾತಿಯಾಗಿರುವ ಗದುಗಿನ ಕಣಗಿನಹಾಳದ ಸಿದ್ದನಗೌಡ ಸಂಣರಾಮಗೌಡ ಪಾಟೀಲ್ ಅವರ ಕೊಡುಗೆಯನ್ನು ಸ್ಮರಿಸಲೇಬೇಕು. ಎಂದ ಅವರು ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ದ್ವಿಗುಣ ಗೊಳಿಸುವ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ನಿರುದ್ಯೋಗ ಪದವಿಧರರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಸರ್ಕಾರದ ವತಿಯಿಂದಲೇ ಸಹಕಾರಿ ಆಡಿಟ್ ಕೋಸ್೯ ನ್ನು ಅಸರಂಭಿಸಲಾಗಿದೆ. ಇದರಿಂದ ಲಕ್ಷಾಂತರ ಪದವಿಧರರು ಸಹಕಾರ ಕ್ಷೇತ್ರದಲ್ಲಿ ತಂ್ಮ ಬದುಕು ಕಟ್ಟಿಕೊಳ್ಳಬಹುದಾಗಿದೆ. ಅಲ್ಲದೆ ಬೆಳಗಾವಿಯ ಕ್ರೀಡಾ ಶಾಲೆಯೊಂದನ್ನು ವಿಶ್ವವಿದಗಯಾಲಯವನ್ನಾಗಿ ಪರಿವರ್ತಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿದೆ ಎಂದರು.
ರಾಜ್ಯದಲ್ಲಿ 30ಲಕ್ಷ ರೈತರಿಗೆ ಸುಮಾರು 27 ಸಾವಿರ ಕೋಟಿ ರೂ.ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಸಹಕಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು ಇದು ಇತರ ಜಿಲ್ಲೆಗಳಿಗೆ ಮಸದರಿಯಾಗಿದೆ ಎಂದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಕೇಂದ್ರದ ಎನ್.ಡಿ.ಎ.ಸರ್ಕಾರ ರೈತರ ಬಗ್ಗೆ ಕೇವಲ ಘೋಷಣೆ ಮಾಡುತ್ತಿದೆಯೇ ಹೊರತು ರೈತರ ಪರವಾದ ಯಸವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಕೇಂದ್ರದ ಸುಪರ್ಧಿಯಲ್ಲಿರುವ ನಬಾಡ್೯ ಈ ಮೊದಲು ಸಹಕಸರ ಸಂಘಗಳಿಗರ ಶೇ.60ರಷ್ಟು ಸಹಾಯಧನ ನೀಡುತ್ತಿತ್ತು. ಈಗ ಅದು ಶೇ.12ಕ್ಕೆ ಇಳಿದಿದೆ. ಸಹಕಸರ ಬ್ಯಾಂಕುಗಳು ಸದಸ್ಯರ ಠೇವಣಿ ಬಡ್ಡಿ ಹಣದಿಂದಲೇ ಸಾಲ ವಹಿವಾಟು ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆಯಲ್ಲದೆ ಸಂಘಗಳು ಸ್ವಯಂ ಅಸರ್ಥಿಕ ಬಂಡವಾಳ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದರು.
ಸಹಕಾರ ಸಂಘಗಳು ಸ್ವಾವಲಂಬಿಯಾಗಲು ಠೇವಣಿ ಸಂಗ್ರಹಕ್ಕೆ ಸಂಘದ ಎಲ್ಲಾ ಅಧಿಕಾರಿಗಳಿಗೆ, ನಿರ್ದೇಶಕರಿಗೆ ಟಾರ್ಗೆಟ್ ನೀಡಬೇಕು ಎಂದು ಸಲಹೆ ನೀಡಿದ ಅವರು ತಾರತಮ್ಯ ನಿವಾರಣೆ ಮಾಡಲು ಸಹಕಾರಿ ಕ್ಷೇತ್ರ ಸಹಾಯಕವಾಗಲಿದೆ ಎಂದರು.
ಸದಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕಗಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಮೊದಲ ಕಿಸಾನ್ ಕ್ರೆಡಿಡ್ ಸಾಲ ಕೊಟ್ಟ ಹೆಮ್ಮೆ ಸದಿವಮೊಗ್ಗ ಜಿಲ್ಲೆಯದ್ದು. ನಬಾಡ್೯ನ ಪುನರ್ಧನ ಸಂಪೂರ್ಣ ಸ್ಥಗಿತವಾಗಬಹುದು. ಅದಕ್ಕಾಗಿ ಸಹಕಾರ ಸಂಘಗಳು ಸದ್ಧವಾಗಿರಬೇಕು. ಸರ್ಕಾರ ಅಸರಂಭಿಸಿರುವ ಕೋಆಪರೇಟಿವ್ ಡಿಪ್ಲೊಮಾ ಕೋಸ್೯ ಮುಗಿಸಲು ಪದವೀಧರರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಸಚಿವ ಮಧು ಬಂಗಾರಪ್ಪ ಮಾತನಾಡಿ, ರೈತರನ್ನು ಖುಷಿ ಪಡಿಸುವುದೇ ಸಹಕಸರ ಸಂಘಗಳು. ಶಿವಮೊಗ್ಗದಲ್ಲಿ 148ಸಾವಿರ ಹೆಕ್ಡೇರ್ ನಲ್ಲಿ ರೈತರು ಸಾಗುವಳಿ ಮಾಡುತ್ತಿದ್ದಾರೆ. ನಾನೂ ಒಬ್ಬ ರೈತ. ನಾನೇ 74ಸಾವಿರ ಅಡಿಕೆ ಮರ ನೆಟ್ಟಿದ್ದು ಅದರಲ್ಲಿ ಈಗ 55ಸಾವಿರ ಮರಗಳು ಫಲ ನೀಡುತ್ತಿವೆ. ವಿರೋಧ ಪಕ್ಷದವರಿಂದಲೇ ಉತ್ತಮ ಸದಿಕ್ಷಣ ಸಚಿವ ಎಂಬ ಶ್ಲಾಘನೆಗೆ ಭಾಜನನಾಗಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಎಸ್.ರವಿ. ಶಾಸಕ ಡಿ.ಎಸ್.ಅರುಣ್, ಎಡಿಸಿ ಅಭಿಷೇಖ್, ಶಿಮುಲ್ ಅಧ್ಯಕ್ಷ ವಿಧ್ಯಾಧರ, ಶರಣಗೌಡ ಭೈಯಾಪುರ, ಬಿ.ಕೆ.ಶಿವಕುಮಾರ್, ವಿಜಯಕುಮಾರ (ದನಿ), ಶ್ರೀಕಾಂತ್, ಎಸ್.ಕೆ.ಮರಿಯಪ್ಪ, ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.


