ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಸತ್ತ ಮನಸನು
ಜೀವಂತ ದೇಹದಲ್ಲಿ
ಹೊತ್ತು ಮೆರೆಯುವುದೆಷ್ಟು
ಕಷ್ಟ!

2.
ಒಳಗಿಣುಕಿದರೆ
ತುಂಡು ತುಂಡಾಗಿ ಕಾಣುವೆ;

ಈ ಮುಗುಳ್ನಗುವ ಮುಖ
ಜಗತ್ತಿಗಾಗಿಯಷ್ಟೇ!

3.
ಪ್ರೇಮವನ್ನು
ಎದುರು ಹಾಕಿಕೊಳ್ಳಬೇಡ ಹೃದಯವೇ,

ಸಿಕ್ಕರೂ ನೋವು
ಸಿಗದಿದ್ದರೂ ನೋವನ್ನೇ
ನೀಡುವುದು!

4.
ಕಷ್ಟಗಳನ್ನೊಮ್ಮೆ
ಪರಿಶೀಲಿಸಿ ನೋಡು ಹೃದಯವೇ,
ಬದುಕೇನೋ
ಕಲಿಸಲು ಹೊರಟಂತಿದೆ!

– *ಶಿ.ಜು.ಪಾಶ*
8050112067
(10/2/2026)