*19 ಬಾಡಿಗೆ ಬ್ಯಾಂಕ್ ಅಕೌಂಟುಗಳಲ್ಲಿ ವಂಚನೆಯ ಕೋಟಿ ಕೋಟಿ ಹಣ ನೋಡಿ ಬೆಚ್ಚಿಬಿದ್ದ ಪೊಲೀಸರು!* *ಕಂಡವರ ಬ್ಯಾಂಕ್ ಅಕೌಂಟ್ ಗಳನ್ನು ಬಾಡಿಗೆಗೆ ಪಡೆದು ಹಣ ವಂಚಿಸುತ್ತಿದ್ದ ಶರತ್ ಲಾಕ್ ಆಗಿದ್ದು ಹೇಗೆ? ಈ ಕೋಟಿ ಕೋಟಿ ಹಣ ಯಾರದ್ದು?*

*19 ಬಾಡಿಗೆ ಬ್ಯಾಂಕ್ ಅಕೌಂಟುಗಳಲ್ಲಿ ವಂಚನೆಯ ಕೋಟಿ ಕೋಟಿ ಹಣ ನೋಡಿ ಬೆಚ್ಚಿಬಿದ್ದ ಪೊಲೀಸರು!*

*ಕಂಡವರ ಬ್ಯಾಂಕ್ ಅಕೌಂಟ್ ಗಳನ್ನು ಬಾಡಿಗೆಗೆ ಪಡೆದು ಹಣ ವಂಚಿಸುತ್ತಿದ್ದ ಶರತ್ ಲಾಕ್ ಆಗಿದ್ದು ಹೇಗೆ? ಈ ಕೋಟಿ ಕೋಟಿ ಹಣ ಯಾರದ್ದು?*

ಅವನು ಬಾಡಿಗೆಗೆ ಪಡೆದ 19 ಬ್ಯಾಂಕ್ ಅಕೌಂಟ್ ಗಳಲ್ಲಿ 55.43 ಕೋಟಿ ರೂ.,ಗಳಷ್ಟು ಮಹಾ ವಂಚನೆಯಾಗಿದೆ! ಈ ಮಹಾ ವಂಚನೆ ಮಾಡಿದವನು ಓರ್ವ ಮಾಮೂಲು ಗಿರಾಕಿ…ಶಿವಮೊಗ್ಗದ ಕೆಳಗಿನ ತುಂಗಾನಗರ ಎರಡನೇ ತಿರುವಿನ ವಾಸಿ ಶರತ್ @ ಗುಂಡ ಬಿನ್ ಕೃಷ್ಣಾರೆಡ್ಡಿ!

ಶಿವಮೊಗ್ಗದ ವಿನೋಬ ನಗರದಲ್ಲಿರುವ ಇಂಡಿಯನ್ ಓವರ್ ಸೀಸ್ ಬ್ಯಾಂಕಲ್ಲಿರುವ ಗಣೇಶ್ ಟೀ ಸ್ಟಾಲ್ ಎಂಬ ಹೆಸರಿನ ಖಾತೆಯನ್ನು ಬಾಡಿಗೆಗೆ ಪಡೆಯುವ ಶರತ್, 15ದಿನಗಳಿಗೊಮ್ಮೆ ಕಮೀಷನ್ ಕೊಡುತ್ತೇನೆಂದು ನಂಬಿಸಿ ಖಾತೆ ಪಡೆದಿದ್ದ.ವಂಚನೆಯ ಲಕ್ಷಾಂತರ ರೂ., ಹಣವನ್ನು ವರ್ಗಾವಣೆ ಮಾಡಲು ಇದನ್ನು ಬಳಸಿಕೊಂಡಿದ್ದ.

ಈ ಪ್ರಕರಣ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಎಸ್ ಪಿ ನಿಖಿಲ್, ಅಡಿಷನಲ್ ಎಸ್ ಪಿ ಗಳಾದ ಕಾರಿಯಪ್ಪ, ರಮೇಶ್ ಕುಮಾರ್, ಸೈಬರ್ ಕ್ರೈಂ ಠಾಣೆಯ ಡಿವೈಎಸ್ ಪಿ ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಎಎಸ್ ಐ ಗಳಾದ ಎನ್.ಶೇಖರ್ , ಜೆ.ಕೆ.ಪ್ರಕಾಶ್, ಹೆಚ್ ಸಿಗಳಾದ ಕಾಂತಮ್ಮ, ಸಿಪಿಸಿಗಳಾದ ಗಿರೀಶ್ ಸ್ವಾಮಿ, ಆಂಡ್ರೂಸ್ ಜೋನ್ಸ್, ಅರವಿಂದ ರವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ಶರತ್ ನನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಿದ ಪೊಲೀಸರೇ ದಂಗು ಬಡಿದು ಹೋದರು. ಈತನ ಬಳಿ ವಿವಿಧ ಹೆಸರುಗಳಲ್ಲಿದ್ದ ವಿವಿಧ ಬ್ಯಾಂಕ್ ಗಳ 19 ಮ್ಯೂಲ್ ಖಾತೆಗಳಲ್ಲಿ 96ಕ್ಕೂ ಹೆಚ್ಚು ದೇಶದಾದ್ಯಂತದ ಪ್ರಕರಣಗಳು ಪತ್ತೆಯಾದವು. ಅವುಗಳಲ್ಲಿ 55,43,56,248 ರೂ.,ಗಳಿಗೂ ಹೆಚ್ಚು ವಂಚನೆಯಾಗಿತ್ತು.

ಅಲ್ಲದೇ, ಆರೋಪಿ ಶರತ್ ಸ್ವಾಧೀನ ಹೊಂದಿದ್ದ 19 ಮ್ಯೂಲ್ ಅಕೌಂಟ್ ಗಳಲ್ಲಿ ಒಟ್ಟು 11,48,42,898 ₹ ಗಳಿಗೂ ಹೆಚ್ಚು ಹಣ ವರ್ಗಾವಣೆಯಾಗಿರುವುದು ಕಂಡು ಬಂತು.

ಮನೆ ಶೋಧ ಮಾಡಿದ ಪೊಲೀಸರಿಗೆ 18 ಪಾಸ್ ಬುಕ್ಕುಗಳು, 7 ಚೆಕ್ ಬುಕ್ಕುಗಳು, 25 ಎಟಿಎಂ ಕಾರ್ಡುಗಳು, ಎರಡು ಕ್ಯೂಆರ್ ಕೋಡ್ ಸ್ಕ್ಯಾನರ್, ಎರಡು‌ ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ಶರತ್ ನನ್ನು ಕೋರ್ಟಿಗೆ ಒಪ್ಪಿಸಿದ್ದು, ಹಾಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ