ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಕಣ್ಣೀರಿನ ಹನಿಯೊಂದು
ಹಾಗೇ ಉಳಿದುಬಿಟ್ಟಿದೆ
ಕಣ್ಣಲ್ಲಿ;

ಏನನ್ನೂ ಹೇಳುತ್ತಿಲ್ಲ…
ಸುರಿದು ಹೋಗುತ್ತಲೂ ಇಲ್ಲ!

2.
ಟಾಸ್ ಎಸೆದು ನಿರ್ಧರಿಸಿಬಿಡೋಣ;

ರಾಣಿ ಬಿದ್ದರೆ
ನೀನು ನನ್ನವಳು,
ರಾಜ ಬಿದ್ದರೆ
ನಾನು ನಿನ್ನವನು…

ರಗಳೆಯೇ ಬೇಡ ಇನ್ನು!

– *ಶಿ.ಜು.ಪಾಶ*
8050112067
(17/10/2025)