*ಕುಂಸಿಯ ವಯೋವೃದ್ಧೆ ಬಸಮ್ಮ ಕೊಲೆ ಪ್ರಕರಣ ಕೊನೆಗೂ ಬೇಧಿಸಿದ ಪೊಲೀಸರು* *ಮಗ ಕೊಂದಿಲ್ಲ- ಕೊಂದಿದ್ದು ಇಬ್ಬರು ಬೇರೆಯವರು- ಚಿನ್ನಕ್ಕಾಗಿ ಕೊಲೆ* *ಪತ್ರಿಕಾಗೋಷ್ಠಿಯಲ್ಲಿ ಎಸ್ ಪಿ ಮಿಥುನ್ ಕುಮಾರ್ ವಿವರಣೆ*

*ಕುಂಸಿಯ ವಯೋವೃದ್ಧೆ ಬಸಮ್ಮ ಕೊಲೆ ಪ್ರಕರಣ ಕೊನೆಗೂ ಬೇಧಿಸಿದ ಪೊಲೀಸರು*

*ಮಗ ಕೊಂದಿಲ್ಲ- ಕೊಂದಿದ್ದು ಇಬ್ಬರು ಬೇರೆಯವರು- ಚಿನ್ನಕ್ಕಾಗಿ ಕೊಲೆ*

*ಪತ್ರಿಕಾಗೋಷ್ಠಿಯಲ್ಲಿ ಎಸ್ ಪಿ ಮಿಥುನ್ ಕುಮಾರ್ ವಿವರಣೆ*

ಕುಂಸಿಯ ವಯೋವೃದ್ಧೆ ಬಸಮ್ಮ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಅತ್ಯಂತ ನಿಗೂಢ ಕೊಲೆ ಪ್ರಕರಣ ಕೊನೆಗೂ ಬಯಲಾಗಿದೆ.

ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,

ಕುಂಸಿ ಪೊಲೀಸ್ ರಾಣೆ ವ್ಯಾಪ್ತಿಯ ಕುಂಸಿ ಗ್ರಾಮದಲ್ಲಿ ಅ.2 ರಂದು ಬಸಮ್ಮ ಕೋಂ ಲೇಟ್ ಡಿ.ಶಾಂತಪ್ಪ (70 ವರ್ಷ) ರವರು ಕೊಲೆಯಾಗಿದ್ದು, ಈ ಬಗ್ಗೆ ಪಿರಾದುದಾರರಾದ ಈಶ್ವರಪ್ಪ (ಮೃತೆ ಬಸಮ್ಮ ರವರ ತಮ್ಮ & ಮಗಳ ಗಂಡ) ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಪಿಯಾದುದಾರರು ಮೃತೆಯ ಮಗನಾದ ರಮೇಶನೇ ಕೊಲೆ ಮಾಡಿರುವುದಾಗಿ ಆರೋಪಿಸಿ ದೂರು ನೀಡಿದ್ದರು.

ಪ್ರಕರಣದ ತನಿಖೆಯ ಸಮಯದಲ್ಲಿ ತಾಂತ್ರಿಕ ಮತ್ತು ಇತರೆ ಸಾಕ್ಷಿಗಳಿಂದ ರಮೇಶನು ಕೊಲೆ ಮಾಡಿರುವುದು ಸತ್ಯಕ್ಕೆ ದೂರವಾಗಿದೆ ಎಂದು ತಿಳಿದುಬಂದಿತ್ತು.

ಈ ಹಿನ್ನೆಲೆಯಲ್ಲಿ ನಿಜವಾದ ಆರೋಪಿಗಳ ಪತ್ತೆಗಾಗಿ ಎಸ್ ಪಿ ಮಿಥುನ್ ಕುಮಾರ್ ಮತ್ತು ಕಾರಿಯಪ್ಪ ಎ.ಜಿ (1ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ) ಮತ್ತು ರಮೇಶ್ (2ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ), ಸಂಜೀವ್ ಕುಮಾರ್ (ಪೊಲೀಸ್ ಉಪಾಧಿಕ್ಷಕರು-ಶಿವಮೊಗ್ಗ-ಬಿ ಉಪವಿಭಾಗ) ರವರ ಮಾರ್ಗದರ್ಶದಲ್ಲಿ ತನಿಖಾಧಿಕಾರಿಗಳಾದ ದೀಪಕ್ ಎಂ.ಎಸ್ (ಪೊಲೀಸ್ ಇನ್ಸ್ ಪೆಕ್ಟರ್) ರವರು ಈ ಪ್ರಕರಣದಲ್ಲಿ ತಾಂತ್ರಿಕ ಸಾಕ್ಷ್ಯ ಮತ್ತು ಇತರೆ ಸಾಕ್ಷಿಗಳನ್ನು ಆಧಾರವಾಗಿಟ್ಟುಕೊಂಡು ಪ್ರಕರಣದ ಆರೋಪಿತರಾದ ಎಂ.ಅಮಾನ್ ಸಿಂಗ್ @ ಮುನ್ನಾ ಸುಜಾನ್ (ತಂದೆ ಕುಲ್ ದೀಪ್ ಸಿಂಗ್, 21 ವರ್ಷ, ರಜಪೂತರ ಜನಾಂಗ, ಮಹೀಂದ್ರಾ ಶೋರೂಮ್ ನಲ್ಲಿ ಕೆಲಸ, ವಾಸುರಜಪೂತರ ಬೀದಿ, ಕುಂಸಿ ಗ್ರಾಮ, ಶಿವಮೊಗ್ಗ ತಾಲ್ಲೂಕು & ಜಿಲ್ಲೆ) ಮತ್ತು ಎ2.ವಿಕಾಸ್ ಜಿ.ಎಂ (ತಂದೆ ಮೋಹನ್ ಜಿ.ಪಿ.ಎಂ. 21 ವರ್ಷ, ಲಿಂಗಾಯತ ಜನಾಂಗ, ವ್ಯವಸಾಯ ಕೆಲಸ, ವಾಸುಸೋಮಶೆಟ್ಟಿಕೊಪ್ಪ-ಲಿಂಗಾಯತರ ಬೀದಿ ಕುಂಸಿ ಗ್ರಾಮ, ಶಿವಮೊಗ್ಗ ತಾಲ್ಲೂಕು & ಜಿಲ್ಲೆ) ರವರುಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಸದರಿಯವರಿಂದ ಕೃತ್ಯದ ಸಮಯದಲ್ಲಿ ಬಳಕೆಯಾದ ಒಂದು ಬೈಕ್ ಮತ್ತು ಎರಡು ಫೋನ್ ಗಳನ್ನು ಹಾಗೂ ಮೃತೆ ಬಸಮ್ಮನ ಮೈಮೇಲಿಂದ ಆರೋಪಿತರು ತೆಗೆದುಕೊಂಡ ಒಂದು ಕಿವಿ ಓಲೆಯ ತಿರುಪು ಮತ್ತು ಕಿವಿ ಚೈನ್ ಮತ್ತು ಉಂಗುರ ಕರಗಿಸಿ ಮಾಡಿದ ಬಂಗಾರದ ಗಟ್ಟಿಯನ್ನು ವಶಕ್ಕೆ ಪಡೆದು ತನಿಖೆಗೆ ಅಳವಡಿಸಿಕೊಳ್ಳಲಾಗಿತ್ತು ಎಂದು ವಿವರಿಸಿದರು.

ತನಿಖೆ ಇನ್ನೂ ಪ್ರಗತಿಯಲ್ಲಿರುತ್ತದೆ. ಈ ಪ್ರಕರಣದ ಈ ವರೆಗಿನ ತನಿಖೆಯಿಂದ ಪಿರ್ಯಾದುದಾರರಾದ ಈಶ್ವರಪ್ಪ ತಿಳಿಸಿದಂತೆ ಮೃತೆಯ ಮಗ ರಮೇಶ ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದು ಕಂಡುಬಂದಿದೆ. ಈ ಬಗ್ಗೆ ಆರೋಪಿತರ ಪತ್ತೆ ಹಾಗೂ ಕಳುವಾದ ಮಾಲು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಸಾರಥ್ಯದಲ್ಲಿ ವಿಶೇಷ ತಂಡವನ್ನು ರಚಿಸಿದ್ದು ದೀಪಕ್ ಎಂ.ಎಸ್ (ಪೊಲೀಸ್ ಇನ್ಸ್ ಪೆಕ್ಟರ್-ಕುಂಸಿ ಪೊಲೀಸ್ ಠಾಣೆ), ಪಿಎಸ್‌ಐ ಶಾಂತರಾಜ್ ಹಾಗೂ ಕುಂಸಿ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಸಿ.ಹೆಚ್.ಸಿ-120 ಸಂತೋಷ್, ಸಿಹೆಚ್‌ಸಿ 400 ಶ್ರೀ ಪ್ರಕಾಶ್, ಸಿ.ಹೆಚ್.ಸಿ-477 ಶ್ರೀ ಆದರ್ಶ, ಸಿಪಿಸಿ 1503 ಶ್ರೀ ಶಶಿಧರ, ಸಿಪಿಸಿ 1430 ಶ್ರೀ ಮಂಜುನಾಥ ಮತ್ತು ಜೀಪ್ ಚಾಲಕರಾದ ಎ.ಹೆಚ್.ಸಿ 20 ಶಿವಪ್ಪ, ಸಿಪಿಸಿ 1422 ಶಶಿಕುಮಾರ್, ಸಿಪಿಸಿ 1454 ರಘು, ಸಿಪಿಸಿ 1481 ವಿನಾಯಕ ಬಿ.ಟಿ, ಸಿ.ಪಿ.ಸಿ 1875 ಬುರಾನ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿ ತಾಂತ್ರಿಕ ಸಿಬ್ಬಂಧಿಗಳಾದ ಗುರುರಾಜ, ಇಂದ್ರೇಶ್ ರವರು ಪಾಲ್ಗೊಂಡಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.