ಗಾಂಜಾ ವಿರುದ್ಧ ಶಿವಮೊಗ್ಗ ಪೊಲೀಸರ ಸಮರ* *ಇನ್ನು ಮೇಲೆ ಪ್ರತಿಯೊಬ್ಬ ಗಾಂಜಾ ಗಿರಾಕಿಯ ಮೇಲೂ ಒಬ್ಬೊಬ್ಬ ಪೊಲೀಸರ ಸರ್ಪಗಾವಲು* *ಏನಂದ್ರು ಎಸ್ ಪಿ ಮಿಥುನ್ ಕುಮಾರ್?

*ಗಾಂಜಾ ವಿರುದ್ಧ ಶಿವಮೊಗ್ಗ ಪೊಲೀಸರ ಸಮರ*

*ಇನ್ನು ಮೇಲೆ ಪ್ರತಿಯೊಬ್ಬ ಗಾಂಜಾ ಗಿರಾಕಿಯ ಮೇಲೂ ಒಬ್ಬೊಬ್ಬ ಪೊಲೀಸರ ಸರ್ಪಗಾವಲು*

*ಏನಂದ್ರು ಎಸ್ ಪಿ ಮಿಥುನ್ ಕುಮಾರ್?

ಜಿಲ್ಲಾ ಪೊಲೀಸರು ಮಾದಕ ಗಾಂಜಾ ವಿರುದ್ಧ ಸಮರ ಸಾರಿದ್ದು, ಅಕ್ರಮ ಗಾಂಜಾ ಮಾರಾಟ- ಸಾಗಾಣಿಕೆ- ಗಾಂಜಾ ಬೆಳೆದ ಒಟ್ಟು 293 ಜನರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಈ ಪ್ರತಿಯೊಬ್ಬ ಆರೋಪಿಯ ಮೇಲೂ ಓರ್ವ ಪೊಲೀಸರನ್ನು ಕಣ್ಗಾವಲಿಗಿಡಲಾಗುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023 ರಿಂದ 2025 ರ ವರೆಗೆ ಶಿವಮೊಗ್ಗ ನಗರದ 185 ಜನ ಗಾಂಜಾ ಆರೋಪಿಗಳೂ ಸೇರಿದಂತೆ ಒಟ್ಟು 293 ಜನರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಳೆದ ಮೂರು ವರ್ಷಗಳಲ್ಲಿ ಶಿವಮೊಗ್ಗ ನಗರದ 671 ಜನ ಸೇರಿದಂತೆ ಒಟ್ಟು 1142 ಗಾಂಜಾ ಸೇವನೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 2025 ರಲ್ಲಿ ಯೇ ಶಿವಮೊಗ್ಗ ನಗರದ 317 ಜನ ಸೇರಿದಂತೆ ಒಟ್ಟು 468 ಜನ ಗಾಂಜಾ ಸೇವಕರನ್ನು ಕ್ರಮಕ್ಕೊಳಪಡಿಸಲಾಗಿದೆ ಎಂದರು.

ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏರಿಯಾ ಡಾಮಿನೇಷನ್ ವಿಶೇಷ ಗಸ್ತು ಹಮ್ಮಿಕೊಂಡಿದ್ದು, ಒಟ್ಟು 960 ಗಾಂಜಾ ಸೇವನೆ ದೃಢ ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಹಸಿ ಗಾಂಜಾ ಬೆಳೆದವರ ವಿರುದ್ಧ 2023 ರಲ್ಲಿ 3 ಪ್ರಕರಣಗಳಲ್ಲಿ 8 ಆರೋಪಿಗಳ ವಿರುದ್ಧ, 2024 ರಲ್ಲಿ 1 ಪ್ರಕರಣದಲ್ಲಿ ಓರ್ವ ಆರೋಪಿಯ ವಿರುದ್ಧ, 2025 ರಲ್ಲಿ 3 ಪ್ರಕರಣಗಳಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗಾಂಜಾ ವಿರುದ್ಧದ ಜಾಗೃತಿಯ ಹಿನ್ನೆಲೆಯಲ್ಲಿ 1482 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಒಟ್ಟು 1,17,326 ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ವಿವರಿಸಿದರು.