*ಲೈಂಗಿಕ ಸಮಸ್ಯೆಗೆ ಪರಿಹಾರ;* *ಟೆಕ್ಕಿಗೆ ₹48 ಲಕ್ಷ ವಂಚಿಸಿದ್ದ ‘ಟೆಂಟ್ ಬಾಬಾ’ ಕೊನೆಗೂ ಅರೆಸ್ಟ್!*

*ಲೈಂಗಿಕ ಸಮಸ್ಯೆಗೆ ಪರಿಹಾರ;*

*ಟೆಕ್ಕಿಗೆ ₹48 ಲಕ್ಷ ವಂಚಿಸಿದ್ದ ‘ಟೆಂಟ್ ಬಾಬಾ’ ಕೊನೆಗೂ ಅರೆಸ್ಟ್!*

ಲೈಂಗಿಕ ಸಮಸ್ಯೆಗಳು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆಯುರ್ವೇದ ಔಷಧಿ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಕಲಿ ‘ಗುರೂಜಿ’ಯೊಬ್ಬನನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಟೆಕ್ಕಿಯೊಬ್ಬರಿಗೆ ಲೈಂಗಿಕ ಸಮಸ್ಯೆ ಬಗೆಹರಿಸ್ತೀನಿ ಅಂತಾ ಬರೋಬ್ಬರಿ ₹48 ಲಕ್ಷ ವಂಚಿಸಿರುವುದು ತನಿಖೆ ವೇಳೆ ಟೆಂಟ್ ಬಾಬನ ಕಥೆಗಳು ಬಯಲಾಗಿವೆ.

ಬಂಧಿತ ಆರೋಪಿಯನ್ನು ವಿಜಯ್ ಗುರೂಜಿ ಎಂದು ಗುರುತಿಸಲಾಗಿದೆ. ಈತನಿಗೆ ಸಹಕರಿಸುತ್ತಿದ್ದ ಮತ್ತೊಬ್ಬ ಸಹಚರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ವಿಜಯ್ ಗುರೂಜಿ ರಸ್ತೆ ಬದಿ ಟೆಂಟ್ ಹಾಕಿಕೊಂಡು ಆಯುರ್ವೇದ ಔಷಧಗಳನ್ನು ಮಾರಾಟ ಮಾಡುತ್ತಿದ್ದ. ಮಂಡಿನೋವು, ಚರ್ಮದ ಕಾಯಿಲೆ ಹಾಗೂ ವಿಶೇಷವಾಗಿ ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿದ್ದವರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದ. ಪರಿಹಾರದ ಆಸೆಯಲ್ಲಿ ಬರುತ್ತಿದ್ದ ಜನರಿಗೆ, ಮೂಲಿಕೆ ಹಾಗೂ ಪುಡಿಗಳ ರೂಪದಲ್ಲಿ ನಕಲಿ ಆಯುರ್ವೇದ ಔಷಧಿಗಳನ್ನು ನೀಡಿ ವಂಚಿಸುತ್ತಿದ್ದ. ಖದೀಮ ಸಾವಿರ, ಐದು ಸಾವಿರ, ಹತ್ತು ಸಾವಿರದಂತೆ ಸಣ್ಣ ಮೊತ್ತದ ಹಣ ವಂಚನೆ ಮಾಡುತ್ತಿದ್ದರೂ, ‘ಮಾನ ಹರಾಜಾಗುವುದಕ್ಕೆ’ ಅಂಜಿ ಕೆಲವರು ಪೊಲೀಸರಿಗೆ ದೂರು ನೀಡದೇ ಸುಮ್ಮನಾಗುತ್ತಿದ್ದರು.