*ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಪ್ರಕರಣ* *ಬೀದಿ ನಾಯಿಗೆ ಬಲೆ ಹಾಕಿ ಹಿಡಿದು ಹಿಂಸಾತ್ಮಕ ಹಲ್ಲೆ- ಕೊಲೆ* *ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು*
*ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಪ್ರಕರಣ*
*ಬೀದಿ ನಾಯಿಗೆ ಬಲೆ ಹಾಕಿ ಹಿಡಿದು ಹಿಂಸಾತ್ಮಕ ಹಲ್ಲೆ- ಕೊಲೆ*
*ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು*
ಬೀದಿ ನಾಯಿಯನ್ನು ಬಲೆ ಹಾಕಿ ಹಿಡಿದು ಕ್ರೂರವಾಗಿ ಹೊಡೆಯುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಪ್ರಾಣಿ ರಕ್ಷಣಾ ಸೇವಾ ತಂಡ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಪ್ರಾಣಿ ರಕ್ಷಣಾ ಸೇವಾ ತಂಡದ ಸದಸ್ಯರಾದ ಸೂರಜ್ ಎಸ್ (29 ವರ್ಷ, ವಾಸ : ಕೆ.ಹೆಚ್.ಬಿ. ಕಾಲೋನಿ, ಗೋಪಾಳ ಶಿವಮೊಗ್ಗ)
ರವರು ಡಿಸೆಂಬರ್ 1 ರಂದು ರಾತ್ರಿ ತುಂಗಾನಗರ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.
ನವೆಂಬರ್ 28 ರಂದು ಶಿವಮೊಗ್ಗದ ವೃದ್ದಾಶ್ರಮ ಎದುರು ಗೋಪಾಳ ಪೊಲೀಸ್ ಲೇ ಔಟ್ ನಲ್ಲಿ ಬೆಳಗ್ಗೆ 08:16 ಗಂಟೆಗೆ, ಖಾಸಗಿ ಹಂದಿ ಹಿಡಿಯುವವರ ಗುಂಪೊಂದು ಸಮುದಾಯದ ಬೀದಿ ನಾಯಿಯನ್ನು ಬಲೆಯಲ್ಲಿ ಹಿಡಿದು ಹೊಡೆದು ಸಾಯಿಸಿದ್ದಾರೆ.
ಸಿ.ಸಿ. ಟಿ.ವಿ. ಕ್ಯಾಮೆರಾ ಪರಿಶೀಲಿಸಿದಾಗ ಬೀದಿ ನಾಯಿಯನ್ನು ಸೆರೆಹಿಡಿದು ಕ್ರೂರವಾಗಿ ಕೊಲ್ಲುವ ದೃಶ್ಯ ಕಂಡು ಬಂದಿದೆ. ಆದ್ದರಿಂದ, ಈ ಕೃತ್ಯವೆಸಗಿದವರ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 0723/2025 ಕಲಂ 11 (1) The Prevention of cruelty to Animal (PCA) Act 1960 & ಕಲಂ 325 ಬಿ ಎನ್ ಎಸ್ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


