*ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದು ಹೋದ ಮೊಬೈಲ್ ಗಳ ಸಂಖ್ಯೆ 6445!* *ಪೊಲೀಸರಿಂದ ಪತ್ತೆಯಾದ ಮೊಬೈಲ್ ಗಳು 1194…* *ಕಳೆದು ಹೋದ ಮೊಬೈಲ್ ಗಳು ಯಾವ ಯಾವ ರಾಜ್ಯಗಳಲ್ಲಿ ಪತ್ತೆಯಾದವು?!* *ಇಂದು ಸಂಜೆ ನಡೆಯಲಿದೆ ಪತ್ತೆಯಾದ ಮೊಬೈಲ್ ಗಳನ್ನು ಹಿಂದಿರುಗಿಸುವ ಕೆಲಸ*
*ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದು ಹೋದ ಮೊಬೈಲ್ ಗಳ ಸಂಖ್ಯೆ 6445!*
*ಪೊಲೀಸರಿಂದ ಪತ್ತೆಯಾದ ಮೊಬೈಲ್ ಗಳು 1194…*
*ಕಳೆದು ಹೋದ ಮೊಬೈಲ್ ಗಳು ಯಾವ ಯಾವ ರಾಜ್ಯಗಳಲ್ಲಿ ಪತ್ತೆಯಾದವು?!*
*ಇಂದು ಸಂಜೆ ನಡೆಯಲಿದೆ ಪತ್ತೆಯಾದ ಮೊಬೈಲ್ ಗಳನ್ನು ಹಿಂದಿರುಗಿಸುವ ಕೆಲಸ*
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದು ಹೋದ ಮೊಬೈಲ್ ಗಳು ದೇಶದ ವಿವಿಧ ರಾಜ್ಯಗಳಲ್ಲಿ ಪತ್ತೆಯಾಗಿದ್ದು, ಈವರೆಗೆ ಪೊಲೀಸರು ಸುಮಾರು 1194 ಕ್ಕೂ ಹೆಚ್ಚಿನ ಮೊಬೈಲ್ ಗಳನ್ನು ಇಂದು ವಾರಸುದಾರರಿಗೆ ಹಿಂದಿರುಗಿಸಲಿದ್ದಾರೆ.
ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಮೂಲಕ ಇದುವರೆಗೂ ಸುಮಾರು 6445 ಮೊಬೈಲ್ ಕಳೆದ ಪ್ರಕರಣಗಳು ದಾಖಲಾಗಿದ್ದವು.
ಈ ಕಳೆದು ಹೋದ ಮೊಬೈಲ್ ಗಳನ್ನು ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳ, ತೆಲಂಗಾಣ, ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸುಮಾರು 1194 ಮೊಬೈಲ್ ಗಳು ಪತ್ತೆಯಾಗಿವೆ.
ಕಳೆದ ತಿಂಗಳೊಂದರಲ್ಲೇ 110 ಮೊಬೈಲ್ ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಸೈಬರ್ ಕ್ರೈಂ ಪೊಲೀಸ್ ಠಾಣೆಯ ಡಿವೈಎಸ್ ಪಿ ಕೆ.ಕೃಷ್ಣಮೂರ್ತಿ ಮತ್ತು ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ CEIR POTAL ಮೂಲಕ ಕಳೆದು ಹೋದ ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದಾರೆ.
ಎಸ್ ಪಿ ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ಈ ಮೊಬೈಲ್ ಪತ್ತೆ ಕಾರ್ಯ ನಡೆದಿದ್ದು, ಡಿ.3 ರ ಇಂದು ಸಂಜೆ 5ಕ್ಕೆ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪತ್ತೆಯಾದ ಮೊಬೈಲ್ ಗಳ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.


