ಜನಮನ ಸೂರೆಗೊಂಡ ಮಹಿಳಾ ದಸರಾ*
*ಜನಮನ ಸೂರೆಗೊಂಡ ಮಹಿಳಾ ದಸರಾ*

ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ದಸರಾ ಕಾರ್ಯಕ್ರಮವನ್ನು ಶ್ರೀಮತಿ ರೂಪಾ ಅಯ್ಯರ್ ಉದ್ಘಾಟಿಸಿದರು.
ವಿಧಾನ ಪರಿಷತ್ ಸದಸ್ಯರಾದ ಬಲ್ಕೀಸ್ ಬಾನು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಪಲ್ಲವಿ, ಶ್ರೀಮತಿ ಯಶೋಧ, ಮಹಿಳಾ ದಸರಾದ ಸದಸ್ಯ ಕಾರ್ಯದರ್ಶಿ ಅನುಪಮಾ ಮತ್ತು ತಂಡದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ 26 ವಿವಿಧ ಮಹಿಳಾ ತಂಡಗಳಿಂದ ನೃತ್ಯ ಕಾರ್ಯಕ್ರಮ ನಡೆದು, ಜನರನ್ನು ರಂಜಿಸಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕರಾದ ಮಧು, ಮಹಿಳಾ ಕಾಂಗ್ರೇಸ್ ಕಾರ್ಯಕರ್ತರಾದ ವಿಜಯಲಕ್ಷ್ಮಿ ಪಾಟೀಲ್ . ಅರ್ಚನಾ. ಸ್ಟೆಲ್ಲಾ ಮಾರ್ಟಿನ್. ಶಮೀಮ್ ಬಾನು ರವರು ಸಹ ಭಾಗವಹಿಸಿದ್ದರು.
ಖ್ಯಾತ ಕಾದಂಬರಿಕಾರರಾದ ಎಸ್.ಎಲ್.ಭೈರಪ್ಪರವರ ನಿಧನದ ಹಿನ್ನೆಲೆಯಲ್ಲಿ ಎರಡು ನಿಮಿಷ ಮೌನ ಆಚರಿಸಿ ಸಂತಾಪ ಸೂಚಿಸಲಾಯಿತು.