ಶಿವಮೊಗ್ಗದ ಗೋಪಾಳದ ಮನೆಯಲ್ಲಿ ಲಕ್ಷ ಲಕ್ಷ ಕದ್ದಿದ್ದ ಚಾಲಾಕಿ ಆಟೋ ಚಾಲಕ ಸಿಕ್ಕಿ ಬಿದ್ದ* *12,35,000₹ ಮೌಲ್ಯದ ಬಂಗಾರ- ಬೆಳ್ಳಿ ಕದ್ದಿದ್ದ- 22,74,000₹ ನಗದು ಕೊಳ್ಳೆ ಹೊಡೆದಿದ್ದ ಕಳ್ಳ* *ಗೋಪಾಳದ ಆಟೋ ಚಾಲಕ ಅಶ್ರಫ್ ಉಲ್ಲಾನನ್ನು ಬೇಟೆಯಾಡಿದ ತುಂಗಾನಗರ ಪಿ.ಐ. ಕೆ.ಟಿ.ಗುರುರಾಜ್ ತಂಡ*

*ಶಿವಮೊಗ್ಗದ ಗೋಪಾಳದ ಮನೆಯಲ್ಲಿ ಲಕ್ಷ ಲಕ್ಷ ಕದ್ದಿದ್ದ ಚಾಲಾಕಿ ಆಟೋ ಚಾಲಕ ಸಿಕ್ಕಿ ಬಿದ್ದ*

*12,35,000₹ ಮೌಲ್ಯದ ಬಂಗಾರ- ಬೆಳ್ಳಿ ಕದ್ದಿದ್ದ- 22,74,000₹ ನಗದು ಕೊಳ್ಳೆ ಹೊಡೆದಿದ್ದ ಕಳ್ಳ*

*ಗೋಪಾಳದ ಆಟೋ ಚಾಲಕ ಅಶ್ರಫ್ ಉಲ್ಲಾನನ್ನು ಬೇಟೆಯಾಡಿದ ತುಂಗಾನಗರ ಪಿ.ಐ. ಕೆ.ಟಿ.ಗುರುರಾಜ್ ತಂಡ*

ಹಗಲಲ್ಲೇ ಮನೆಗೆ ನುಗ್ಗಿ ಸುಮಾರು 35 ಲಕ್ಷ ರೂ.,ಗಳಷ್ಟು ಬಂಗಾರದ ಒಡವೆಗಳೂ ಸೇರಿದಂತೆ ನಗದು ಹಣ ಕದ್ದಿದ್ದ ಶಿವಮೊಗ್ಗದ ಗೋಪಾಳದ ವಿಶ್ವೇಶ್ವರ ನಗರದ ಆಟೋ ಚಾಲಕನೊಬ್ಬನನ್ನು ತುಂಗಾನಗರ ಪೊಲೀಸರು ಬಂಧಿಸಿ ನಗದು ಹಣ, ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

*ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ;*

*ಪತ್ರಿಕಾ ಪ್ರಕಟಣೆ*

ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯ ಗುನ್ನೆ ಸಂಖ್ಯೆ 0545/2025 ಕಲಂ 331(3), 305, ಬಿ.ಎನ್.ಎಸ್ ರಲ್ಲಿ *ದಿನಾಂಕ 17/9/2025 ರಂದು* ಗೊಪಾಲ ಗೌಡ ಬಡಾವಣೆ ಸಿ ಬ್ಲಾಕ್ , ನಲ್ಲಿ *ಹಗಲು ಸಮಯದಲ್ಲಿ ಮನೆಗಳ್ಳತನ* ನಡೆದಿದ್ದು ಈ ಪ್ರಕರಣಕ್ಕೆ ಸಂಬಂದಿಸಿದಂತೆ * ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್* ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಎ ಜಿ ಕಾರಿಯಪ್ಪ ಮತ್ತು ರಮೇಶ ಕುಮಾರ್* ಹಾಗೂ ಪೊಲೀಸ್ ಉಪಾಧೀಕ್ಷಕರಾದ ಬಾಬು ಆಂಜನಪ್ಪ* ರವರ ಮಾರ್ಗದರ್ಶನದಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಪಿ.ಐ ಕೆ ಟಿ ಗುರುರಾಜ್,* ಹಾಗೂ ಸಿಬ್ಬಂದಿಯವರಾದ ಹೆಚ್ ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್, ಸಿಪಿಸಿ ಗಳಾದ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ರಂಗನಾಥ್, ಹರೀಶ್ ಎಮ್.ಜಿ, ಮಪಿಸಿಗಳಾದ ಶ್ರೀಮತಿ ಅನುಷಾ ಮತ್ತು ಕು। ಚೈತ್ರಾ ರವರಗಳು ಮತ್ತು *ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿವರಾದ ಹೆಚ್.ಸಿ ಇಂದ್ರೇಶ, ಗುರು, ಮತ್ತು ವಿಜಯ* ಹಾಗೂ ಚಾಲಕರಾದ ಎ.ಹೆಚ್.ಸಿ ಪುನೀತ್ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ಸದರಿ ತನಿಖಾ ತಂಡವು ಪ್ರಕರಣದ ಆರೋಪಿತನಾದ *ಅಶ್ರಫ್ ವುಲ್ಲಾ, 35 ವರ್ಷ ,ಆಟೋ ಚಾಲಕ ವಾಸ ವಿಶ್ವೇಶ್ವರನಗರ, ಗೋಪಾಳ ಶಿವಮೊಗ್ಗ* ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ *1) 22,74,500/- ರೂ ನಗದು* ಹಣ, *2) 130 ಗ್ರಾಂ ಬಂಗಾರದ ಆಭರಣ* ಮೌಲ್ಯ 11,70,000/- ಮತ್ತು *3) 550 ಗ್ರಾಂ ಬೆಳ್ಳಿಯ ಆಭರಣಗ* ಮೌಲ್ಯ 65,000/- ಸೇರಿ *ಒಟ್ಟು 12,35,000/- ರೂ* ನ ಬಂಗಾರ & ಬೆಳ್ಳಿಯ ಆಭರಣಗಳು ಹಾಗು *22,74,000/- ನಗದು ಹಣವನ್ನು* ವಶಪಡಿಸಿಕೊಂಡು *ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹಾಲಿ ಆರೋಪಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ*

*ಈ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.*