ಉಪವಾಸದಲ್ಲಿ ಮುಸ್ಲಿಮರೇಕೆ ಉಗುಳುತ್ತಾರೆ?
ಉಪವಾಸದಲ್ಲಿ ಮುಸ್ಲಿಮರೇಕೆ ಉಗುಳುತ್ತಾರೆ?
ಉಪವಾಸದಲ್ಲಿ ಮುಸ್ಲಿಮರೇಕೆ ಉಗುಳುತ್ತಾರೆ ಎಂಬ ಪ್ರಶ್ನೆಯನ್ನು ಗೆಳೆಯರೊಬ್ಬರು ಕೇಳಿದ್ದಾರೆ.
ಉಪವಾಸದಲ್ಲಿ ಉಗುಳು ನುಂಗಬಾರದೆಂಬ ನಿಯಮ ಇಲ್ಲ. ಆದರೆ ಕಫ, ರಕ್ತ ಇತ್ಯಾದಿಗಳನ್ನು ನುಂಗಬಾರದೆಂಬ ನಿಯಮ ಇದೆ. ನಾನೂ ಉಪವಾಸಿಗ. ನಾನೇನೂ ಉಗುಳ್ತಾ ಇಲ್ಲ. ನನ್ನ ಪ್ರಕಾರ ಮುಸ್ಲಿಮರು ಉಗುಳ್ತಾರೆ ಅನ್ನೋದು ಅತಿರಂಜಿತ ಸುದ್ದಿ. ಯಾರೋ ಒಬ್ಬರು ಉಗಳಿದ್ದನ್ನ ಒಂದು ಸಾವಿರ ಮಂದಿ ಉಗುಳಿದ್ದಾರೆ ಎಂಬಂತೆ ಬಿಂಬಿಸುವ ಮತ್ತು ಅದನ್ನೇ ಮತ್ತೆ ಮತ್ತೆ ಹೇಳುತ್ತಾ ಭ್ರಮೆಯೊಂದನ್ನು ಹರಡುವ ವ್ಯವಸ್ಥಿತ ಜಾಲದ ಪರಿಣಾಮ ಇದು. ಅದರ ಆಚೆಗೆ,
ಇತರೆಲ್ಲ ಭಾರತೀಯರಂತೆ ಮುಸ್ಲಿಮರಲ್ಲೂ ವೀಳ್ಯದೆಲೆ ಜಗಿಯುವವರಿದ್ದಾರೆ. ಸಿಗರೇಟು, ಬೀಡಿ ಸೇದುವವರಿದ್ದಾರೆ. ಗುಟ್ಕಾ ಜಗಿಯುವವರೂ ಇದ್ದಾರೆ. ಉಪವಾಸದ ದಿನಗಳಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಈ ಚಟಗಳಿಗೆ ಪೂರ್ಣವಿರಾಮ ನೀಡಲೇ ಬೇಕಾಗಿರುವುದರಿಂದ ಮಾಮೂಲಿ ಅಭ್ಯಾಸದಂತೆ ಉಗುಳುವವರು, ಬಾಯಿ ಸಪ್ಪೆಯಾಗಿ ಉಗುಳುವವರು ಇರಬಹುದು. ಇದು ವ್ಯಕ್ತಿಗತ ಸಮಸ್ಯೆಯೇ ಹೊರತು ಉಪವಾಸದ ನಿಯಮಗಳ ಕಾರಣದಿಂದ ಅಲ್ಲ. ಅಷ್ಟಕ್ಕೂ ಆಸ್ಟ್ರೇಲಿಯಾದ ಕ್ರಿಕೆಟ್ ಕಪ್ತಾನ ಸ್ಮಿತ್ ಉಗುಳುವುದಕ್ಕಂತೂ ಲೆಕ್ಕ ಮಿತಿ ಇಲ್ಲ. ಆತನೇನೂ ಮುಸ್ಲಿಂ ಅಲ್ಲವಲ್ಲ.
ಅಂದಹಾಗೆ, ಉಗುಳು ಎಂಬುದು ಧರ್ಮ ಸಂಬಂಧಿ ಸಂಗತಿಯಲ್ಲ. ವೀಳ್ಯದೆಲೆ, ಗುಟ್ಕಾದಂಥವುಗಳನ್ನು ಜಗಿದು ಉಗುಳುವಾಗ ಧರ್ಮ ನೋಡದವರು ಉಪವಾಸದಲ್ಲಿ ಮುಸ್ಲಿಮರು ಉಗುಳುತ್ತಾರೆ ಎಂದು ಹೇಳುವುದರಲ್ಲಿ ಉಗುಳಿಗಿಂತ ಹೊರತಾದ ಧರ್ಮ ದ್ವೇಷಿ ಪ್ರಚಾರಗಳ ಪ್ರಭಾವವಿದೆ ಎಂದೇ ಅನಿಸುತ್ತದೆ.
https://www.facebook.com/share/p/1A9QatouA2/