ಶಿವಮೊಗ್ಗದ ಜನ ಏನಂತಾರೆ?* *ಶಿವಮೊಗ್ಗದಲ್ಲಿ ತಯಾರಾಗದ ಸ್ವೀಟನ್ನು ಮುಂದಿಟ್ಟುಕೊಂಡು…* *ಮಹಾಲಕ್ಷ್ಮೀ ಸ್ವೀಟ್ಸ್- ಅಂತರಂಗವೂ ಬಹಿರಂಗವೂ*
*ಶಿವಮೊಗ್ಗದ ಜನ ಏನಂತಾರೆ?*
*ಶಿವಮೊಗ್ಗದಲ್ಲಿ ತಯಾರಾಗದ ಸ್ವೀಟನ್ನು ಮುಂದಿಟ್ಟುಕೊಂಡು…*
*ಮಹಾಲಕ್ಷ್ಮೀ ಸ್ವೀಟ್ಸ್- ಅಂತರಂಗವೂ ಬಹಿರಂಗವೂ*
ಶಿವಮೊಗ್ಗದ ಪತ್ರಿಕೋದ್ಯಮದಲ್ಲಿ ಈಗ ಹೊಸದೊಂದು ವಾದವೋ ವಿವಾದವೋ ಚರ್ಚೆಯೋ ಆರಂಭವಾಗಿದೆ.
ಮೈಸೂರಿನ ಮಹಾಲಕ್ಷ್ಮೀ ಸ್ವೀಟ್ಸ್ ಶಿವಮೊಗ್ಗಕ್ಕೆ ಬರುತ್ತಿದೆ ಅಂದಾಗಲೇ ಕೆಲವರು ಆ ಹೆಸರಿನಲ್ಲಿ ಕಾಗೆಗಳಾಗಿ ಕಾಗೆ ಬಳಗ ಕರೆದು ಜಾಹಿರಾತು ಉಣ್ಣಲು ಬಿಡಬೇಕಿತ್ತು!
ಆದರೆ, ಹಾಗಾಗಲಿಲ್ಲ. ಶಿವಮೊಗ್ಗದಂಥ ಸಾಂಸ್ಕೃತಿಕ ನಗರಿ(ಮೈಸೂರಿಗಿಂತ ಉನ್ನತಿಯಲ್ಲಿರೋ)ಯಲ್ಲಿ ಮಹಾಲಕ್ಷ್ಮೀ ಸ್ವೀಟ್ಸ್ ನವರ ಶಾಖೆಯ ಉದ್ಘಾಟನೆ ಸಂಬಂಧ ದಾರಿ ತಪ್ಪಿಸಿದ್ದು ಯಾರು? ಶಿವಮೊಗ್ಗದಲ್ಲಿ ಕೇವಲ 4 ಸ್ಥಳೀಯ ಪತ್ರಿಕೆಗಳು ಮಾತ್ರ ಇರುವುದೇ?ಹಾಗಂತ ಹೇಳಿದ ಪುಣ್ಯಾತ್ಮ ಪತ್ರಕರ್ತ ಯಾರು?
ಈ ತಪ್ಪು ಮಾಹಿತಿ ಕೊಟ್ಟು ತಮ್ಮ ಮೈಸೂರ್ ಪಾಕಲ್ಲಿ ಸಿಹಿ ಹೆಚ್ಚಿಸಿಕೊಂಡವರು ಆ ಸಿಹಿಯನ್ನು ಈಗ ಆಸ್ವಾದಿಸಲು ಸಾಧ್ಯವೇ?
ಮಹಾಲಕ್ಷ್ಮಿ ಸ್ವೀಟಿನ ಅಂತರಂಗ- ಬಹಿರಂಗ ಬಲ್ಲವರೀಗ ಬೇರೆ ಬೇರೆ ದಿಕ್ಕುಗಳಲ್ಲಿ ಹೋರಾಟಕ್ಕಿಳಿಯುತ್ತಿದ್ದಾರೆ.
ಶಿವಮೊಗ್ಗದಲ್ಲಿರೋದೇ ನಾಲ್ಕು ಪತ್ರಿಕೆಗಳೆಂದು ಹೊಟ್ಟೆ ಬಿರಿಯುವಂತೆ ಕಸ ತುಂಬಿಸಿಕೊಂಡ ಕಸದಂತಹ ಮನೋಸ್ಥಿತಿಯ ಪತ್ರಕರ್ತ ವೇಷಧಾರಿಗಳು ಮತ್ತೊಬ್ಬರ ಹೊಟ್ಟೆಯ ಬಗ್ಗೆ ಪುಟ್ಟದಾಗಿ ಯೋಚಿಸಬಹುದಿತ್ತು. ಅಷ್ಟೆಲ್ಲ ವ್ಯವಹರಿಸುವ ಆ ಮೈಸೂರಿನ ಸ್ವೀಟು ಅಂಗಡಿಯವರ ಬುದ್ದಿ ಏನು ತಿನ್ನಲು ಹೋಗಿತ್ತು? ಕ್ರಾಸ್ ಚೆಕ್ ಮಾಡಬಹುದಿತ್ತು.(ಶಿವಮೊಗ್ಗದಲ್ಲಿ ಶಾಖೆ ಪ್ರಾರಂಭಿಸಿದರೆ ಎಷ್ಟು ಲಾಭ ಅಂತ ಸರ್ವೇ ಮಾಡಿದಂಗೆ).
ಆ ಸ್ವೀಟು ಶಿವಮೊಗ್ಗದಲ್ಲಿ ತಯಾರಾಗುವುದಿಲ್ಲ…ಶಿವಮೊಗ್ಗದ ಬಹುತೇಕ ಸ್ವೀಟ್ ಅಂಗಡಿಗಳು ಸ್ಥಳೀಯವಾಗಿಯೇ ಸಿಹಿ ತಯಾರಿಸಿ ಆದಷ್ಟು ಫ್ರೆಶ್ ತಿಂಡಿಗಳನ್ನು ನೀಡುತ್ತವೆ. ಮಹಾಲಕ್ಷ್ಮೀ ಸ್ವೀಟ್ ಮೈಸೂರಲ್ಲಿ ತಯಾರಾಗಿ ಶಿವಮೊಗ್ಗಕ್ಕೆ ಬರುತ್ತದೆ.
ಶಿವಮೊಗ್ಗದ ಜನಕ್ಕೆ ವೆಂಕಟೇಶ್ವರ ಸ್ವೀಟ್ ಹೌಸ್, ಅಭಿಷೇಕ್ ಸ್ವೀಟ್ ಹೌಸ್ ಥರದ ಫ್ರೆಶ್ ಸ್ವೀಟುಗಳು ಇರುವಾಗ ಮೈಸೂರಿನಿಂದ ಬರುವ ಮಹಾಲಕ್ಷ್ಮೀ ಸ್ವೀಟ್ ಹೌಸಿನ ಸಿಹಿ ತಿನಿಸುಗಳನ್ನು ಕಾಯುವಷ್ಟು, ಕಾಲ ಕಳೆದಂತೆ ಹಾಳಾಗುವ ಸಿಹಿ ತಿನ್ನುವಷ್ಟು(ಮೈಸೂರಿನಲ್ಲಿ ತಯಾರಾಗಿ ಶಿವಮೊಗ್ಗಕ್ಕೆ ಸಾಗಿಸಲ್ಪಟ್ಟು, ಶಿವಮೊಗ್ಗದ ಶಾಖೆ ತಲುಪಿದ ಕೂಡಲೇ ಮುಗಿಬಿದ್ದು ಜನ ಅದನ್ನೇನೂ ಖಾಲಿ ಮಾಡುವುದಿಲ್ಲ ಅಲ್ವೇ…) ತಾಳ್ಮೆ ಇದೆಯೇ???
ಇದು ಶಿವಮೊಗ್ಗದ ಜನರೇ ನಿರ್ಧರಿಸುವ ವಿಚಾರ!


