ಇವತ್ತಿನ ಕವಿಸಾಲು

Gm ಶುಭೋದಯ💐

*ಕವಿಸಾಲು*

ನಿನ್ನನ್ನು
ಗೌರವಿಸಲೆಂದು
ಬಾಗಿದ್ದೆ;
ನೀ
ಬೆನ್ನ ಹುರಿ ಮೇಲೆ
ಕಾಲಿಟ್ಟು ತೆರಳಿದ್ದೆ!

*ಕವಿಸಾಲು- 2*
ಪ್ರೇಮ ಧ್ಯಾನ ನೆಮ್ಮದಿ ಬದುಕು
ಏನೆಲ್ಲಾ ಅನ್ನುತ್ತಿರುತ್ತಾರೆ
ಜನ
ಮಾತಿನಲ್ಲಿ;
ನಾನಂತೂ
ನೀನು
ಎಂದುಬಿಡುತ್ತೇನೆ
ಮುಗುಳ್ನಕ್ಕು
ಮೌನದಲ್ಲಿ…

ಜನ ಮತ್ತು ನಾನು
ಎಷ್ಟೊಂದು
ವಿರುದ್ಧ ದಿಕ್ಕಿನಲ್ಲಿದ್ದೇವೆ
ಈ ಜಗತ್ತಿನಲ್ಲಿ!

– *ಶಿ.ಜು.ಪಾಶ*
8050112067
(28/2/24)