ಸಾಸ್ವೆಹಳ್ಳಿ ರಂಗರಾಜ್ ರ ಹೊಸ ಕವಿತೆ ‘ಮಾಯಾವಿ’ ನಿಮಗಾಗಿ…

*ಮಾಯಾವಿ*

“”””””””””””””””

ಗೆಳತಿ

ಮೊದಲ

ನೋಟದಲೇ

ದಿಟ್ಟಿಸಿ

ನಂತರ

ಮೋಹಿಸಿ

ನಿರಂತರ

ಪ್ರೀತಿಸಿ

ಅರ್ಥೈಸಿ

ಒಪ್ಪಿಸಿ

ಸಹಿಸಿ

ಸೈರೈಸಿ

ಹಂಬಲಿಸಿ

ಹುರಿದುಂಬಿಸಿ

ಚೇತರಿಸಿ

ಪರವಶವಾಗಿ‌ಸಿ

ಕನವರಿಸಿ

ಗರಿಗೆದರಿಸಿ

ಹಾರಾಡಿಸಿ

ಈಗ ರೆಕ್ಕೆ

ಕತ್ತರಿಸಿ

ನೋಯಿಸಿ

ಗಹಗಹಿಸಿ

ಸ್ನೇಹ ಪ್ರೀತಿ

ಇಲ್ಲವಾಗಿಸಿ

ಅದೆಲ್ಲಿಗೆ

ಮಾಯವಾದೆ

ಪಲಾಯನವಾದಿ ?

 

# ಸಾರಂಗರಾಜ್

28/02/2024