ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಕ್ರೀಡಾಕೂಟ*
*ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಕ್ರೀಡಾಕೂಟ*
ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮಾರ್ಚ್-08 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದು, ಪ್ರಯುಕ್ತ ಪೂರ್ವಭಾವಿಯಾಗಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಮಾ. 06 ಮತ್ತು 07 ರಂದು ಜಿಲ್ಲೆಯ ಮಹಿಳೆಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿದೆ.
ಮಾ. 06 ಮತ್ತು 07 ರಂದು ಬೆಳಗ್ಗೆ 10.00 ರಿಂದ ವಾಲಿಬಾಲ್, ಥ್ರೋಬಾಲ್, ಅಥ್ಲೇಟಿಕ್ (100 ಮೀ, 800ಮೀ ಓಟ, ಉದ್ದ ಜಿಗಿತ ಮತ್ತು 200 ಮೀ, 100ಮೀ ಗುಂಡು ಎಸೆತ), ಹಗ್ಗಜಗ್ಗಾಟ, ಪಗಡೆ ಕ್ರಿಕೇಟ್, ಬಾಂಬ್ ಇನ್‍ದಿ ಸಿಟಿ, ಲಗೋರಿ ಹಾಗೂ ಭೌದ್ಧಿಕ ಸ್ಫರ್ದೆಗಳಲ್ಲಿ ರಸಪ್ರಶ್ನೆ ಸ್ಪರ್ಧೆ, ಜಾನಪದ ಗೀತೆ ಮತ್ತು ಗೀಗೀಪದ ಸ್ಪರ್ಧೆಗಳನ್ನು ಆಯೋಜಿಸಿಲಾಗಿದೆ.
ಮಾ. 07 ರಂದು ಬೆಳಗ್ಗೆ 07.00 ರಿಂದ 5 ಕಿ.ಮೀ.ಮ್ಯಾರಾಥಾನ್ ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಕ್ರೀಡಾಂಗಣ, ಶಿವಮೊಗ್ಗ, ದೂ.ಸಂ.: 08182-223328 ನ್ನು ಸಂಪರ್ಕಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
——————–