ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಬಹಳವೇ ಬೇಕಿತ್ತು
ಈ
ಬದುಕಿನಿಂದ…

ಈಗಂತೂ
ಸಿಕ್ಕರಷ್ಟೇ ಸಾಕು
ನೆಮ್ಮದಿಯು!

2.
ಯಾರೋ ಬಂದಿದ್ದಾರೀಗ
ಬಾಗಿಲ ಬಳಿ ಏನೋ ಕೊಡಲು;
ಗಾಯವಾದರೆ
ಪಡೆದುಕೊಳ್ಳುವೆ,
ಪ್ರೇಮವಾದರೆ
ಓಡಿಸುವೆ!

3.
ಎಲ್ಲ ಪರಿಸ್ಥಿತಿಗಳಲ್ಲೂ
ತಣ್ಣಗಿರು ಹೃದಯವೇ…

ತಣ್ಣಗಾದ ಮೇಲೆಯೇ
ಕಬ್ಬಿಣ
ಗಟ್ಟಿಯಾಗುವುದು!

  1. – *ಶಿ.ಜು.ಪಾಶ*
    8050112067
    (6/10/2026)