*ಅಣ್ಣಾನಗರ ಅಲಿ ಮರ್ಡರ್ ಕೇಸ್;* *ಸೈಯದ್ ಜಿಲಾನ್ @ 360 ಅರೆಸ್ಟ್*

*ಅಣ್ಣಾನಗರ ಅಲಿ ಮರ್ಡರ್ ಕೇಸ್;*

*ಸೈಯದ್ ಜಿಲಾನ್ @ 360 ಅರೆಸ್ಟ್*

ಶಿವಮೊಗ್ಗದ ಅಣ್ಣಾನಗರ ಚಾನಲ್ ಏರಿ ಮೇಲೆ ಅ.3 ರಂದು ರಾತ್ರಿ ಕೊಲೆ ಮಾಡಿದ್ದ ಅಶೋಕ ನಗರದ ಸೈಯದ್ ಜೀಲಾನ್ @ 360 ಯನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಅಣ್ಣಾನಗರದ ಚಾನಲ್ ಏರಿ ಮೇಲೆ 37 ವರ್ಷದ ಮೊಹಮ್ಮದ್ ಅಲಿ ಎಂಬಾತನನ್ನು ವಿನಾಕಾರಣ ಕೊಲೆ ಮಾಡಿದ್ದ ಜಿಲಾನ್ ವಿರುದ್ಧ ದೊಡ್ಡಪೇಟೆಯಲ್ಲಿ ಪ್ರಕರಣ ದಾಖಲಾಗಿತ್ತು.

ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಅಶೋಕನಗರ ಮೂರನೇ ಕ್ರಾಸಿನ 23 ವರ್ಷ ವಯಸ್ಸಿನ ಯುವ ಸೈಯದ್ ಜಿಲಾನ್ @ 360 ನನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಆಯುಧ ಮತ್ತು ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.