*ಪ್ರೇಮದ ಊರಲ್ಲಿ ನಮ್ಮೂರ ಕವಿತಾ…* *ಯಾರು ಈ ಕವಿತಾ? ಏನಿವರ ಸಾಧನೆ?*

*ಪ್ರೇಮದ ಊರಲ್ಲಿ ನಮ್ಮೂರ ಕವಿತಾ…*

*ಯಾರು ಈ ಕವಿತಾ? ಏನಿವರ ಸಾಧನೆ?*

ಕನ್ನಡವೂ ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ಧೂಮಕೇತುವಿನಂತೆ ಅಪ್ಪಳಿಸುತ್ತಿರುವ *ಪ್ರೇಮದ ಊರಲಿ…* ಶಿವಮೊಗ್ಗದ ಪ್ರತಿಭೆಯೂ ಗಮನ ಸೆಳೆಯುತ್ತಿದೆ. ಆ ಪ್ರತಿಭಾವಂತ ಕಲಾವಿದೆ ಬೇರೆ ಯಾರೂ ಅಲ್ಲ ಕವಿತಾ…

ಬಾಲ್ಯದಿಂದಲೂ ನಟನೆ ಮತ್ತು ನೃತ್ಯದಲ್ಲಿ ಆಸಕ್ತ ಜೀವ ಕವಿತಾರವರದು. ರಾಜಕಾರಣದ ಜೊತೆ ಜೊತೆಗೇ ಸಿನೆಮಾ, ಧಾರವಾಹಿಗಳಲ್ಲೂ ನಟನೆ ಮಾಡುತ್ತಾ ಮನೆ ಮಾತಾಗುತ್ತಿರುವ ಕವಿತಾ ಈಗಾಗಲೇ ಸಿಗ್ನೇಚರ್, ಪದ್ಮಾವತಿ,ನಾಚಿ,ತಲ್ವಾರ್ ಪೇಟೆ, ಕ್ರಾಂತಿಕಾರಿ,ದಾಸರಹಳ್ಳಿ ಸಿನೆಮಾಗಳಲ್ಲೆಲ್ಲ ನಟಿಸಿದ್ದಾರೆ. ಗಮನ ಸೆಳೆದಿದ್ದಾರೆ.

ನಾನು ಮತ್ತು ಗುಂಡ-2 ಸಿನೆಮಾದಲ್ಲಿ, ಧೃವ ಸರ್ಜಾರ ಕೇಡಿ ಚಿತ್ರದಲ್ಲಿ, ಬಿಡುಗಡೆಗೆ ಸಿದ್ಧವಿರುವ ರಜತ್ ಮೋರ್ಯರವರ ವೈಕುಂಠ ಸಮಾರಾಧನೆ ಚಲನಚಿತ್ರದಲ್ಲೂ ಕವಿತಾರವರ ಕಲಾ ಜಾದೂ ಕಾಣಬಹುದು. ಈಗ ಬಿಡುಗಡೆಯಾಗಿರುವ ಪ್ರೇಮದ ಊರಲಿ ಸಿನೆಮಾದಲ್ಲಿ ಕವಿತಾ ಸಾಧನೆ ಗಮನಾರ್ಹ.

ಉದಯ ಟಿವಿಯ ನಾತಿ ಚರಾಮಿ ಧಾರಾವಾಹಿ, ಹತ್ತಕ್ಕೂ ಹೆಚ್ಚಿನ ಕಿರುಚಿತ್ರಗಳಲ್ಲಿ ಕವಿತಾ ಝಲಕ್ಕುಗಳ ಹೆಜ್ಜೆ ಗುರುತು ಕಾಣಬಹುದು. ಸಾಮಾಜಿಕ ಪಿಡುಗಳನ್ನು ತೊಲಗಿಸುವ ನಿಟ್ಟಿನ ಬೀದಿ ನಾಟಕಗಳಲ್ಲೂ ಕವಿತಾ ಕಾಲ್ಗುಣವಿದೆ.

ಕವಿತಾ ಸಾಧನೆ ಪುಟ್ಟದ್ದೇನಲ್ಲ; 2016ರಲ್ಲಿ ಸಾಫ್ಟ್ರೆನ್ ಇವೆಂಟ್ಸ್ ನ ಮಿಸಸ್ ಕರ್ನಾಟಕ, 2017 ರಲ್ಲಿ ಇಶಾ ಫೌಂಡೇಶನ್ನಿನ ಮಿಸಸ್ ಕರ್ನಾಟಕ ಅಂತಿಮ‌ ಸುತ್ತಿನಲ್ಲಿ ಹಾಗೂ ಬೆಸ್ಟ್ ನ್ಯಾಷನಲ್ ಕಸ್ಟಮ್ ಅವಾರ್ಡ್, 2018 ರಲ್ಲಿ ಪ್ರೈಡ್ ಆಫ್ ಕರ್ನಾಟಕ ಅಂತಿಮ ಸುತ್ತಿನವರೆಗೂ ಕವಿತಾ ರಾಜ್ಯದ ಗಮನ ಸೆಳೆದವರು.

ಬಿಎ, ಬಿಎಡ್ ಮಾಡಿಕೊಂಡು ಎಂಎ ವರೆಗೂ ಪಾದಾರ್ಪಣೆ ಮಾಡಿದ ಕವಿತಾ ಕೆಇಎಸ್ ಪರೀಕ್ಷೆ ಎರಡು ಬಾರಿ ಬರೆದು ಸಂದರ್ಶನಕ್ಕೂ ಹೋಗಿ ಬಂದವರು.

ರಾಜಕಾರಣ ಉಸಿರಾಡುವ ನಟಿ ಎಂದೇ ಕವಿತಾರವರನ್ನು ಕರೆಯಬಹುದೇನೋ. 2018ರಲ್ಲಿ ಶಿವಮೊಗ್ಗದ ಆರನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಹಾಲಿ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಅಹಿಂದ ಬೆಂಗಳೂರು(ರಿ.,) ಮಹಿಳಾ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಟ್ಯಾಟೂ ಕಲಾವಿದೆ ಕೂಡ ಆಗಿರುವ ಕಲಾವಿದೆ ಕವಿತಾ ಕೆ ಟ್ಯಾಟು ಎಂಬ ಉದ್ಯಮ ನಡೆಸುತ್ತಿದ್ದಾರೆ.ಕವಿತಾ ಪ್ರಿಯ ಎಂದು ಸಿನೆಮಾ ರಂಗದಲ್ಲಿ, ಕವಿತಾ ರಾಘವೇಂದ್ರ ಎಂದು ರಾಜಕೀಯ ರಂಗದಲ್ಲಿ ಕರೆಸಿಕೊಳ್ಳುವ ಕವಿತಾ ಬದುಕು ಸುಂದರ ಕವಿತೆ ಇದ್ದಂತೆ- ಮನ್ವಿತಾ, ಮಿನಲ್ ಇಬ್ಬರು ಮಕ್ಕಳು, ರಾಘವೇಂದ್ರ ಯಜಮಾನರು.ಇವರು ಕೂಡ ಟ್ಯಾಟೂ ಕಲಾವಿದರು.

ಕವಿತಾ, ಕವಿತಾ ಪ್ರಿಯ, ಕವಿತಾ ರಾಘವೇಂದ್ರ ಎಂದೆಲ್ಲ ಕರೆಸಿಕೊಳ್ಳುವ ಇವರು ಮೂಲತಃ ಕವಿತಾ ಬಿ.ನಾಯ್ಕ್.

ಕವಿತಾ ಇನ್ನಷ್ಟು ಸಿನೆಮಾಗಳಲ್ಲಿ ಮಿಂಚಲಿ…