*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರಿಗೆ ಮತ್ತೆ ವಿದೇಶೀ ಬೆದರಿಕೆ ಕರೆ*

*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರಿಗೆ ಮತ್ತೆ ವಿದೇಶೀ ಬೆದರಿಕೆ ಕರೆ*

ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರ ಭಕ್ತರ ಬಳಗದ ಮುಖಂಡರಾದ ಕೆ.ಎಸ್.ಈಶ್ವರಪ್ಪನವರಿಗೆ ಮತ್ತೆ ವಿದೇಶೀ ಬೆದರಿಕೆ ಕರೆ ಬಂದಿದೆ.

ದೂರವಾಣಿಗೆ ಮೊನ್ನೆ ವಿದೇಶಿ ಮೂಲದಿಂದ ಅಂತರಾಷ್ಟ್ರೀಯ ಕರೆಯ ಮೂಲಕ ಬೆದರಿಕೆ ಹಾಕುವ ಪ್ರಯತ್ನ ನಡೆದಿದ್ದು, ಇದರ ಅಂಗವಾಗಿ ಸೂಕ್ತ ತನಿಖೆ ಕೈಗೊಂಡು ಕ್ರಮ ಜರುಗಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸ್ವತಃ ಈಶ್ವರಪ್ಪನವರು ನಾಳೆ ಬೆಳಿಗ್ಗೆ 10:30 ಮನವಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.