*7 ತಿಂಗಳ ಗರ್ಭಿಣಿ ಮಗಳನ್ನೇ ಭೀಕರವಾಗಿ ಕೊಂದ ತಂದೆ* *ಪೊಲೀಸರೇ ಶಾಕ್!*

*7 ತಿಂಗಳ ಗರ್ಭಿಣಿ ಮಗಳನ್ನೇ ಭೀಕರವಾಗಿ ಕೊಂದ ತಂದೆ*

*ಪೊಲೀಸರೇ ಶಾಕ್!*

ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್​​ಪಿ ಗುಂಜನ್ ಆರ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಗರ್ಭಿಣಿ ಮಾನ್ಯ ಪಾಟೀಲ್ ಮೇಲೆ ಅವರ ತಂದೆ ಪ್ರಕಾಶ್, ವೀರಣ್ಣ ಮತ್ತು ಅರುಣ್ ಎಂಬುವವರು ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ಮಾನ್ಯ ಸಾವನ್ನಪ್ಪಿದ್ದಾರೆ. ಸಂಜೆ ಸುಮಾರು 6 ರಿಂದ 6.30ರ ಸುಮಾರಿಗೆ ಮನೆಯಲ್ಲಿ ಹಲ್ಲೆ ನಡೆದಿದ್ದು, ರಾತ್ರಿ 9.30ರ ಸುಮಾರಿಗೆ ಮಾನ್ಯ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೆ ಸ್ಪ್ರಿಂಕ್ಲರ್ ಪೈಪ್ ಮತ್ತು ಕೊಡಲಿಯನ್ನು ಬಳಸಲಾಗಿದ್ದು, ಮಾನ್ಯ ತಲೆಗೆ ಗಂಭೀರ ಏಟಾಗಿತ್ತು. ಈ ಘಟನೆಗೆ ಅಂತರಜಾತಿ ವಿವಾಹವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಪೊಲೀಸರು ತಿಳಿಸಿದ್ದಾರೆ. ಮಾನ್ಯ ಅವರ ಮಾವ ಮತ್ತು ಅತ್ತೆಗೂ ಗಾಯಗಳಾಗಿವೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಪ್ರಕಾಶ್ ಮತ್ತು ಅವರ ಇಬ್ಬರು ಸಂಬಂಧಿಕರನ್ನು ವಶಕ್ಕೆ ಪಡೆದಿದ್ದು, ಎಫ್‌ಐಆರ್ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರವನ್ನು ಪೊಲೀಸರು ಕೋರಿದ್ದಾರೆ.