*ಶಿವಮೊಗ್ಗ ಬಸ್ ನಿಲ್ದಾಣದ ಎದುರಿನ ಖಾಸಗಿ ಹೋಟೆಲ್ ಹುಡುಗನ ಮೇಲೆ ಹಲ್ಲೆ ಪ್ರಕರಣ…* *ಏಕವಚನದಲ್ಲಿ ಡ್ಯೂಟಿ ಯೂನಿಫಾರ್ಮ್ ನಲ್ಲಿದ್ದಾಗ ಮಾತಾಡಿದ್ದಕ್ಕೆ ಹಾಗೆ ಮಾಡಿದೆ;* *ದೊಡ್ಡಪೇಟೆ ಸಬ್ ಇನ್ಸ್ ಪೆಕ್ಟರ್ ನಾರಾಯಣ ಮಧುಗಿರಿ ಸ್ಪಷ್ಟನೆ*
*ಶಿವಮೊಗ್ಗ ಬಸ್ ನಿಲ್ದಾಣದ ಎದುರಿನ ಖಾಸಗಿ ಹೋಟೆಲ್ ಹುಡುಗನ ಮೇಲೆ ಹಲ್ಲೆ ಪ್ರಕರಣ…*
*ಏಕವಚನದಲ್ಲಿ ಡ್ಯೂಟಿ ಯೂನಿಫಾರ್ಮ್ ನಲ್ಲಿದ್ದಾಗ ಮಾತಾಡಿದ್ದಕ್ಕೆ ಹಾಗೆ ಮಾಡಿದೆ;*
*ದೊಡ್ಡಪೇಟೆ ಸಬ್ ಇನ್ಸ್ ಪೆಕ್ಟರ್ ನಾರಾಯಣ ಮಧುಗಿರಿ ಸ್ಪಷ್ಟನೆ*

ಇಂಡಿಯನ್ ಆರ್ಮಿಯಲ್ಲಿ ಸರ್ವೀಸ್ ಮಾಡಿ ಬಂದವನು ನಾನು. ಇವ್ನ್ ಬಂದಿದಾನೆ…ಕದ ಹಾಕ್ಲಾ ಅಂತ ಇನ್ಸ್ ಪೆಕ್ಟರ್, ಪೊಲೀಸ್ ಮುಂದೆ ಹೋಟೆಲ್ ನವನು ಮಾತಾಡ್ದ. ಅದಕ್ಕೆ ಬೇಸರದಿಂದ ಈ ಕೆಲಸ ಮಾಡಿದೆ.
ಹೊಸ ಹುಡ್ಗ ಸರ್. ಗೊತ್ತಿಲ್ದೇ ಮಾತಾಡಿದಾನೆ. ಆಸ್ಪತ್ರೆಯಲ್ಲೇನೂ ಅಡ್ಮಿಟ್ ಆಗಿಲ್ಲ. ನನ್ ಡ್ಯೂಟಿ ಪ್ರಾಮಾಣಿಕವಾಗಿ ಮಾಡಿದೀನಿ. ಒಂದ್ ಲೋಟ ಕಾಫಿ ಕುಡ್ದೋನಲ್ಲ ನಾನು…ನನ್ ಕೆಲಸದಲ್ಲಿ ನಾನು ಪ್ರಾಮಾಣಿಕವಾಗಿ ಇದೀನಿ. ಯಾಕೆ ಈ ಘಟನೆ ಆಯ್ತು ಅಂತ ತಿಳ್ಕೊಂಡು ಪ್ರಚಾರ ಮಾಡ್ಬೇಕು.
ಅವನು ಏಕವಚನದಲ್ಲಿ ಆನ್ ಡ್ಯೂಟಿಯಲ್ಲಿದ್ದೋರಿಗೆ ಮಾತಾಡಿದ್ದಕ್ಕೆ ಸಿಟ್ಟುಬಂತು ಎಂದು ಶಿವಮೊಗ್ಗದ ದೊಡ್ಡಪೇಟೆ ಸಬ್ ಇನ್ಸ್ ಪೆಕ್ಟರ್ ನಾರಾಯಣ ಮಧುಗಿರಿ ಮಲೆನಾಡು ಎಕ್ಸ್ ಪ್ರೆಸ್ ಗೆ ಸ್ಪಷ್ಟನೆ ನೀಡಿದ್ದಾರೆ.


