ಶಿವಮೊಗ್ಗದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆಯ ಪ್ರಯುಕ್ತ ‘ಮಾರಿಕಾಂಬ ಕಪ್’ ಕ್ರಿಕೆಟ್ ಪಂದ್ಯಾವಳಿ* *ಫೆ. 7-8 ರಂದು ನಡೆಯುವ ಪಂದ್ಯಾವಳಿ* *ವಿನ್ನರ್ ಗೆ ಎರಡು ಟಗರು,* *ರನ್ನರ್ ತಂಡಕ್ಕೆ ಒಂದು ಟಗರು ಬಹುಮಾನ*
*ಶಿವಮೊಗ್ಗದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆಯ ಪ್ರಯುಕ್ತ ‘ಮಾರಿಕಾಂಬ ಕಪ್’ ಕ್ರಿಕೆಟ್ ಪಂದ್ಯಾವಳಿ*
*ಫೆ. 7-8 ರಂದು ನಡೆಯುವ ಪಂದ್ಯಾವಳಿ*
*ವಿನ್ನರ್ ಗೆ ಎರಡು ಟಗರು,*
*ರನ್ನರ್ ತಂಡಕ್ಕೆ ಒಂದು ಟಗರು ಬಹುಮಾನ*
ಶಿವಮೊಗ್ಗದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವನ್ನು ಈ ಬಾರಿಯೂ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದೇ ಮೊದಲ ಬಾರಿ ಜಾತ್ರೆಯ ಪ್ರಯುಕ್ತ ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗದ ವತಿಯಿಂದ ‘ಮಾರಿಕಾಂಬ ಕಪ್’ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಪಂದ್ಯಾವಳಿಯು ದಿನಾಂಕ: ಫೆ.7 ಮತ್ತು 8 ರಂದು 2 ದಿನಗಳ ಕಾಲ ಬಾಪೂಜಿ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆಯಲಿದೆ.
ಪಂದ್ಯಾವಳಿಯಲ್ಲಿ 40 ತಂಡಗಳು ಭಾಗವಹಿಸಲು ಅವಕಾಶವಿದ್ದು, ಪ್ರವೇಶ ಶುಲ್ಕ 2000 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸಲಿಚ್ಛಿಸುವ ತಂಡಗಳು ಫೆಬ್ರವರಿ 6ರೊಳಗೆ ಹೆಸರು ನೋಂದಾಯಿಸಬೇಕು.
ಪಂದ್ಯಾವಳಿಯು ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ. ಶಿವಮೊಗ್ಗ ಜಿಲ್ಲೆಯ ಆಟಗಾರರಿಗೆ ಮಾತ್ರ ಅವಕಾಶವಿದ್ದು, ಪ್ರತಿ ಪಂದ್ಯಗಳೂ ನಾಕೌಟ್ ಪಂದ್ಯಗಳಾಗಿರುತ್ತವೆ. ಪ್ರತಿ ಪಂದ್ಯವೂ 5 ಓವರ್‍ಗೆ ಸೀಮಿತವಾಗಿದ್ದು, ಪ್ರತಿ ಪಂದ್ಯಕ್ಕೂ ‘ಪಂದ್ಯ ಪುರುಷೋತ್ತಮ’ ಘೋಷಣೆ ಮಾಡಲಾಗುವುದು. ಗೆಲುವು ಸಾಧಿಸಿದ ತಂಡಗಳಿಗೆ ಪ್ರಥಮ ಬಹುಮಾನವಾಗಿ 30 ಕೆ.ಜಿ. ತೂಕದ 2 ಟಗರುಗಳು, ದ್ವಿತೀಯ 30 ಕೆ.ಜಿ. ತೂಕದ 1 ಟಗರು, ತೃತೀಯ ರೂ. 10,001/- ನೀಡಲಾಗುವುದು. ಎಲ್ಲಾ ವಿಭಾಗಗಳಿಗೂ ಆಕರ್ಷಕ ಟ್ರೋಫಿ ನೀಡಲಾಗುವುದು.
ಶಿವಮೊಗ್ಗ ಜಿಲ್ಲೆಯ ಆಟಗಾರರು ಪಂದ್ಯಾವಳಿಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು.
ಶಿವಮೊಗ್ಗದ ನಾಗರೀಕರು ಸಹ ಪಂದ್ಯಾವಳಿಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರುತ್ತಿದ್ದೇವೆ. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕಿರಣ್, ಉಪಾಧ್ಯಕ್ಷರಾದ ಪವನ್, ಶಬರೀಶ್, ರಾಘವೇಂದ್ರ, ಸಂಜಯ್, ಶ್ರೀಧರ್, ಶಿವು, ದರ್ಶನ್, ಕಾರ್ತಿಕ್, ಮಾಲ್ತೇಶ್,ಸುಮನ್ ಹಾಗೂ ಉಪಸ್ಥಿತರಿದ್ದರು.


