ಬುಷ್ ಕಟರ್ ಸೈಕಲ್ ಟ್ರಾಲಿ ಬಳಕೆ ಬಗ್ಗೆ  ಅಭಿಯಾನ

ಬುಷ್ ಕಟರ್ ಸೈಕಲ್ ಟ್ರಾಲಿ ಬಳಕೆ ಬಗ್ಗೆ  ಅಭಿಯಾನ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ,ಇರುವಕ್ಕಿ ಶಿವಮೊಗ್ಗ, ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ *ಬುಷ್ ಕಟರ್ ಸೈಕಲ್ ಟ್ರಾಲಿ* ಯನ್ನು ಬಳಸುವುದರ ಬಗ್ಗೆ ಒಂದು ಅಭಿಯಾನವನ್ನು ಕೈಗೊಂಡರು. ಇದನ್ನು ಎಸ್, ಜಿ.ಬಿ. ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡಿದ್ದಾರೆ. ಈ ಟ್ರಾಲಿ ಗೆ ಎಲ್ಲಾ ರೀತಿಯ ಕಟಿಂಗ್ ಮಷೀನ್ ಗಳನ್ನು ಜೋಡಿಸಿ ಉಪಯೋಗಿಸಬಹುದು. ಈ ಟ್ರಾಲಿಯ ದರ 4 ಸಾವಿರ ರೂ. ಈ ಟ್ರಾಲಿ ಬಳಸುವುದರಿಂದ ರೈತರು ಮಷೀನ್ ಹೋರುವ ಭಾರವನ್ನು ಕಡಿಮೆ ಮಾಡಬಹುದು ಹಾಗೂ ರೈತ ಮಹಿಳೆಯರು ಕೂಡ ಆರಾಮಾಗಿ ಬಳಸಬಹುದು. ಈ ಅಭಿಯಾನದಲ್ಲಿ ಗ್ರಾಮದ ರೈತರು ಅದನ್ನು ಬಳಸಿ,ಪ್ರಯೋಗ ಮಾಡಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.