ಬಲೆ ಬೆಳೆಗಳು ಮತ್ತು ಶೇಖರಣಾ ಕೀಟಗಳ ನಿರ್ವಹಣೆ ಕುರಿತು ಗುಂಪು ಚರ್ಚೆ
ಬಲೆ ಬೆಳೆಗಳು ಮತ್ತು ಶೇಖರಣಾ ಕೀಟಗಳ ನಿರ್ವಹಣೆ ಕುರಿತು ಗುಂಪು ಚರ್ಚೆ
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾಯಾ೯ನುಭವ ಕಾಯ೯ಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ‘ಬಲೆ ಬೆಳೆಗಳು ಮತ್ತು ಶೇಖರಣಾ ಕೀಟಗಳ ನಿರ್ವಹಣೆ’ ಕುರಿತು ಗುಂಪು ಚರ್ಚೆಯನ್ನು ಆಯೋಜಿಸಿದ್ದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಶಿವಮೊಗ್ಗ ಕೃಷಿ ವಿವಿಯ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನವೀನ್ ಮತ್ತು ಮಣ್ಣು ವಿಜ್ಞಾನ ಮತ್ತು ಕೃಷಿ ರಾಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನಿರಂಜನ್ ಅವರು ಆಗಮಿಸಿದ್ದರು.
ಕಾಯ೯ಕ್ರಮದಲ್ಲಿ ವಿದ್ಯಾರ್ಥಿಗಳು ಯಾವ ಬೆಳೆಗಳಲ್ಲಿ ಪ್ರತ್ಯೇಕ ಕೀಟ ಜಾತಿಗಣುಗುಣವಾಗಿ ಯಾವ ಬಲೆ ಬೆಳೆಗಳನ್ನು ಬೆಳೆಯಬೇಕೆಂದು ವಿವರಿಸಿದರು. ಶೇಖರಣಾ ಕೀಟಗಳಿಂದಾಗುವ ಹಾನಿ ಮತ್ತು ಅವುಗಳ ನಿರ್ವಹಣಾ ಕ್ರಮಗಳನ್ನು ಚಾಟ್೯ಗಳ ಮೂಲಕ ಪ್ರದಶಿ೯ಸಿದರು. ಡಾ. ನವೀನ್ ರವರು ವಿಷಯದ ಬಗ್ಗೆ ಜನರೊಂದಿಗೆ ಚಚಿ೯ಸಿ ಅವರ ಅನುಮಾನಗಳನ್ನು ಬಗೆಹರಿಸಿ, ಅವರ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಊರಿನ ಜನರು ಸಕ್ರಿಯವಾಗಿ ಪಾಲ್ಗೊಂಡು ಕಾಯ೯ಕ್ರಮವನ್ನು ಯಶಸ್ವಿಗೊಳಿಸಿದರು.