ಚಾಚಾ ನೆಹರೂ ಜಯಂತಿ;ಭಾರತದ ಭವಿಷ್ಯ ಬದಲು ಮಾಡಿದ ನೆಹರು- ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ 

ಚಾಚಾ ನೆಹರೂ ಜಯಂತಿ;

ಭಾರತದ ಭವಿಷ್ಯ ಬದಲು ಮಾಡಿದ ನೆಹರು- ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು  ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ನೆಹರೂರವರ ಭಾವಚಿತ್ರಕ್ಕೆ ಪುಸ್ಪ ನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ನೆಹರೂ ಅವರು ಈ ದೇಶದ ಮೊದಲ ಪ್ರಧಾನಮಂತ್ರಿಯಾಗಿದ್ದವರು. ಅವರು ಪ್ರಧಾನಿಯಾದ ಮೇಲೆ ಭಾರತದ ಭವಿಷ್ಯವನ್ನು ಬರೆದವರು, ಪಂಚವಾರ್ಷಿಕ ಯೋಜನೆಯ ಮೂಲಕ ಅಭಿವೃದ್ಧಿಯ ಪಥದಲ್ಲಿ ದೇಶವನ್ನು ಕೊಂಡೊಯ್ಯದರು ಎಂದರು.
ಕೃಷಿ, ಕೈಗಾರಿಕೆ, ಅಣೆಕಟ್ಟುಗಳನ್ನು  ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲಿಸುತ್ತದೆ. ಜೈಲಿನಲ್ಲಿ ೧೩ ವರ್ಷಗಳ ಕಾಲ ಇದ್ದವರು. ಈ ದೇಶದ ನಕ್ಷತ್ರ ಅವರು, ಅದರಲ್ಲೂ ನೆಹರೂ ಕುಟುಂಬ ಕಾಂಗ್ರೆಸ್‌ನ ತಾಯಿಬೇರು ಅವರ ಆದರ್ಶಗಳನ್ನು ನಾವು ಪಾಲಿಸುವ ಮೂಲಕ ದೇಶಕ್ಕಾಗಿ ದುಡಿಯಬೇಕಾಗಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಬರಿದಾದ ಭಾರತವಾಗಿತ್ತು. ಭಾರತದ ಸಂಪನ್ಮೂಲಗಳನ್ನೆಲ್ಲ ಕ್ರೂಢಿಕರಿಸಿ ಭವ್ಯ ಭಾರತವನ್ನು ಕಟ್ಟಿದವರು. ದೇಶ ಸ್ವಾವಲಂಭಿಯಾಗಲು ಅವರು ಭದ್ರಾ ಬುನಾದಿಯನ್ನು ಹಾಕಿದ್ದರು ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಎಸ್.ರವಿಕುಮಾರ್, ಸಿ.ಎಸ್.ಚಂದ್ರಭೂಪಾಲ್, ಕಲೀಂ ಪಾಷಾ, ಯು.ಶಿವಾನಂದ್, ಎಸ್.ಟಿ.ಹಾಲಪ್ಪ, ಶಿವಕುಮಾರ್, ಎಸ್.ಟಿ.ಚಂದ್ರಶೇಖರ್, ಜಿ.ಡಿ.ಮಂಜುನಾಥ್, ಮಂಜುನಾಥ್ ಬಾಬು, ಕಲಗೋಡು ರತ್ನಾಕರ್, ಮಧು, ಶಿವಣ್ಣ, ಗಂಗಾಧರ್, ಶಿ.ಜು.ಪಾಶ, ಸ್ಟೆಲಾಮಾರ್ಟಿನ್, ವಿಜಯಲಕ್ಷ್ಮೀ ಪಾಟೀಲ್ ಸೇರಿದಂತೆ ಹಲವರಿದ್ದರು.