*ಬಜೆಟ್ ನಿಂದ ಬ್ರಾಹ್ಮಣರಿಗೂ ಅನುಕೂಲ; ಒಟ್ಟಾರೆ ಅಭಿವೃದ್ಧಿ ಪರ ಬಜೆಟ್- ಮಾಲತೇಶ್*

*ಬಜೆಟ್ ನಿಂದ ಬ್ರಾಹ್ಮಣರಿಗೂ ಅನುಕೂಲ; ಒಟ್ಟಾರೆ ಅಭಿವೃದ್ಧಿ ಪರ ಬಜೆಟ್- ಮಾಲತೇಶ್*

ಪ್ರಸಕ್ತ 2026 27ನೇ ಸಾಲಿನ ಬಜೆಟ್ ಬಡವರ ಮತ್ತು ಮಧ್ಯಮ ವರ್ಗದವರ ಪಾಲಿಗೆ ಆಶಾದಾಯಕವಾಗಿದೆ, ಆರೋಗ್ಯ ಮತ್ತು ವಿದ್ಯಾಭ್ಯಾಸಕ್ಕಾಗಿ ಅತಿ ಹೆಚ್ಚು ಒತ್ತು ಕೊಟ್ಟಿದ್ದು ರೈತರಿಗೆ 0% ಬಡ್ಡಿದರದಲ್ಲಿ ಸಾಲ ಸೌಲಭ್ಯ ಯೋಜನೆ ರೂಪಿಸಿರುವುದು ರೈತರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿದೆ ಎಂದು ರಾಜ್ಯ ಬ್ಯಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಪಿ.ಎಂ. ಮಾಲತೇಶ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಇಲಾಖೆಯಲ್ಲಿ 2000 ಹುದ್ದೆಗಳನ್ನು ಒಳಗೊಂಡಂತೆ ಒಟ್ಟು 56 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಲು ಮಹತ್ವದ ನಿರ್ಧಾರ ಕೈಗೊಂಡಿದ್ದು ಯುವ ಜನತೆಗೆ ಹೆಚ್ಚಿನ ಆತ್ಮವಿಶ್ವಾಸ ಮೂಡಿದೆ,490 ಕೋಟಿ ರೂ ವೆಚ್ಚದಲ್ಲಿ ನೀರಾವರಿ ಯೋಜನೆಯನ್ನು ರೂಪಿಸಲು ಸಮ್ಮತಿಸಲಾಗಿದೆ,16 ವರ್ಷದ ಒಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧಿಸಿರುವುದು ಸಮಾಜದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ ಎಂದಿದ್ದಾರೆ.

ತುಂಗಭದ್ರಾ ಜಲಾಶಯಕ್ಕೆ 30 ನಾಲ್ಕು ಗೇಟ್ ಗಳ ಬದಲಾವಣೆ ಮುಂಗಾರಿಗು ಮುಂಚೆ ಬದಲಾವಣೆ ಕಾಮಗಾರಿ ಕೈಗೆತ್ತಿ ಕೊಳ್ಳುತ್ತಿರುವುದು ಅತ್ಯುತ್ತಮ ವಿಚಾರವಾಗಿದೆ, ವಿಶೇಷವಾಗಿ ಬ್ರಾಹ್ಮಣ ಸಮುದಾಯಕ್ಕೆ ನೇರ ಸಾಲ ಯೋಜನೆ, ಸಾಂದೀಪಿನಿ ಶಿಷ್ಯವೇತನ, ಚಾಣಕ್ಯ ತರಬೇತಿ ಯೋಜನೆ, ಪ್ರತಿಭಾ ಪುರಸ್ಕಾರ, ಮುಂತಾದ ಕಾರ್ಯಕ್ರಮಗಳಿಗೆ ಸರ್ಕಾರ 40 ಕೋಟಿ ರೂಗಳನ್ನು ನೀಡಿರುವುದು ಸ್ವಾಗತಾರ್ಹ. ಹಿಂದಿನ bjp ಸರ್ಕಾರವು ಬ್ರಾಹ್ಮಣ ಸಮುದಾಯವನ್ನು ಬಜೆಟ್ ನಲ್ಲಿ ಗಣನೆಗೆ ತೆಗೆದುಕೊಂಡಿರುತ್ತಿರಲಿಲ್ಲ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ಆಲೋಚನಾ ದೃಷ್ಟಿಯಿಂದ ಕಳೆದ ಮತ್ತು ಈ ವರ್ಷದ, ಸರ್ಕಾರದಿಂದ ನೀಡುತ್ತಿರುವ ಹಣಕಾಸು ನೆರವಿನಿಂದ ಬಡ ಮತ್ತು ಮಧ್ಯಮ ವರ್ಗದ ಬ್ರಾಹ್ಮಣ ಸಮುದಾಯಕ್ಕೆ ಅತಿ ಹೆಚ್ಚಿನ ಅನುಕೂಲವಾಗುತ್ತಿದೆ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ದೂರ ದೃಷ್ಟಿಯಿಂದ 2025 26 ನೇ ಸಾಲಿನ ನೇರ ಸಾಲ ಯೋಜನೆ ಮತ್ತು ಸಾಂದೀಪ ಶಿಷ್ಯವೇತನಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಲ್ಲರ ಖಾತೆಗೂ ಕೂಡ ಡಿಬಿಟಿ ಮೂಲಕ ಹಣ ಸಂದಾಯವಾಗಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ್ದಾರೆ

ಮನವಿಗೆ ತಕ್ಕಂತೆ ಸಂಪನ್ಮೂಲ ಒದಗಿಸಿದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಮತ್ತು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ರವರಿಗೂ ಸಹ ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.