*2026ರ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಬಜೆಟ್- ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ಏನ್ ಹೇಳಿದ್ರು?*
*2026ರ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಬಜೆಟ್- ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ಏನ್ ಹೇಳಿದ್ರು?*
* ಶಿವಮೊಗ್ಗ, ವಿಜಯಪುರ ವಿಮಾನ ನಿಲ್ದಾಣಗಳಲ್ಲಿ ಪೈಲೆಟ್ ತರಬೇತಿ ಕೇಂದ್ರ ನಿರ್ಮಾಣವು ಬಹಳಷ್ಟು ಯುವಕರಿಗೆ ಅನುಕೂಲವಾಗುವುದರ ಜೊತೆಗೆ ಸಂತೋಷವನ್ನು ತಂದು ಕೊಟ್ಟಿದೆ.
* ಮಕ್ಕಳಿಗೆ ಈಗಾಗಲೇ ಮಾರಕವಾಗಿರುವ ಸೋಶಿಯಲ್ ಮೀಡಿಯಾ ಬಳಕೆಯನ್ನು 16 ವರ್ಷದ ಒಳಗಿನ ಮಕ್ಕಳಿಗೆ ಬ್ಯಾನ್ ಮಾಡಿರುವುದು ಸ್ವಾಗತರ್ಯ.
* ನಮ್ಮ ಶಿವಮೊಗ್ಗ ಜಿಲ್ಲೆಯವರಾದ ಶಾಂತವೇರಿ ಗೋಪಾಲ್ ಗೌಡ ರವರ ಹೆಸರನ್ನು ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಗೆ ಇಟ್ಟಿರುವುದು ಹೆಮ್ಮೆಯ ವಿಚಾರ.
* ಈ ಬಾರಿಯ ಬಜೆಟ್ ನಲ್ಲಿ ಹೊಸ ನೇಮಕಾತಿಯ ವಿಚಾರವಾಗಿ ಹಾಗೂ ಆರೋಗ್ಯದ ವಿಚಾರವಾಗಿ ಮತ್ತು ಉದ್ಯೋಗದ ವಿಚಾರವಾಗಿ ಹೆಚ್ಚಿನ ಹೊತ್ತನ್ನು ನೀಡಿರುವುದು ಸಹ ಸ್ವಾಗತರ್ಯ.
* ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಅವರ ನಿಗಮದಿಂದ ಪಡೆದಿರುವ ಸಾಲದ ಬಡ್ಡಿ ಮನ್ನಾ ಮಾಡಿರುವುದು ಅವರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಮತ್ತಷ್ಟು ವ್ಯಾಪಾರ ವ್ಯವಹಾರ ಮಾಡಲು ಅನುಕೂಲವಾಗಿದೆ.
ಒಟ್ಟಾರೆಯಾಗಿ ಈ ಬಾರಿಯ ಬಜೆಟ್ ಉತ್ತಮವಾಗಿದ್ದು, ಐದು ಗ್ಯಾರಂಟಿಗಳನ್ನು ನೀಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಬಾರಿಯೂ ದಿವಾಳಿ ದಿವಾಳಿ ಎಂಬ ಮಾತುಗಳನ್ನು ಹೇಳುತ್ತಿದ್ದರು, ಆದರೂ ಸಹ ರಾಜ್ಯದ ಅಭಿವೃದ್ಧಿಗೆ ಹಾಗೂ ಗ್ಯಾರೆಂಟಿಗೆ ಹಣ ನೀಡಿರುವುದೇ 17ನೇ ಬಜೆಟ್ಟಿನ ಆರನೇ ಗ್ಯಾರಂಟಿ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್ ಸಿ ಯೋಗೇಶ್ ರವರು ಪ್ರತಿಕ್ರಿಯೆ ನೀಡಿದ್ದಾರೆ.


