ಕುವೆಂಪು ವಿವಿ: ಪರೀಕ್ಷೆ ಮುಂದೂಡಿಕೆ*
*ಕುವೆಂಪು ವಿವಿ: ಪರೀಕ್ಷೆ ಮುಂದೂಡಿಕೆ*
ಶಂಕರಘಟ್ಟ, ಡಿ. 27: ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ, ಅವರ ಗೌರವಾರ್ಥ ರಾಜ್ಯ ಸರ್ಕಾರ ಸಾರ್ವಜನಿಕ ರಜೆ ಘೋಷಿಸಿರುವುದರಿಂದ ಡಿ. 27ರಂದು ನಡೆಯಬೇಕಿದ್ದ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕ Non-NEP ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಪರೀಕ್ಷಾಂಗ ಉಪಕುಲಸಚಿವ ಡಾ. ಪಿ. ಧರಣಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.