ಅಕ್ರಮ ಮದ್ಯ-ಹಣ ವಶ /ಅಕ್ರಮ ತಂಬಾಕು ಸಾಗಾಣಿಕೆ : ಜಪ್ತಿ

*ಅಕ್ರಮ ಮದ್ಯ-ಹಣ ವಶ : ಪ್ರಕರಣ ದಾಖಲು*

ಶಿವಮೊಗ್ಗ;
ಲೋಕಸಭಾ ಮತ ಕ್ಷೇತ್ರಗಳ ವ್ಯಾಪ್ತಿಯ ಚೆಕ್‍ಪೆÇೀಸ್ಟ್ ಗಳಲ್ಲಿ ಮಾ. 25 ರಂದು ಅಕ್ರಮವಾಗಿ ಸಾಗಿಸುತ್ತಿದ್ದ/ಮಾರಾಟ ಮಾಡುತ್ತಿದ್ದ ಸುಮಾರು ರೂ. 3126 ಮೊತ್ತದ 8.010 ಲೀಟರ್ ಮದ್ಯವನ್ನು ಪೊಲೀಸ್ ಇಲಾಖೆಯಿಂದ ಹಾಗೂ ಸುಮಾರು ರೂ. 16040 ಮೊತ್ತದ 47.38 ಲೀ ಮದ್ಯ ಸೇರಿ ಒಟ್ಟು ರೂ.19167 ಮೌಲ್ಯದ 55.39 ಲೀಟರ್ ಮದ್ಯವನ್ನು ಹಾಗೂ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ರೂ.2,60,000 ಹಣವನ್ನು ವಶಪಡಿಸಿಕೊಂಡು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

*ಅಕ್ರಮ ತಂಬಾಕು ಸಾಗಾಣಿಕೆ : ಜಪ್ತಿ*

ಶಿವಮೊಗ್ಗ;
ಲೋಕಸಭಾ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಸಾಗರ -117 ಮತಕ್ಷೇತ್ರ ವ್ಯಾಪ್ತಿಯ ನಾಗೋಡಿ ಚೆಕ್‍ಪೋಸ್ಟ್‍ನಲ್ಲಿ ಎಸ್‍ಎಸ್‍ಟಿ ತಂಡವು ಸುಮಾರು ರೂ.3.84 ಲಕ್ಷದ ಸೆಂಟೆಡ್ ತಂಬಾಕು ಹಾಗೂ ತಂಬಾಕನ್ನು ಸಾಗಿಸುತ್ತಿದ್ದ ಬಸ್‍ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಎಫ್‍ಎಸ್‍ಟಿ ತಂಡಕ್ಕೆ ಹಸ್ತಾಂತರಿಸಿದೆ. ತಂಡದಲ್ಲಿ ನಾಗೇಶ್ ಎನ್ ಆರ್, ಚಂದ್ರಶೇಖರ, ಪ್ರವೀಣ್ ಇದ್ದರು.

===