ಶಿವಮೊಗ್ಗ ನಗರದಲ್ಲಿ ಮನೆ ಕಟ್ಟಡ ಕಟ್ಟಲು ಪರವಾನಿಗೆ ಪಡೆಯಲು ಸರ್ಕಾರದ ULMS ಸಾಫ್ಟ್ವೇರ್ ಗೊಂದಲದಿಂದ ಸಾರ್ವಜನಿಕರ ಪರದಾಟ ಪಾಲಿಕೆ ಕಂದಾಯ ವಿಭಾಗದಲ್ಲೂ ಈ ಸ್ವತ್ತು ತಿದ್ದುಪಡಿ ನರಳಾಟ ಮಾಜಿ ನಗರಸಭಾ ಸದಸ್ಯ ಎನ್ ಕೆ ಶ್ಯಾಮಸುಂದರ್ ಹೇಳಿಕೆ
ಶಿವಮೊಗ್ಗ ನಗರದಲ್ಲಿ ಮನೆ ಕಟ್ಟಡ ಕಟ್ಟಲು ಪರವಾನಿಗೆ ಪಡೆಯಲು ಸರ್ಕಾರದ ULMS ಸಾಫ್ಟ್ವೇರ್ ಗೊಂದಲದಿಂದ ಸಾರ್ವಜನಿಕರ ಪರದಾಟ
ಪಾಲಿಕೆ ಕಂದಾಯ ವಿಭಾಗದಲ್ಲೂ ಈ ಸ್ವತ್ತು ತಿದ್ದುಪಡಿ ನರಳಾಟ
ಮಾಜಿ ನಗರಸಭಾ ಸದಸ್ಯ ಎನ್ ಕೆ ಶ್ಯಾಮಸುಂದರ್ ಹೇಳಿಕೆ
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲು ನಾಗರೀಕರು ಪರವಾನಿಗೆ ಪಡೆಯಲು ಸರ್ಕಾರದ ULMS ( ಅರ್ಬನ್ ಲ್ಯಾಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ) ಸಾಫ್ಟ್ವೇರ್ ಅಡಿಯಲ್ಲಿ ಅರ್ಜಿ ಸಲ್ಲಿಸಿ ಪಾಲಿಕೆಯಲ್ಲಿ ಕಡತ ಅನುಮೋದನೆ ಆದಮೇಲೆ ಶುಲ್ಕ ಭರಿಸಲು ಹೋದಾಗ ಇಂಜಿನಿಯರ್ ಗಳು ಶುಲ್ಕ ವ್ಯತ್ಯಾಸ ಮಾಡಿ ಅಪ್ಲೋಡ್ ಮಾಡಿದರೆ ಅದನ್ನು ಸರಿಪಡಿಸಲು ಅವಕಾಶವಿಲ್ಲ.ಅದನ್ನ ಸರ್ಕಾರಕ್ಕೆ ಪಾಲಿಕೆಯ ಐಟಿ ಸ್ಟಾಫ್ ನಿಂದ ಟಿಕೆಟ್ ಎಂಬ ಕಂಪ್ಲೇಂಟ್ ರಿಜಿಸ್ಟರ್ ಮಾಡಿಸಬೇಕು. ದೂರು ದಾಖಲಾದ ನಂತರ ಸರ್ಕಾರದ ಅಲ್ಲಿನ ಟೆಕ್ನಿಕಲ್ ವಿಂಗ್ ಪರಿಶೀಲಿಸಿ ಕಳಿಸಲು ತಿಂಗಳುಗಟ್ಟಲೆ ಕಾಯಬೇಕು. ಕಟ್ಟಡ ಕಟ್ಟಲು ಲೈಸೆನ್ಸ್ ಇಲ್ಲದೆ ಬ್ಯಾಂಕುಗಳು ಸಾಲ ನೀಡುವುದಿಲ್ಲ.ಲೋನ್ ಪಡೆಯವರ ಗೋಳಾಟ ಯಾರಿಗೂ ಕೇಳಿಸುತ್ತಿಲ್ಲ. ಕೆಲವರು ಎಂಟು ತಿಂಗಳಿಂದ ಲೈಸೆನ್ಸ್ ಸಿಕ್ಕಿಲ್ಲ ಆಗಸ್ಟ್ ತಿಂಗಳಿಂದ ಕಂಪ್ಲೇಂಟ್ ರಿಜಿಸ್ಟರ್ ಮಾಡಿದರು ಪರಿಹಾರವಾಗಿಲ್ಲ.ಒಂದು ವಾರ್ಡಿನ ಕಡೆತ ಇನ್ನು ಯಾವುದು ವಾರ್ಡ್ ನ ಇಂಜಿನಿಯರಿಗೆ ಹೋಗಿರುತ್ತದೆ. ಎರಡೆರಡು ರಶೀದಿ ಶೋ ಆಗುತ್ತಿದೆ.ಎಂಬ ದೂರು ದಿನನಿತ್ಯ ಪಾಲಿಕೆಯ ಐಟಿ ಸ್ಟಾಪ್ ಬಳಿ ಬಂದು ಹೇಳುತ್ತಾ ಪರದಾಡುತ್ತಿದ್ದಾರೆ. ಸರ್ಕಾರ ಖಾಸಗಿ ಇಂಜಿನಿಯರ್ ಗಳ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ ಹಾಗೆಯೇ ಸಾರ್ವಜನಿಕರಿಗೂ ಮ್ಯಾನ್ವಲ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ನಾಗರೀಕರು ಸಿಟಿಜನ್ ಫೋರಂ ಲಾಗಿನ್ ನಲ್ಲಿ ಲೈಸೆನ್ಸ್ ಪರಿಸ್ಥಿತಿ ಪರಿಶೀಲಿಸಬಹುದು ಅಷ್ಟೇ ಬೇರೆ ಉಪಯೋಗವಿಲ್ಲ. ಈ ಹಿಂದೆ ಇದ್ದ ನಿರ್ಮಾಣ್ ಟು ಆ ಸಾಫ್ಟ್ವೇರ್ ಉತ್ತಮವಾಗಿತ್ತು ಎಂಬುದು ಅಧಿಕಾರಿಗಳ ನಾಗರೀಕರ ಅಭಿಪ್ರಾಯ. ಇದರ ಬಗ್ಗೆ ಮಾನ್ಯ ಸಚಿವರು ಗಂಭೀರವಾಗಿ ಪರಿಗಣಿಸಿ ಶಿವಮೊಗ್ಗ ನಾಗರೀಕರು ಕಟ್ಟಡ ಪರವಾನಿಗೆ ಪಡೆಯಲು ಅನುಕೂಲ ಮಾಡಿಕೊಡಬೇಕೆಂದು ನಾಗರೀಕರ ಪರವಾಗಿ ಆಗ್ರಹಪಡಿಸುತ್ತೇನೆ
ಹಾಗೆಯೇ ಶಿವಮೊಗ್ಗ ಪಾಲಿಕೆಯ ಕಂದಾಯ ವಿಭಾಗದಲ್ಲಿ ಈ ಸ್ವತ್ತು ತಿದ್ದುಪಡಿಯ ಅರ್ಜಿಗಳು ಸಾಕಷ್ಟು ಇದ್ದು. ಇವುಗಳ ತಿದ್ದುಪಡಿಯೂ ಸಹ ತಿಂಗಳಗಟ್ಟಲೆ ಪಾಲಿಕೆಯ ಕಚೇರಿಗೆ ನಾಗರೀಕರು ಅಲೆಯುತ್ತಿದ್ದಾರೆ ಇದರಿಂದ ನೋಂದಣಿಗಳು ಸಹ ನಿಂತಿವೆ ಸರ್ಕಾರಕ್ಕೆ ಬರುವ ಆದಾಯ ಕುಂಠಿತಗೊಂಡಿದೆ.ಈ ಬಗ್ಗೆನೂ ಗಮನಹರಿಸಲು ಆಗ್ರಹಿಸುತ್ತೇನೆ
*ಎನ್ ಕೆ ಶ್ಯಾಮಸುಂದರ್* *ಮಾಜಿ ನಗರಸಭಾ ಸದಸ್ಯರು ಶಿವಮೊಗ್ಗ*


