ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಪತ್ರಿಕಾಗೋಷ್ಠಿ; ಉಗ್ರರಿಂದ ಹತರಾದ ಮಂಜುನಾಥ್ ಕುಟುಂಬಕ್ಕೆ ಸಿಎಂ ಭೇಟಿ ನೀಡಿ 50 ಲಕ್ಷ ಪರಿಹಾರ ಘೋಷಿಸಲಿ ಶಿವಮೊಗ್ಗ ಆಡಳಿತ ಸಂಕೀರ್ಣ ಕಾಮಗಾರಿ ಭರವಸೆ ಕೊಡಲಿ ಬೊಮ್ಮನಕಟ್ಟೆ ಫ್ಲೈಓವರ್ ಕಾಮಗಾರಿ ಬಗ್ಗೆ ಮಾತಾಡಲಿ ಶಿವಮೊಗ್ಗದ ಅಭಿವೃದ್ಧಿ ಕಾಮಗಾರಿಗಳ ಘೋಷಣೆ ಮಾಡಲಿ
ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಪತ್ರಿಕಾಗೋಷ್ಠಿ;
ಉಗ್ರರಿಂದ ಹತರಾದ ಮಂಜುನಾಥ್ ಕುಟುಂಬಕ್ಕೆ ಸಿಎಂ ಭೇಟಿ ನೀಡಿ 50 ಲಕ್ಷ ಪರಿಹಾರ ಘೋಷಿಸಲಿ
ಶಿವಮೊಗ್ಗ ಆಡಳಿತ ಸಂಕೀರ್ಣ ಕಾಮಗಾರಿ ಭರವಸೆ ಕೊಡಲಿ
ಬೊಮ್ಮನಕಟ್ಟೆ ಫ್ಲೈಓವರ್ ಕಾಮಗಾರಿ ಬಗ್ಗೆ ಮಾತಾಡಲಿ
ಶಿವಮೊಗ್ಗದ ಅಭಿವೃದ್ಧಿ ಕಾಮಗಾರಿಗಳ ಘೋಷಣೆ ಮಾಡಲಿ
ಮೇ.18 ರಂದು ಶಿವಮೊಗ್ಗಕ್ಕೆ ಸಿಎಂ ಬರುತ್ತಿದ್ದು, ಜೆಡಿಎಸ್ ನಿಂದ ಒಂದಿಷ್ಟು ಬೇಡಿಕೆಗಳಿವೆ.
ಕಾಶ್ಮೀರದಲ್ಲಿ ಉಗ್ರರಿಂದ ಹತ್ಯೆಯಾದ ಇಬ್ಬರು ಕನ್ನಡಿಗರು. ಶಿವಮೊಗ್ಗದ ಒಬ್ಬರು ಮಂಜುನಾಥ್. ಶಿವಮೊಗ್ಗದ ಮಂಜುನಾಥ್ ರವರ ನಿವಾಸಕ್ಕೆ ಸಿಎಂ ತೆರಳಿ, 50 ಲಕ್ಷ ರೂ ಪರಿಹಾರ ನೀಡಬೇಕು. ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರದ ಕೆಲಸ ನೀಡಬೇಕು. ಜೊತೆಗೆ ಉಪ ಮುಖ್ಯಮಂತ್ರಿಗಳೂ ಆ ಕೆಲಸ ಮಾಡಬೇಕು.
ಶಿವಮೊಗ್ಗದ ಎಸ್ ಪಿ ಕಚೇರಿ ಬಳಿ ಆಡಳಿತ ಸಂಕೀರ್ಣ ಮಾಡಬೇಕು. 200 ಕೋಟಿ ರೂ.ಗಳ ನೀಲಿ ನಕ್ಷೆ ಕೂಡ ಸರ್ಕಾರಕ್ಕೆ ಹೋಗಿದೆ. ಈ ಯೋಜನೆಯನ್ನು ಸಿಎಂ ಮತ್ತು ಡಿಸಿಎಂ ಘೋಷಣೆ ಮಾಡಬೇಕು.
ದೇವರಾಜ್ ಅರಸು ಭವನಕ್ಕೆ ಬೇಕಾದ ಹಣ ಕೂಡಲೇ ಬಿಡುಗಡೆ ಮಾಡಬೇಕು. ಬೊಮ್ಮನಕಟ್ಟೆ ಫ್ಲೈ ಓವರ್ ಕಾಮಗಾರಿ ಕೂಡಲೇ ಕೈಗೆತ್ತಿಕೊಳ್ಳಬೇಕು. ಯುಜಿಡಿ, ನೀರು ಕಾಮಗಾರಿಯಿಂದ ಎಲ್ಲ ರಸ್ತೆಗಳೂ ಗುಂಡಿಮಯ ಆಗೋಗಿದೆ. ರಸ್ತೆ ಕಾಮಗಾರಿಗಳು, ಡಾಂಬರೀಕರಣ ಕೂಡ ಘೋಷಿಸಬೇಕು. ಅಪಘಾತಗಳನ್ನು ಈ ಮೂಲಕ ತಪ್ಪಿಸಬೇಕು.
ಕಾಮಗಾರಿಗಳು ಮುಗಿದರೂ ಲೋಕಾರ್ಪಣೆ ಆಗ್ತಿಲ್ಲ. ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕು. ಸಿ.ಎಂ.ಜಿಲ್ಲೆಗೆ ಆಗಿರೋ ಅನ್ಯಾಯ ಸರಿಪಡಿಸಿ ಅನುದಾನ ಬಿಡುಗಡೆ ಮಾಡಬೇಕು.
ಬಂದೂಕು ಲೈಸೆನ್ಸ್ ನೀಡಬೇಕು.
ಮೇ.18 ರಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಚಿಕ್ಕಮಗಳೂರಿಗೆ ಬರ್ತಿದ್ದಾರೆ. ಕೇಂದ್ರವೂ ತಲಾ 50 ಲಕ್ಷ ಪರಿಹಾರ ನೀಡಲು ಒತ್ತಾಯ