ಅರಣ್ಯ ಮರುಸ್ಥಾಪನೆಗೆ ಬೃಹತ್ ಸಸಿ ನೆಡುವ ಚಳುವಳಿ ಇಂದು ಬೆಳಿಗ್ಗೆಯಿಂದ ಆರಂಭ

ಅರಣ್ಯ ಮರುಸ್ಥಾಪನೆಗೆ ಬೃಹತ್ ಸಸಿ ನೆಡುವ ಚಳುವಳಿ ಇಂದು ಬೆಳಿಗ್ಗೆಯಿಂದ ಆರಂಭ

ದಿನಾಂಕ: 22-06- 2024
ಸಮಯ: ಬೆಳ್ಳಿಗೆ 9:30ಕ್ಕೆ
ಸ್ಥಳ: ಗಾಜನೂರು ಅರಣ್ಯ ವ್ಯಾಪ್ತಿ, ಶಿವಮೊಗ್ಗ.

ಪ್ರಕೃತಿ ಮನುಷ್ಯನ ಅವಿಭಾಜ್ಯ ಅಂಗ ಎಂಬುದು ತಿಳಿದ ನಾವುಗಳು ಸದಾ ಪ್ರಕೃತಿ ಮತ್ತು ಅರಣ್ಯವನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಾಶಪಡಿಸಿ ಅದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವುದು ಪ್ರಸ್ತುತವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಈ ಕಾರಣದಿಂದ ವಿದ್ಯಾರ್ಥಿಗಳಲ್ಲಿ ಹಾಗೂ ಸಮಾಜದಲ್ಲಿ ಪ್ರಕೃತಿ ಹಾಗೂ ಅರಣ್ಯದ ಬಗ್ಗೆ ವಿಶೇಷ ಕಾಳಜಿಯನ್ನು ಮೂಡಿಸುವ ಉದ್ದೇಶದಿಂದ, “ಚಿಗುರು – ಪ್ರಕೃತಿಯ ಉಳಿವು ನಮ್ಮ ನಿಲುವು” ಅರಣ್ಯ ಮರುಸ್ಥಾಪನೆಗೆ ಬೃಹತ್ ಸಸಿ ನೆಡುವ ಚಳುವಳಿಯನ್ನು, ಈ ಕೆಳಗಿನ ಸಂಸ್ಥೆಗಳ ಸಹಯೋಗದೊಂದಿಗೆ ದಿನಾಂಕ 22- 06-2024 ಶನಿವಾರ ಬೆಳಿಗ್ಗೆ 9:00 ಗಂಟೆಯಿಂದ ಗಾಜನೂರು ಅರಣ್ಯ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಎಲ್ಲರೂ ತುಂಬು ಹೃದಯದ ಸಹಕಾರ ಹಾಗೂ ಸಹಾಯವನ್ನು ನೀಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ.

ಪಾಲ್ಗೊಳ್ಳುವವರು:
1.ವಿಕೆರ್ ಟ್ರಸ್ಟ್ ಹರಿಹರ
2. ವಿಫಾಕ್ಸ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್, ಹರಿಹರ
3. ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಶಿವಮೊಗ್ಗ
4. ಶಿವಮೊಗ್ಗ ಸಿರಿ ಲಿಜನ್ – ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್
5. ಬೃಂದಾವನ ಹೈಡ್ರೋಪವರ್ ಲಿಮಿಟೆಡ್, ಗಾಜನೂರು
6. ಸಿರಿಗಂಧ ತಾಲೂಕು ಸ್ತ್ರೀಶಕ್ತಿ ಒಕ್ಕೂಟ(ರಿ), ಶಿವಮೊಗ್ಗ
7. ವೈಷ್ಣವ್ ಯೂನಿಫಾರ್ಮ್ ಡಿಸ್ಟ್ರಿಬ್ಯೂಟರ್ಸ್, ಶಿವಮೊಗ್ಗ
8. ಡಿಜಿ ಅಂಟ್ಸ್, ಶಿವಮೊಗ್ಗ
9. ಶಂಕರ ವಲಯ ಅರಣ್ಯ ಇಲಾಖೆ ಶಿವಮೊಗ್ಗ.
10. ಸಾಮಾಜಿಕ ವಲಯ ಅರಣ್ಯ ಇಲಾಖೆ ಶಿವಮೊಗ್ಗ