ಅಮ್ಜದ್ ಮರ್ಡರ್ ಕೇಸ್- ಅಕ್ಬರ್ ಮೇಲೆ ಪೊಲೀಸ್ ಗುಂಡು* *ಅಕ್ಬರ್ ಸೇರಿದಂತೆ ರುಮಾನ್, ಸಾಹಿಲ್, ತಂಝಿಲ್, ಜುನೈದ್, ನವಾಝ್ ಬಂಧನ- ಚಿತ್ರದುರ್ಗ ಜೈಲಿಗೆ ಶಿಫ್ಟ್* *ಅಕ್ಬರ್ ಸೇರಿದಂತೆ 6 ಜನರ ಬಂಧನ* *ಅಕ್ಬರ್ ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ- ಅಕ್ಬರ್ ಕಾಲಿಗೆ ಗುಂಡು ನುಗ್ಗಿಸಿದರು*
*ಅಮ್ಜದ್ ಮರ್ಡರ್ ಕೇಸ್- ಅಕ್ಬರ್ ಮೇಲೆ ಪೊಲೀಸ್ ಗುಂಡು*
*ಅಕ್ಬರ್ ಸೇರಿದಂತೆ ರುಮಾನ್, ಸಾಹಿಲ್, ತಂಝಿಲ್, ಜುನೈದ್, ನವಾಝ್ ಬಂಧನ- ಚಿತ್ರದುರ್ಗ ಜೈಲಿಗೆ ಶಿಫ್ಟ್*
*ಅಕ್ಬರ್ ಸೇರಿದಂತೆ 6 ಜನರ ಬಂಧನ*
*ಅಕ್ಬರ್ ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ- ಅಕ್ಬರ್ ಕಾಲಿಗೆ ಗುಂಡು ನುಗ್ಗಿಸಿದರು*

ಕಳೆದ ಅ.2 ರ ರಾತ್ರಿ ಶಿವಮೊಗ್ಗದ ಮಾರ್ನಮಿ ಬೈಲಿನ ಬಳಿ ಆಯುಧಗಳಿಂದ ತೀವ್ರ ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಸಾವು ಕಂಡಿದ್ದ ಅಮ್ಜದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಬರ್ ಸೇರಿದಂತೆ 6 ಜನರನ್ನು ಬಂಧಿಸಿದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಲೆತ್ನಿಸಿದ ಅಕ್ಬರ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಶಿವಮೊಗ್ಗದ ವಾದಿಯೇ ಹುದಾ ಬಡಾವಣೆಯ ವಾಸಿ ಅಕ್ಬರ್ ಕಾಲಿಗೆ ಗುಂಡು ಬಿದ್ದಿದೆ.
ಅಕ್ಬರ್ ಮೇಲೆ 1) CR No 10/2024 u/s 341. 323. 324. 504. 506. R/W 34 IPC
2) Cr no 166/2022 u/s 323. 143. 147. 148. 341. 504. 506. 307 r/w 149 IPC
3) cr no 282/2025 u/s 189(2). 191(2). 191(3). 352. 308(2). 118(1). 115(2). 351(2). 109(1). R/w 190 BNS
4) cr no 323/2025 u/s 189(2). 189(4). 191(2). 191(3). 352. 118(1). 118(2). 109(1). 103(1).r/w 190 BNS ಹಳೆಯ ಪ್ರಕರಣಗಳೂ ಸೇರಿದಂತೆ
ಹಲವು ಪ್ರಕರಣಗಳು ದಾಖಲಾಗಿವೆ.
*ಶೂಟೌಟ್- ನಡೆದಿದ್ದೇನು?*
ಅಮ್ಜದ್ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲು ಪಿಎಸ್ಐ ಮಂಜುನಾಥ ರವರನ್ನು ನಿಯೋಜಿಸಲಾಗಿತ್ತು. ಇಂದು ಸುಬ್ಬಯ್ಯ ಆಸ್ಪತ್ರೆಯ ಹಿಂದಿನ ಬೈಪಾಸ್ನಲ್ಲಿ ಅಕ್ಬರ್ ಅಡಗಿಕೊಂಡಿದ್ದಾನೆ ಎಂಬ ಸುಳಿವು ಸಿಕ್ಕಿತು. ಎಸ್ ಐ ಮಂಜುನಾಥ್ ಅವರು ತಂಡದೊಂದಿಗೆ ದಾಳಿ ಮಾಡಿದರು. ಈ ಸಂದರ್ಭದಲ್ಲಿ ಪಿಸಿ ಚಂದ್ರಾನಾಯಕ್ ಮೇಲೆ ಅಕ್ಬರ್ ಚಾಕುವಿನಿಂದ ಹಲ್ಲೆ ನಡೆಸಿ ಅವರ ಕೈಗಳ ಎಡಭಾಗದ ಹೊಟ್ಟೆ ಮತ್ತು ತಲೆಗೆ ಗಾಯಗಳನ್ನುಂಟುಮಾಡಿದ್ದಾನೆ.
ಕೂಡಲೇ ಪಿಎಸ್ಐ ಮಂಜುನಾಥ ಸ್ವಯಂ ರಕ್ಷಣೆಗಾಗಿ ಗಾಳಿಯಲ್ಲಿ ಎಚ್ಚರಿಕೆಯ ಗುಂಡು ಹಾರಿಸಿದರು. ಆದರೆ ಆತ ಶರಣಾಗಲಿಲ್ಲ. ನಂತರ ಪಿಎಸ್ಐ ಅಕ್ಬರನ ಕಾಲಿಗೆ ಎರಡನೇ ಗುಂಡು ಹಾರಿಸಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮ್ಜದ್ ಕೊಲೆಗೆ ಸಂಬಂಧಿಸಿದಂತೆ ಅಕ್ಬರ್ ಸೇರಿದಂತೆ ರುಮಾನ್, ಸಾಹಿಲ್, ತಂಝಿಲ್, ಜುನೈದ್, ನವಾಝ್ ರವರನ್ನು ಕೂಡ ದೊಡ್ಡಪೇಟೆ ಪೊಲೀಸರು ಸಿಪಿಐ ರವಿಕಾಂತ ಪಾಟೀಲರ ನೇತೃತ್ವದಲ್ಲಿ ಬಂಧಿಸಿ, ನ್ಯಾಯಾಲಯಕ್ಕೊಪ್ಪಿಸಿದರು.
ನ್ಯಾಯಾಲಯವು ಚಿತ್ರದುರ್ಗ ಜೈಲಿಗೆ ಆರೋಪಿಗಳನ್ನು ರವಾನಿಸಿದೆ.