ಹಣಕ್ಕೆ ಬೇಡಿಕೆಯಿಟ್ಟು ಆತ್ಮಹತ್ಯೆಗೆ ನೂಕಿದ ಯುವರಾಜ್ ಸಂಬಂಧಿಕರು!**ಮಾನವೀಯತೆ ಮೆರೆದ ಮೆಸ್ಕಾಂ ಗುತ್ತಿಗೆದಾರ ವಿಜಯ್ ಕುಮಾರ್ ಲಕ್ಷ ಲಕ್ಷ ಕಳೆದುಕೊಂಡರೂ ನೆಮ್ಮದಿಯಿಲ್ಲ!**ಏನಿದು ಮೆಸ್ಕಾಂ ಪ್ರಕರಣ? ಇದರ ಆಂತರ್ಯದಲ್ಲಿರೋ ನಿಜ ಸತ್ಯಗಳೇನು?*
*ಹಣಕ್ಕೆ ಬೇಡಿಕೆಯಿಟ್ಟು ಆತ್ಮಹತ್ಯೆಗೆ ನೂಕಿದ ಯುವರಾಜ್ ಸಂಬಂಧಿಕರು!*
*ಮಾನವೀಯತೆ ಮೆರೆದ ಮೆಸ್ಕಾಂ ಗುತ್ತಿಗೆದಾರ ವಿಜಯ್ ಕುಮಾರ್ ಲಕ್ಷ ಲಕ್ಷ ಕಳೆದುಕೊಂಡರೂ ನೆಮ್ಮದಿಯಿಲ್ಲ!*
*ಏನಿದು ಮೆಸ್ಕಾಂ ಪ್ರಕರಣ? ಇದರ ಆಂತರ್ಯದಲ್ಲಿರೋ ನಿಜ ಸತ್ಯಗಳೇನು?*
ಶಿವಮೊಗ್ಗದ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ. ಮೆಸ್ಕಾಂ ಮೇಸ್ತ್ರಿ ನಂದೀಶ ಆತ್ಮಹತ್ಯೆ ಪ್ರಕರಣ ಅದು. ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರೋ ಈ ಪ್ರಕರಣ ಮನುಷ್ಯತ್ವ ತೋರಿಸುವ ಗುತ್ತಿಗೆದಾರರಿಗೂ ಒಂದು ವಿಶೇಷ ಪಾಠದಂತೆ ಚರ್ಚೆಗೊಳಗಾಗಿದೆ!
ಶಿವಮೊಗ್ಗದ ಚಾಲುಕ್ಯ ನಗರದಲ್ಲಿ ವಾಸವಿದ್ದ ಕುಂಸಿ ವಿಭಾಗದ ಮೆಸ್ಕಾಂ ಮೇಸ್ತ್ರಿ, 39 ವರ್ಷ ವಯಸ್ಸಿನ ನಂದೀಶ್ ಕುಂಸಿಯ ವಸತಿ ಗೃಹದಲ್ಲಿಯೇ ನವೆಂಬರ್ 7 ರಂದು ಸಂಜೆ ನೇಣಿಗೆ ಶರಣಾಗುತ್ತಾರೆ.
ಯುವರಾಜ್ ಎಂಬಾತನ ಸಂಬಂಧಿಕರು 25-50 ಲಕ್ಷ ರೂ.,ಗಳನ್ನು ಕೊಡಬೇಕೆಂದು ಫೋನ್ ಮೂಲಕ ಹಿಂಸೆ ನೀಡಿದ್ದೇ ನಂದೀಶ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಮೃತ ನಂದೀಶ್ ರವರ ಪತ್ನಿ ನೀಡಿರುವ ದೂರಿನಲ್ಲಿದೆ.
ಏನಿದು ಪ್ರಕರಣ? ಯಾಕೆ ಹಣ ಡಿಮ್ಯಾಂಡ್ ಮಾಡಲಾಯ್ತು? ನಂದೀಶ್ ಸಾವಿಗೆ ನಿಜವಾಗಲೂ ಕಾರಣವೇನು?
ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಈ ಪ್ರಕರಣದ ತನಿಖೆಗಿಳಿದಾಗ ಸಿಕ್ಕ ಮಾಹಿತಿಗಳು ಇಲ್ಲಿವೆ…
ಎಫ್ ಐ ಆರ್ ನಲ್ಲಿ ಗುತ್ತಿಗೆದಾರ ವಿಜಯ್ ಕುಮಾರ್, ಕುಂಸಿ ಮೆಸ್ಕಾಂ ಇಂಜಿನಿಯರ್ ಜಗದೀಶ್, ಜ್ಯೂನಿಯರ್ ಇಂಜಿನಿಯರ್ ರವಿ, ಗುತ್ತಿಗೆ ನೌಕರ ಯುವರಾಜ್ ಮತ್ತು ಯುವರಾಜ್ ನ ಸಂಬಂಧಿಕರ ಮೇಲೆ ಪ್ರಕರಣ ದಾಖಲಾಗಿರುವ ವಿವರಗಳಿವೆ.
ಇವರೆಲ್ಲರ ಕಾರಣದಿಂದ ತನ್ನ ಗಂಡ ನಂದೀಶ್ ಆತ್ಮಹತ್ಯೆ ಮಾಡಿಕೊಂಡರೆಂದು ಅವರ ಪತ್ನಿ ದೂರು ನೀಡಿದ್ದಾರೆ.
ಆ ಘಟನೆಯ ಇತ್ತೀಚಿನ ಮುಖ ಇದು. ಇದರ ಇನ್ನೊಂದು ಮುಖವಿದೆ.
ಕಳೆದ ಸೆಪ್ಟೆಂಬರ್ 21 ರಂದು ಗುತ್ತಿಗೆದಾರ ವಿಜಯ್ ಕುಮಾರ್ ಹೊರಗುತ್ತಿಗೆ ಆಧಾರದ ಮೇಲೆ ವಿದ್ಯುತ್ ಲೈನ್ ಕೆಲಸಕ್ಕೆಂದು ಕರೆತಂದಿರುತ್ತಾರೆ. ಆಗ ಆಕಸ್ಮಿಕವಾಗಿ ಯುವರಾಜ್ ಗೆ ವಿದ್ಯುತ್ ತಗುಲಿ ಗಾಯಗೊಳ್ಳುತ್ತಾನೆ. ಇಲ್ಲೊಂದು ಟೆಕ್ನಿಕಲ್ ಸಮಸ್ಯೆ ಇತ್ತೆಂಬುದು ಆನಂತರ ಗಮನಕ್ಕೆ ಬರುತ್ತದೆ. ಹೀಗಾದಾಗ, ಮೆಸ್ಕಾಂ ಇಲಾಖೆ ನೌಕರರು, ಸಂಬಂಧಿತ ಗುತ್ತಿಗೆದಾರ, ಅಧಿಕಾರಿಗಳು ಒಂದಾಗಿ ನಿಂತು ಸಮಸ್ಯೆಗಳನ್ನು ಬಗೆಹರಿಸುತ್ತಾರೆ.
ಮೊದಲು ಖಾಸಗಿ ಆಸ್ಪತ್ರೆಗೆ ಗಾಯಾಳು ಯುವರಾಜ್ ನನ್ನು ದಾಖಲಿಸಿದ ಗುತ್ತಿಗೆದಾರ ವಿಜಯ್ ಕುಮಾರ್ ತಕ್ಷಣವೇ ಆಸ್ಪತ್ರೆ ವೆಚ್ಚ ಎಷ್ಟಾದರಾಗಲಿ ಎಂದು ಧೈರ್ಯದಿಂದ ನಿಂತಿದ್ದಾರೆ. ಜೊತೆಗೆ, ಗಾಯಾಳು ಕುಟುಂಬಕ್ಕೂ ಧೈರ್ಯ ತುಂಬಿದ್ದಾರೆ. ಸುಮಾರು 1 ತಿಂಗಳು 17 ದಿನಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಕ್ಲಾಸ್ ಒನ್ ಟ್ರೀಟ್ ಮೆಂಟ್ ಕೊಡಿಸಿ ವಿಜಯ್ ಕುಮಾರ್ ಮಾನವೀಯತೆ ಮೆರೆದಿದ್ದಾರೆ. ಅವಘಡಕ್ಕೊಳಗಾದ ಕೆಲಸಗಾರರ ಪರ ಗುತ್ತಿಗೆದಾರರಾದವರು ವಿಜಯ್ ಕುಮಾರ್ ರಂತೆ ನಿಲ್ಲಬೇಕೆಂದು ಮಾದರಿ ಮಾತಾಡತೊಡಗಿದ್ದೂ ಇದೆ. ಸುಮಾರು 7 ಲಕ್ಷಕ್ಕೂ ಹೆಚ್ಚಿನ ಖರ್ಚು ಮಾಡಿ ತನ್ನ ಸಿಬ್ಬಂದಿ ಯುವರಾಜ್ ನನ್ನು ಚೇತೋಹಾರಿಗೊಳಿಸಿ ಡಿಸ್ ಚಾರ್ಜ್ ಕೂಡ ಮಾಡಿಸಿದ್ದಾರೆ.
ಆಗಲೇ ಆರಂಭವಾಯ್ತು ನೋಡಿ ಯುವರಾಜನ ಸಂಬಂಧಿಕರಿಂದ ಹಣಕ್ಕೆ ಡಿಮ್ಯಾಂಡ್! ಅದೂ ಒಂದು ಕಡೆ ಗುತ್ತಿಗೆದಾರ ವಿಜಯ್ ಕುಮಾರ್ ಗೆ, ಮತ್ತೊಂದು ಕಡೆ ಅದಾಗಲೇ ತಾನೂ ನಾಲ್ಕು ಲಕ್ಷ ಕಳೆದುಕೊಂಡಿದ್ದ ಮೆಸ್ಕಾಂ ಮೇಸ್ತ್ರಿ ನಂದೀಶ್ ಗೆ.
ಹಿರಿಯರು, ಅಧಿಕಾರಿಗಳ ಮೂಲಕ ಬಗೆಹರಿದಿದ್ದ ಪ್ರಕರಣ ಯುವರಾಜನ ಸಂಬಂಧಿಕರು ಹಣಕ್ಕೆ ಪೀಡಿಸಿದ ಪರಿಣಾಮ ಮತ್ತೊಂದು ರೀತಿಯಲ್ಲಿ ಚಾಲ್ತಿಗೆ ಬಂತೆಂದು ಹೇಳಲಾಗುತ್ತಿದೆ. ನಂದೀಶ್ ಹೆಂಡ್ತಿ ನೀಡಿರುವ ದೂರಿನಲ್ಲಿಯೂ ಈ ಹಣ ಪೀಕುವ ಪ್ರಯತ್ನದ ವಿಷಯ ಪ್ರಸ್ತಾಪವಾಗಿದೆ!
ಮೆಸ್ಕಾಂ ಮೇಸ್ತ್ರಿ ನಂದೀಶ್ ಗೆ ಪದೇ ಪದೇ ಹಣಕ್ಕಾಗಿ ಪೀಡಿಸಲಾಗುತ್ತಿತ್ತು. ಯುವರಾಜ್ ಚಿಕಿತ್ಸೆ ವೆಚ್ಚ ಗುತ್ತಿಗೆದಾರರು ಭರಿಸುವುದಾಗಿ ಒಪ್ಪಿಕೊಂಡಿದ್ದರೂ , ಚಿಕಿತ್ಸೆ ಕೊಡಿಸುತ್ತಿದ್ದರೂ ನಂದೀಶ್ ಗೆ ಯುವರಾಜ್ ಕಡೆಯವರು ದೂರವಾಣಿ ಮೂಲಕ ಹಿಂಸೆ ಕೊಡುತ್ತಲೇ ಇದ್ದರು. ಬಂಗಾರ ಅಡವಿಟ್ಟು 4.50ಲಕ್ಷ ರೂ.,ಗಳನ್ನು ನೀಡಿದರೂ ಮತ್ತೆ ಮತ್ತೆ ಫೋನ್ ಮಾಡಿ 25-50ಲಕ್ಷ ರೂ., ಕೊಡಬೇಕೆಂದು ಹಿಂಸೆ ನೀಡಿದ್ದಾರೆ.ಈ ಕಾರಣದಿಂದ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅವರ ಪತ್ನಿ ನೀಡಿದ ದೂರು ಆಧರಿಸಿ ಎಫ್ ಐ ಆರ್ ಮಾಡಿಕೊಂಡಿದ್ದಾರೆ ಪೊಲೀಸರು.
ಗುತ್ತಗೆದಾರ ವಿಜಯ್ ಕುಮಾರ್ ವಿದ್ಯುತ್ ಅಪಘಾತಕ್ಕೊಳಗಾದ ಯುವರಾಜ್ ಗೆ ತಕ್ಷಣವೇ ಒಳ್ಳೆಯ ಆಸ್ಪತ್ರೆಯಲ್ಲಿ, ಎಸಿ ಕೊಠಡಿಯಲ್ಲಿಟ್ಟು ಸಣ್ಣ ನಿರ್ಲಕ್ಷ್ಯವನ್ನೂ ತೋರಿಸದೇ ಚಿಕಿತ್ಸೆ ಕೊಡಿಸಿದರೂ ಹಣದಾಹಕ್ಕೊಳಗಾದ ಯುವರಾಜನ ಸಂಬಂಧಿಕರ ಕಾರದಿಂದ ಮೇಸ್ತ್ರಿ ನಂದೀಶನ ಆತ್ಮಹತ್ಯೆ ಪ್ರಕರಣದಲ್ಲಿ ನಂಬರ್ 1ನೇ ಆರೋಪಿಯಾಗಬೇಕಾಗಿದೆ.
ಜೊತೆಗೆ, ಕುಂಸಿ ಮೆಸ್ಕಾಂ ವಿಭಾಗದ ಅಧಿಕಾರಿಗಳಾದ ಜಗದೀಶ್, ರವಿ ಕೂಡ ಎರಡು ಮತ್ತು ಮೂರನೇ ಆರೋಪಿಗಳಾಗಿದ್ದಾರೆ. ಹಣಕ್ಕಾಗಿ ಹಿಂಸಿಸಿದ ಯುವರಾಜ್ ಮತ್ತು ಆತನ ಸಂಬಂಧಿಕರು ನಾಲ್ಕು ಮತ್ತು ಐದನೇ ಆರೋಪಿಗಳಾಗುವಂತಾಗಿದೆ.
ಮೆಸ್ಕಾಂ ಇಲಾಖೆಗೆ ನಿರಂತರವಾಗಿ ಜೀವ ತುಂಬುತ್ತಿರುವುದು ವಿಜಯ್ ಕುಮಾರ್ ನಂತಹ ಗುತ್ತಿಗೆದಾರರು. ಅಧಿಕಾರಿಗಳು ಹೆಚ್ಚಾಗಿ ಹರಟೆಮಲ್ಲರೆಂಬುದು ಜಗಜ್ಜಾಹೀರ.
ವಿದ್ಯುತ್ ಅಪಘಾತದ ಸಂದರ್ಭದಲ್ಲಿ ತುಸು ಹೆಚ್ಚೇ ಮಾನವೀಯತೆ ಮೆರೆದ ಮೆಸ್ಕಾಂ ಹಿರಿಯ ಗುತ್ತಿಗೆದಾರ ವಿಜಯ್ ಕುಮಾರ್ ಈಗ ಆರೋಪಿ ನಂಬರ್ 1!
ಪ್ರಾಮಾಣಿಕನಾಗಿದ್ದ ಮೆಸ್ಕಾಂ ಮೇಸ್ತ್ರಿ ನಂದೀಶ್ ದುಡುಕಿನ ನಿರ್ಧಾರ ಕೈಗೊಳ್ಳಬಾರದಿತ್ತು. ಹಣಕ್ಕೆ ಪೀಡಿಸುತ್ತಿದ್ದಾರೆಂದು ಒಂದೇ ಒಂದು ದೂರನ್ನು ಪೊಲೀಸರಿಗೆ ನೀಡಿದ್ದರೂ ಸಾಕಿತ್ತು; ತಮ್ಮ ಅಮೂಲ್ಯ ಜೀವ ಉಳಿಸಿಕೊಳ್ಳಬಹುದಿತ್ತು. ಪ್ರಾಮಾಣಿಕತೆ ಮೆರೆದರೂ ತೊಂದರೆ ಪಡುತ್ತಿರುವ ವಿಜಯ್ ಕುಮಾರ್ ರಂತಹ ಗುತ್ತಿಗೆದಾರರಿಗೆ ತೊಂದರೆ ತಪ್ಪಿಸಬಹುದಿತ್ತು!
ಇಷ್ಟರ ನಡುವೆಯೂ ಅತ್ಯಂತ ಝರ್ಝರಿತ ಸ್ಥಿತಿಗೆ ಗುತ್ತಿಗೆದಾರ ವಿಜಯ್ ಕುಮಾರ್ ನ್ನು ಈ ಘಟನೆ ತಂದು ಹಾಕಿತ್ತು. ಊರವರ ಮಧ್ಯಸ್ಥಿಕೆಯಲ್ಲೇ ವಿಜಯ್ ಕುಮಾರ್, ಡಿಸ್ಚಾರ್ಜ್ ಆದ ಯುವರಾಜನಿಗೆ ಸಂಪೂರ್ಣ ಆರೋಗ್ಯ ಚೇತರಿಕೆ ಕಾಣುವವರೆಗೂ ಮೆಡಿಕಲ್ ಖರ್ಚು, ಸರಿಯಾದ ಮೇಲೆ ಕೆಲಸ, ಸಂಬಳ, ಅಲ್ಲೀತನಕ ಪಡಿತರದ ವ್ಯವಸ್ಥೆ ಮಾಡಿಕೊಡುವ ಭರವಸೆಯೂ ವಿಜಯ್ ಕುಮಾರ್ ಕೊಟ್ಟಿದ್ದರು. ಇದಕ್ಕೆಲ್ಲ ಬೆಂಬಲವಾಗಿ ನಿಂತಿದ್ದರು ಇದೇ ಮೆಸ್ಕಾಂ ಅಧಿಕಾರಿಗಳಾದ ಜಗದೀಶ್, ರವಿ, ನಂದೀಶ.
ನಂದೀಶ್ ಧೈರ್ಯ ತೋರಿ ಪೊಲೀಸರ ಮೊರೆ ಹೋಗಿದ್ದರೆ ಬಚಾವ್ ಆಗುತ್ತಿದ್ದರು. ಈ ಘಟನೆಯಿಂದ ಝರ್ಝರಿತಗೊಂಡರೂ ಎದೆಕೊಟ್ಟು ನಿಂತ ವಿಜಯ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದರೆ…
ಆತ್ಮಹತ್ಯೆಯೇ ಪರಿಹಾರವಲ್ಲ; ಬದುಕಿನಲ್ಲಿ ಸೆಟೆದುನಿಂತರೆ ಪರಿಹಾರ ಕಷ್ಟದ ಕೆಲಸವೇನಲ್ಲ…