ಕವಿಸಾಲು
01
ಊಟ ಬಡಿಸಲಿಲ್ಲವೆಂದು* *ಹೆಂಡತಿಯನ್ನೇ ಕೊಂದ!*
*ಊಟ ಬಡಿಸಲಿಲ್ಲವೆಂದು*
*ಹೆಂಡತಿಯನ್ನೇ ಕೊಂದ!*
ಊಟ ಕೇಳಿದ್ದಕ್ಕೆ ಬಡಿಸಲಿಲ್ಲವೆಂದು ಸಿಟ್ಟಿಗೆದ್ದ ಗಂಡ ಹೆಂಡತಿಯ ಕುತ್ತಿಗೆಗೆ ಟವಲ್ ಬಿಗಿದು ಕೊಂದಿರುವ ಘಟನೆ ಶಿಕಾರಿಪುರ ತಾಲ್ಲೂಕಿನ ಅಂಬ್ಲಿಗೊಳ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಮನು ಎಂಬಾತ ತನ್ನ ಹೆಂಡತಿ 22 ವರ್ಷ ವಯಸ್ಸಿನ ಗೌರಮ್ಮಳನ್ನು ಕೊಂದಿದ್ದು, ಮೃತ ಗೌರಮ್ಮಳ ತಂದೆ ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆ ಮಾಡಿದ ಮನುನನ್ನು ಪೊಲೀಸರು ಬಂಧಿಸಿದ್ದಾರೆ.ಕೆಲಸ ಮುಗಿಸಿಕೊಂಡು ಬಂದ ಗಂಡ ಮನು ಮನೆಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಆಗಮಿಸಿದ್ದಾನೆ. ಊಟ ಬಡಿಸು ಎಂದಿದ್ದಾನೆ. ನೀನೇ ಬಡಿಸಿಕೊಂಡು ತಿನ್ನು ಎಂದು ಗೌರಮ್ಮ ಹೇಳಿದ್ದಾಳೆ.
ಕೋಪಗೊಂಡ ಮನು ಆಕೆಯ ಮೇಲೆ ಹಲ್ಲೆ ಮಾಡಿ ಟವೆಲ್ ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಮೃತ ಗೌರಮ್ಮ ಗಾರ್ಮೆಂಟ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಳು.