ಶಿವಮೊಗ್ಗದ ಮಂದಾರ ಶಾಲೆ ವಿವಾದ ಬಿತ್ತು ಬೀದಿಗೆ!* ಮಂದಾರ ಶಾಲೆ ಕಾರ್ಯದರ್ಶಿ ವಿಜಯಾ ಶೆಟ್ಟಿ, ಆಡಿಟರ್ ವಸಂತ ಕುಮಾರ್, ಉಮಾದೇವಿ,ಗೌರೀಶ್, ಥಾಮಸ್ ಮೇಲೆ ದಲಿತ ದೌರ್ಜನ್ಯ, ಬೆದರಿಕೆ ಪ್ರಕರಣ ದಾಖಲು *ಏನಿದೆ ಎಫ್ ಐ ಆರ್ ನಲ್ಲಿ? ಬಿ.ಸುನೀತಾ ನೀಡಿದ ದೂರಿನಲ್ಲೇನಿದೆ?* *FULL DETAILS ಇಲ್ಲಿದೆ*

*ಶಿವಮೊಗ್ಗದ ಮಂದಾರ ಶಾಲೆ ವಿವಾದ ಬಿತ್ತು ಬೀದಿಗೆ!*

ಮಂದಾರ ಶಾಲೆ ಕಾರ್ಯದರ್ಶಿ ವಿಜಯಾ ಶೆಟ್ಟಿ, ಆಡಿಟರ್ ವಸಂತ ಕುಮಾರ್, ಉಮಾದೇವಿ,ಗೌರೀಶ್, ಥಾಮಸ್ ಮೇಲೆ ದಲಿತ ದೌರ್ಜನ್ಯ, ಬೆದರಿಕೆ ಪ್ರಕರಣ ದಾಖಲು

*ಏನಿದೆ ಎಫ್ ಐ ಆರ್ ನಲ್ಲಿ? ಬಿ.ಸುನೀತಾ ನೀಡಿದ ದೂರಿನಲ್ಲೇನಿದೆ?*

*FULL DETAILS ಇಲ್ಲಿದೆ*

ಶಿವಮೊಗ್ಗದ ಪ್ರತಿಷ್ಠಿತ ಮಂದಾರ ಶಾಲೆ ವಿಚಾರವೀಗ ಹಾದಿರಂಪ ಬೀದಿರಂಪವಾಗಿದ್ದು, ಶಾಲೆಯ ಕಾರ್ಯದರ್ಶಿ ಹಾಗೂ 10 ಜನರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಂದಾರ ಶಾಲೆಯ ಕಾರ್ಯದರ್ಶಿ ವಿಜಯ ಶೆಟ್ಟಿ, ಉಮಾದೇವಿ, ವಸಂತ ಕುಮಾರ್, ಗೌರಿಶ್, ಥಾಮಸ್ ಸೇರಿದಂತೆ ಒಟ್ಟು 11 ಜನರ ಮೇಲೆ ಎಫ್ ಐ ಆರ್ ದಾಖಲಾಗಿದೆ.

*ಎಫ್ ಐ ಆರ್ ನಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ವಿವರ*

ಕಳೆದ 15 ದಿನಗಳ ಹಿಂದೆ ಪಿರ್ಯಾದುದಾರರ ಮೇಲೆ ಶ್ರೀಮತಿ ವಿಜಯ ಶೆಟ್ಟಿ ಹಾಗೂ ಇತರರು ಮಾಡಿರುವ ದಬ್ಬಾಳಿಕೆ ವಿರುದ್ಧ ದೂರು ನೀಡಿದ್ದು, ಸದರಿ ವಿಚಾರವಾಗಿ ವಿಜಯ ಶೆಟ್ಟಿ ಹಾಗೂ ಅವರ ಕಡೆಯವರು ಪಿರ್ಯಾದಿಯವರ ಸಂಸ್ಥೆಯ ವಿಚಾರದಲ್ಲಿ, ಸುಮಾರು ಒಂದೂವರೆ ಕೋಟಿ ರೂಪಾಯಿ ಹಣಕಾಸಿನ ವಿಚಾರವಾಗಿ ಹಣ ಕೊಡುವ ವ್ಯವಹಾರವಿದೆ. ನೀವುಗಳು ಸುಮ್ಮನೆ ನಮ್ಮ ಬಳಿ ಬಂದು ಅವಮಾನ ಮಾಡಿಸಿಕೊಳ್ಳುತ್ತೀರಿ. ನೀವುಗಳು ದಿನಾಂಕ/10/10,2025ರ ಬೆಳಗ್ಗೆ, 09-00 ರ ಸಮಯಕ್ಕೆ ನಮ್ಮ ಮನೆಗೆ ಬನ್ನಿ, ಅಲ್ಲಿ ಕೂತು ಮಾತನಾಡೋಣ. ನಿಮ್ಮ ಕಡೆಯವರನ್ನೆಲ್ಲ ಕರೆದುಕೊಂಡು ಬನ್ನಿ ಎಂದು ವಿಜಯ ಶೆಟ್ಟಿ ಹಾಗೂ ಆಕೆಯ ಕಡೆಯವರು ಹೇಳಿದ್ದರ ಮೇರೆಗೆ ನಾವುಗಳು ದಿನಾಂಕ: 10.10.2025 ರ ಬೆಳಗ್ಗೆ 09-00 ಗಂಟೆಗೆ ಸದರಿ ಮೇಲ್ಕಂಡ ವಿಜಯ ಶೆಟ್ಟಿ ಅವರ ಮನೆಯಾದ ಶಿವಮೊಗ್ಗ ನಗರದ ವೆಂಕಟೇಶ ನಗರ 4ನೇ ತಿರುವಿನಲ್ಲಿರುವ “ಸವಿಕೃತ” ನಿಲಯದ ಮನೆಗೆ ನಾವುಗಳು ಹೋದಾಗ ಮನೆಯಲ್ಲಿ ವಿಜಯ ಶೆಟ್ಟಿ, ಉಮಾದೇವಿ ಹಾಗೂ ಇತರರು ಮನೆಯಲ್ಲಿದ್ದರು.

ಪಿರ್ಯಾದುದಾರರು ಮತ್ತು ಶ್ರೀಮತಿ ನೀಲಮ್ಮ, ಶ್ರೀಮತಿ ರತ್ನ, ಶ್ರೀಮತಿ ಲತಾ, ಶ್ರೀಮತಿ ಉಷಾ, ಶ್ರೀಮತಿ ವಾಣಿ, ಶ್ರೀಮತಿ ಸುಮಾ, ಎನ್. ಮಂಜುನಾಥ ಎಸ್ ಕುಮಾರ, ಬಿ, ನಾಗಪ್ಪ, ಎಸ್, ಶೇಖರಪ್ಪ, ಎಂ. ಮಂಜುನಾಥ್ ರವರುಗಳು ಸದರಿ ಮೇಲ್ಕಂಡವರ ಮನೆಗೆ ಹೋಗಿ ಬಾಗಿಲ ಬಳಿ ಇರುವ ಬೆಲ್ ಮಾಡಿದಾಗ ಮೇಲ್ಕಂಡ ಮನೆಯ ಬಾಗಿಲನ್ನು ಉಮಾದೇವಿ ಇವರು ತೆಗೆದರು. ಆಗ ಉಮಾದೇವಿರವರು ಮೇಡಂ ರವರೇ ಮೊನ್ನೆ ನಿಮ್ಮ ಮೇಲೆ ದೂರು ನೀಡಿದ್ದ ಜನರು ಬಾಗಿಲ ಬಳಿ ಬಂದಿದ್ದಾರೆ. ಬನ್ನಿ ಇವರಿಗೆ ಮುಖಕ್ಕೆ ಮಂಗಳಾರತಿ ಮಾಡಿ ಕಳುಹಿಸಿ ಎಂದು ಜೋರಾಗಿ ಕಿರುಚುತ್ತಿದ್ದರು. ಆಗ ವಿಜಯ ಶೆಟ್ಟಿ ಇವರು ಒಳಗಿನಿಂದ ಬೈಯುತ್ತಲೇ ಬೇರೆ ಯಾರಿಗೋ ಫೋನ್ ಮಾಡಿ, ಬಿಳೀ ಬಣ್ಣದ ಕೆ.ಎ,14-ಸಿ-6040 ಕಾರಿನಲ್ಲಿ ಜನರನ್ನು ಮನೆಗೆ ಕರೆಯಿಸಿ ಅವರ ಸಮ್ಮುಖದಲ್ಲಿ ಈ ಹೊಲಸು ಜಾತಿಯ ಅನಿಷ್ಟಗಳು ಪದೇ ಪದೇ ನಮ್ಮ ಮನೆಯ ಬಳಿ ಬರುತ್ತಿದ್ದಾರೆ. ಈ ಹಲ್ಕಾ….. ಜಾತಿಯ ಬೇವರ್ಸಿ ಸೂ …ಮುಂಡೇರಿಗೆ/ಮಕ್ಕಳಿಗೆ ಏನಾದರೂ ಹಳಸಿದ ಪದಾರ್ಥ ಇದ್ದರೆ ಕೊಟ್ಟು ಕಳಿಸಿ ಎಂದು ವಿಜಯ ಶೆಟ್ಟಿ ಇವರು ಉಮಾದೇವಿ ಇವರಿಗೆ ಹೇಳಿದರು. ಆಗ ಕಾರಿನಲ್ಲಿ ಬಂದ ಆಡಿಟರ್ ವಸಂತ್ ಕುಮಾರ್, ಮಗ ಗೌರೀಶ, ವಿಜಯ ಶೆಟ್ಟಿ ರವರ ಕಾಲೇಜಿನ ಮುಖ್ಯಸ್ಥರಾದ ಥಾಮಸ್ ರವರು ನಮ್ಮ ಬಳಿ ಬಂದು ಬಾಯಿಗೆ ಬಂದಂತೆ ಬೈಯುತ್ತಿದ್ದರು. ಆಗ ನಾನು ನಮಗೆ ಪರಿಚಯವಿರುವ ಮಂಜುನಾಥ, ಕುಮಾರ್, ನಾಗಪ್ಪ, ಶೇಖರಪ್ಪ, ಮಂಜುನಾಥ ಎಂ ಇವರಿಗೆ ಇಲ್ಲಿ ತುಂಬಾ ಗಲಾಟೆಯನ್ನು ವಿಜಯ ಶೆಟ್ಟಿ ಹಾಗೂ ಆಕೆಯ ಕಡೆಯುವರು ಮಾಡುತ್ತಿದ್ದಾರೆ. ಬೇಗ ಬರುವಂತೆ ತಿಳಿಸಿದ್ದರ ಮೇರೆಗೆ ಮೇಲ್ಕಂಡ ಎಲ್ಲರೂ ಬಂದರು. ಆಗ ರಶ್ಮಿ, ನೀಲಮ್ಮ ಲತಾ, ಉಷಾ ಇವರು ಜಗಳ ಬಿಡಿಸಲು ಬಂದಾಗ ಗೌರೀಶ ಬಿನ್ ವಸಂತ್ ಕುಮಾರ್, ಆಡಿಟರ್ ಇವರು ಮುಷ್ಟಿಯಿಂದ ಮೇಲ್ಕಂಡ ನಾಲ್ಕೂ ಜನ ನಮ್ಮ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿ ಅವರ ಮರ್ಮಾಂಗಕ್ಕೆ ಕೈ ಹಾಕಿ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಒಡ್ಡಿದ. ಆಗ ಸುಮಾ, ವಾಣಿ, ಮಂಜುನಾಥ್, ಕುಮಾರ್ ಇವರು ಮಾತುಕತೆ ಮಾಡಲು ಕರೆಸಿಕೊಂಡು ಈ ರೀತಿ ನಮ್ಮ ಜನಗಳ ಮೇಲೆ ದೌರ್ಜನ್ಮ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.ವಿಜಯ ಶೆಟ್ಟಿ, ಆಡಿಟರ್ ವಸಂತ್ ಕುಮಾರ್, ಉಮಾದೇವಿ, ಜಯನಗರ ಹಾಗೂ ಗೌರೀಶ ಬಿನ್’ ವಸಂತ್ ಕುಮಾರ್, ಆಡಿಟರ್ ಮತ್ತು ಥಾಮಸ್ ಇವರುಗಳು ನಿಮ್ಮಂತಹ ಕೀಳು ಜಾತಿಯ ಹಲ್ಕಾ …. ಜಾತಿಯ ಬೇವರ್ಸಿ ಭಿಕ್ಷುಕರಿಗೆ ಸನ್ಮಾನ ಮಾಡಿ ಶಾಲು ಹಾರ ಹಾಕಬೇಕಾ ಎಂದು ಬೈದಿದ್ದೂ ಅಲ್ಲದೆ, ಜಗಳ ಬಿಡಿಸಲು ಬಂದ ಶೇಖರಪ್ಪ ಎಸ್ ಬಿ, ನಾಗಪ್ಪ ಮತ್ತು ಎಂ. ಮಂಜುನಾಥ್, ಮೇಲೆ ಹೊರಗಿನಿಂದ ಮೂರ್ನಾಲ್ಕು ಜನರನ್ನು ಕರೆಸಿ ಅವರುಗಳ ಮೇಲೂ ಸಹ ಹಲ್ಲೆ ಮಾಡಿ ಚಪ್ಪಲಿಯಿಂದ ವಿಜಯಶೆಟ್ಟಿ ಮತ್ತು ಆಡಿಟರ್ ವಸಂತ್ ಕುಮಾರ್ ಇವರು ಹೊಡೆದು, ಏಯ್ ಹಲ್ಕಾ ಸೂ…ಮಕ್ಕಳಾ, ನಿಮಗೆ ಮಾನ ಮರ್ಯಾದೆ ಇದ್ದರೆ ಇನ್ನೊಂದು ಬಾರಿ ನಮ್ಮ ಸ್ನೇಹಿತೆಯಾದ ವಿಜಯಶೆಟ್ಟಿ ಇವರ ಮನೆ ಕಡೆ ಬಂದರೆ ನಿಮ್ಮ ಕೈಕಾಲುಗಳನ್ನು ಮುರಿಸಿ ತುಂಗಾ ನದಿಗೆ ಚೀಲದಲ್ಲಿ ತುಂಬಿ ಎಸೆದುಬಿಡುವುದಾಗಿ ಹೇಳಿದ್ದೂ ಅಲ್ಲದೇ, ಪ್ರಶ್ನೆ ಮಾಡಿದ ಪಿರ್ಯಾದಿಯವರಿಗೆ ಮತ್ತು ನೀಲಮ್ಮ, ರಶ್ಮಿ, ಲತಾ, ಉಷಾ, ಸುಮಾ, ವಾಣಿ, ಮಂಜುನಾಥ, ಕುಮಾರ, ನಾಗಪ್ಪ ಶೇಖರಪ್ಪ, ಮಂಜುನಾಥ್ ಇವರಿಗೆ ಏಯ್ ಎಂದು ನಿಂದನೆ, ಜಾತಿನಿಂದನೆ,ಬೆದರಿಕೆ ಹಾಕಿ ಆಡಿಟರ್ ವಸಂತ್ ಕುಮಾರ್, ಗೌರೀಶ, ವಿಜಯ ಶೆಟ್ಟಿ, ಉಮಾದೇವಿ, ಥಾಮಸ್ ರವರು ಜೋರಾಗಿ ಕೂಗಿಕೊಂಡು ಏಯ್ ನಿಮಗೆ ಎಷ್ಟೋ ಧಿಮಾಕು ಎಂದು ಆಡಿಟರ್ ವಸಂತ್ ಕುಮಾ‌ರ್ ಇವರು ಬೈಯುತ್ತಿದ್ದಾಗ, ಈ ಬೇವರ್ಸಿಗಳಿಗೆ ಈ ರೀತಿ ಹೇಳಿದರೆ ಸರಿ ಹೋಗುವುದಿಲ್ಲ ತೆಗೆದುಕೊಳ್ಳಿ, 10ಲೀ ಪೆಟ್ರೋಲ್ ತುಂಬಿದ ಕ್ಯಾನನ್ನು. ಮುಚ್ಚಳ ತೆಗೆದು ಇವರುಗಳ ಮೇಲೆ ಸುರಿದು ಬೆಂಕಿ ಹಚ್ಚಿ, ಸಾಯಿಸಿಬಿಡಿ ಎಂದು ವಿಜಯ ಶೆಟ್ಟಿ ಇವರು ಜೋರಾಗಿ ಕೂಗಾಡುತ್ತಿದ್ದರು. ಆಗ ನಾವು ಗಾಬರಿಯಿಂದ ಕೂಗಿಕೊಂಡಾಗ ಶ್ರೀಮತಿ ರೀಟಾ, ನಿತಿನ್ ಹಾಗೂ ಇತರರು ಬಂದು ಗಲಾಟೆ ಬಿಡಿಸಿರುತ್ತಾರೆ. ಮೇಲ್ಕಂಡವರು ಪಿರ್ಯಾದಿಯವರನ್ನು ಮಾತುಕತೆಗೆ ಎಂದು ಕರೆದು ಪೂರ್ವನಿಯೋಜಿತ ಕೃತ್ಯ ಎಸಗುವ ಉದ್ದೇಶದಿಂದ ಕೆಲವು ವ್ಯಕ್ತಿಗಳನ್ನು ಕರೆಸಿಕೊಂಡು ಫಿರ್ಯಾದಿಯವರ ಮೇಲೆ ಅಶ್ಲೀಲ ಪದಗಳಿಂದ ಬೈದು ಹಲ್ಲೆ ಮಾಡಿಸಿ, ಜಾತಿ ನಿಂದನೆ ಮಾಡಿ ಪೆಟ್ರೋಲು ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿಸುವುದಾಗಿ ಹೇಳಿರುವ ಮೇಲ್ಕಂಡ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನಲ್ಲಿ ವಿವರಯಿದೆ.