ಜಾತಿ ನಿಂದನೆ ಪ್ರಕರಣದಲ್ಲಿ ಭದ್ರಾವತಿಯ ಐದು ಜನರಿಗೆ ಜೈಲು* *ಎಸ್ ಸಿ ಎಸ್ ಟಿ ಕಾಯ್ದೆಗೆ 2 ವರ್ಷ ಕಠಿಣ ಜೈಲು ಶಿಕ್ಷೆ, ಪ್ರತ್ಯೇಕವಾಗಿ 30 ಸಾವಿರ ₹ ದಂಡ, ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ಹಾಗೂ ಸಂತ್ರಸ್ತೆಗೆ 2.50ಲಕ್ಷ ರೂ., ಗಳ ಪರಿಹಾರದ ತೀರ್ಪು ಪ್ರಕಟಿಸಿದ ಕೋರ್ಟ್*

*ಜಾತಿ ನಿಂದನೆ ಪ್ರಕರಣದಲ್ಲಿ ಭದ್ರಾವತಿಯ ಐದು ಜನರಿಗೆ ಜೈಲು*

*ಎಸ್ ಸಿ ಎಸ್ ಟಿ ಕಾಯ್ದೆಗೆ 2 ವರ್ಷ ಕಠಿಣ ಜೈಲು ಶಿಕ್ಷೆ, ಪ್ರತ್ಯೇಕವಾಗಿ 30 ಸಾವಿರ ₹ ದಂಡ, ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ಹಾಗೂ ಸಂತ್ರಸ್ತೆಗೆ 2.50ಲಕ್ಷ ರೂ., ಗಳ ಪರಿಹಾರದ ತೀರ್ಪು ಪ್ರಕಟಿಸಿದ ಕೋರ್ಟ್*

ಜಾತಿ ನಿಂದನೆ ಪ್ರಕರಣವೊಂದರಲ್ಲಿ ಭದ್ರಾವತಿ ಪೇಪರ್ ಟೌನ್ ವ್ಯಾಪ್ತಿಯ ಐದು ಜನ ಆರೋಪಿಗಳಿಗೆ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2 ವರ್ಷ ಕಠಿಣ ಸಜೆ, ದಂಡ ವಿಧಿಸಿ ಅದೇಶಿಸಿದೆ.

ಭದ್ರಾವತಿಯ ಹಿರಿಯೂರು ವಾದಿ ಚಂದ್ರಪ್ಪ(62), ಗಂಗಮ್ಮ(57), ಸಂತೋಷ್(26), ಮಂಜುನಾಥ್(24) ಮತ್ತು ತರಿಕೆರೆಯ ಗುಡದಟ್ಟಿ ಗ್ರಾಮದ ವಾಸಿ ಕವಿತಾ ಶಿಕ್ಷೆಗೆ ಒಳಗಾದವರು.

2021ರ ಡಿಸೆಂಬರ್ 21ರಂದು ಭದ್ರಾವತಿಯ ಹಿರಿಯೂರಿನಲ್ಲಿ ಮಹಿಳೆಯೊಬ್ಬರಿಗೆ ಅದೇ ಊರಿನವರು ಸೇರಿ ಅಕ್ರಮ ಕೂಟ ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು, ನಮ್ಮ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದೀಯ. ಗಂಡ ಸತ್ತಿರುವ ನಿನಗೆ ಆಸ್ತಿ ಬೇಕಾ ಎಂದು ಹಿಯಾಳಿಸಿ ಎಳೆದಾಡಿ ದೊಣ್ಣೆಯಿಂದ ಹಲ್ಲೆ ಮಾಡಿ, ಮನೆ ಖಾಲಿ ಮಾಡದಿದ್ದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು.

ನಿರ್ಮಿಸಿಕೊಂಡಿದ್ದ ಗುಡಿಸಲನ್ನೂ ಕಿತ್ತು ಹಾಕಿದ್ದರು. ಈ ಸಂಬಂಧ ಮಹಿಳೆ ದೂರು ನೀಡಿದ್ದರು‌.ಈ ದೂರಿನ ಮೇರೆಗೆ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿದ್ದವು.

ಪ್ರಕರಣದ ಆಗಿನ ತನಿಖಾಧಿಕಾರಿ ಡಿವೈಎಸ್ ಪಿ ಉಮೇಶ್ ಈಶ್ವರ ನಾಯ್ಕ್ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅ.16ರಂದು ಆದೇಶ ನೀಡಿದ್ದು, ಪ್ರತ್ಯೇಕವಾಗಿ ವಿವಿಧ ಕಲಂಗಳ ಅಡಿಯಲ್ಲಿ 62,000₹ ಗಳ ದಂಡ, ಇಲ್ಲದಿದ್ದರೆ 1 ತಿಂಗಳ ಸಾದಾ ಸಜೆ, ಎಸ್ ಸಿ ಎಸ್ ಟಿ ಕಾಯ್ದೆಗೆ 2 ವರ್ಷ ಕಠಿಣ ಜೈಲು ಶಿಕ್ಷೆ, ಪ್ರತ್ಯೇಕವಾಗಿ 30 ಸಾವಿರ ₹ ದಂಡ, ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ಹಾಗೂ ಸಂತ್ರಸ್ತೆಗೆ 2.50ಲಕ್ಷ ರೂ., ಗಳನ್ನು ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ರತ್ನಮ್ಮ ಪಿ. ವಾದ ಮಂಡಿಸಿದ್ದರು.