ಶಿವಮೊಗ್ಗದ ಉಷಾ ನರ್ಸಿಂಗ್ ಹೋಂ ಬಳಿ *ಆ್ಯಂಬುಲೆನ್ಸ್ – ಕಾರಿನ ನಡುವೆ ಅಪಘಾತ*
ಶಿವಮೊಗ್ಗದ ಉಷಾ ನರ್ಸಿಂಗ್ ಹೋಂ ಬಳಿ
*ಆ್ಯಂಬುಲೆನ್ಸ್ – ಕಾರಿನ ನಡುವೆ ಅಪಘಾತ*

ಆ್ಯಂಬುಲೆನ್ಸ್ ಮತ್ತು ಕಾರಿನ ನಡುವೆ ಶಿವಮೊಗ್ಗದ ಉಷಾ ನರ್ಸಿಂಗ್ ಹೋಂ ಸರ್ಕಲ್ ಬಳಿ ನಡೆದ ಅಪಘಾತದಲ್ಲಿ ಕಾರು ಮೂರ್ನಾಲ್ಕು ಪಲ್ಟಿ ಹೊಡೆದ ಘಟನೆ ಗುರುವಾರದಂದು ಮಧ್ಯಾಹ್ನ ನಡೆದಿದೆ.
ಆ್ಯಂಬುಲೆನ್ಸ್ ಕಾರಿಗೆ ತಾಕಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆಯಿತೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸಣ್ಣಪುಟ್ಟ ಗಾಯಗಳ ಹೊರತು ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.


