ಕವಿಸಾಲು

*ಯುಗ ಯುಗಗಳಿಂದಲೂ ಬೇವು- ಬೆಲ್ಲ ಹೊತ್ತು ತರುತ್ತಿರುವ ಯುಗಾದಿ ಹಬ್ಬದ ಶುಭಾಶಯಗಳನ್ನು ನಿಮಗೆ ಕೋರುತ್ತಾ…*

Gm ಶುಭೋದಯ💐💐

*ಕವಿಸಾಲು*

1.
ಗೊತ್ತಾ ಹೃದಯವೇ?;

ನಿನ್ನ ಮೌನದ ಜೊತೆ
ನನ್ನ ಮೌನ
ಸಾವಿರಾರು ಮಾತಾಡುತ್ತದೆ!

2.
ಮುನಿಸಿಕೊಳ್ಳುವುದು
ನಿನ್ನ ಸೌಂದರ್ಯವು

ಮನವೊಲಿಸುವುದು
ನನ್ನ ಪ್ರೀತಿಯೂ…

ಇಷ್ಟೇ ಈ ಜಗತ್ತು!

3.
ಹಸಿವಿನ ಮೇಲೆ ಕಡಿವಾಣವಿರಲಿ
ಹೃದಯವೇ,

ಮತ್ತೊಬ್ಬರ ಖುಷಿಗಳನ್ನು
ತಿಂದುಬಿಟ್ಟಾತು ಮತ್ತೆ!

4.
ಇದು ಜಗತ್ತು ಕಣೋ…

ಇಲ್ಲಿ
ನೋಟದಿಂದಲ್ಲ
ನೋಟಿನಿಂದ
ಮಾತುಕತೆ ನಡೆಯುತ್ತೆ!

– *ಶಿ.ಜು.ಪಾಶ*
8050112067
(19/3/2026)