ಎನ್.ಕೆ.ಶ್ಯಾಮಸುಂದರ್ ಆತಂಕ; *ಶಿವಮೊಗ್ಗ ನಗರ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ10 ರಿಂದ 20 ವರ್ಷಗಳ ಮೇಲ್ಪಟ್ಟು ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಈ ಖಾತಾದ ನಿರೀಕ್ಷೆಯಲ್ಲಿದ್ದ ಹಲವು ಬಡವರಿಗೆ ಸರ್ಕಾರದ ತೀರ್ಮಾನದಿಂದ ನಿರಾಸೆ…

ಎನ್.ಕೆ.ಶ್ಯಾಮಸುಂದರ್ ಆತಂಕ;

*ಶಿವಮೊಗ್ಗ ನಗರ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿ10 ರಿಂದ 20 ವರ್ಷಗಳ ಮೇಲ್ಪಟ್ಟು ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಈ ಖಾತಾದ ನಿರೀಕ್ಷೆಯಲ್ಲಿದ್ದ ಹಲವು ಬಡವರಿಗೆ ಸರ್ಕಾರದ ತೀರ್ಮಾನದಿಂದ ನಿರಾಸೆ…

ಮಾನ್ಯ ಮುಖ್ಯಮಂತ್ರಿಗಳು ನಗರಾಭಿವೃದ್ಧಿ ಸಚಿವರು ಪೌರಾಡಳಿತ ಸಚಿವರು ಕಂದಾಯ ಸಚಿವರು ಹಾಗೂ ಅಧಿಕಾರಿಗಳು ನಡೆಸಿರುವ ಸಭೆಯಲ್ಲಿ ಈ ಖಾತ ಗೊಂದಲದ ಬಗ್ಗೆ ಕೆಲವು ತೀರ್ಮಾನಗಳು ಹಾಗೂ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ ನೊಂದಣಿ ಆಗಿರುವಂತಹ ಸ್ವತ್ತುಗಳಿಗೆ ಬಿ ಖಾತ ಮಾಡಿಕೊಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದು 10.05.2025 ಅವಕಾಶ ಕೊಟ್ಟಿದ್ದು ಸ್ವಾಗತಾರ್ಹ.

ಈ ಕೆಳಕಂಡವರ ಸ್ವತ್ತುಗಳಿಗೆ ಸರ್ಕಾರದ ಸ್ಪಷ್ಟ ನಿಲುವು ಏನು?
ಇನ್ನೂ ಸಾವಿರಾರು ಬಡ ಕುಟುಂಬಗಳು ನಗರ ವ್ಯಾಪ್ತಿಯ ಕಂದಾಯ ಜಾಗದಲ್ಲಿ ನೊಂದಣಿ ಆಗದೆ ಕ್ರಯಕರಾರು (ಅಗ್ರಿಮೆಂಟ್ ) ಜಿಪಿಎ ಪತ್ರ.ಆಧಾರ ಪತ್ರಗಳು. ಹಕ್ಕು ಪತ್ರಗಳ ಮೇಲೆ ನ್ಯಾಯಾಲಯದಲ್ಲಿ ದಾವಾ ಇಲ್ಲದ ಸ್ವತ್ತುಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ.

ಹಾಗೆಯೇ, ಈ ಹಿಂದೆ 1994ರಲ್ಲಿ ಶಿವಮೊಗ್ಗ ನಗರಸಭೆಗೆ ಹಸ್ತಾಂತರವಾದ ಗಾಡಿಕೊಪ್ಪ.ಅಬ್ಬಲಗೆರೆ.ಮಲವಗೊಪ್ಪ ಗ್ರಾಮಪಂಚಾಯಿತಿ ವ್ಯಾಪ್ತಿಯ ಮನೆಗಳು ಸ್ವತ್ತುಗಳು ಸರ್ಕಾರದ ಗ್ರಾಮ ಠಾಣಾ ಸ್ವತ್ತುಗಳು ಕಂದಾಯ ಭೂಮಿಯ ಅಗ್ರಿಮೆಂಟ್ ಆಧಾರ ಪತ್ರ ಜಿಪಿಎ ಪತ್ರಗಳಲ್ಲಿ ಕಟ್ಟಿಕೊಂಡಿರುವಂತಹ ಮನೆಗಳು ನಿವೇಶನಗಳು ನಗರಸಭೆಯಲ್ಲಿ ಖಾತೆ ದಾಖಲಾಗಿರುತ್ತಾದೆ. ಈ ದಾಖಲೆಗಳ ಮೇಲೆ ಆದ ಖಾತೆಗಳ ಸ್ವತ್ತುಗಳನ್ನು ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಕ್ರಯ ನೋಂದಣಿ ಪರಬಾರೆ ಸಹ ಆಗಿರುತ್ತದೆ. ಕಂದಾಯ ಇಲಾಖೆ ಚಾಲ್ತಿ ಆರ್ ಟಿ ಸಿ ಎಲ್ಲಿಯೂ ಚಾಲ್ತಿಯಲ್ಲಿದೆ ಇದರಲ್ಲಿ ಪಂಚಾಯಿತಿಯಿಂದ ಹಂಚಿಕೆ ಮಾಡಿರುವ ಹಕ್ಕು ಪತ್ರಗಳ ಮೇಲೆ ಸಹ ಮನೆಗಳು ನಿರ್ಮಾಣ ಆಗಿರುತ್ತದೆ.

ಈ ಎಲ್ಲಾ ಆಸ್ತಿಗಳು ಪಾಲಿಕೆಯ ವ್ಯಾಪ್ತಿಯಲ್ಲಿ ಸೇರಿರುತ್ತದೆ. ಮೂಲಭೂತ ಸೌಕರ್ಯ ಸಹ ಪಡೆದಿರುತ್ತಾರೆ. ಸರ್ಕಾರಕ್ಕೆ ಹಣ ಕಟ್ಟಲು ಸಿದ್ದರಿದ್ದಾರೆ.ಆದರೆ ಸರ್ಕಾರದ ಈ ತೀರ್ಮಾನದಿಂದ ಇಂತಹ ಜಾಗಗಳಲ್ಲಿ ಕಟ್ಟಿಕೊಂಡಿರುವಂತಹ ಬಡ ಮನೆಯ ಮಾಲೀಕರಿಗೆ ಈ ಖಾತದ ಬಗ್ಗೆ ಸ್ಪಷ್ಟ ನಿರ್ಧಾರವಿಲ್ಲ. ಸರ್ಕಾರ ಇದಕ್ಕೂ ಸ್ಪಷ್ಟ ಆದೇಶ ಹೊರಡಿಸಬೇಕು. ಬಡವರ ಆಸೆಗೆ ತಣ್ಣೀರು ಎರಿಚಿದ ಹಾಗೆ ಆಗಿದೆ. ನ್ಯಾಯಾಲಯದಲ್ಲಿ ದಾವೇ ಇಲ್ಲದ ಸುಮಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಇಂಥವರಿಗೂ ಬಿ ಖಾತ ಮಾಡಿಕೊಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಹಾಗೂ ಕಂದಾಯ ಸಚಿವರಲ್ಲಿ ವಿನಂತಿಸುತ್ತೇನೆ

ಎನ್ ಕೆ. ಶ್ಯಾಮಸುಂದರ್

ಮಾಜಿನಗರ ಸಭಾ ಸದಸ್ಯರು ಹಾಗೂ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಾಂಗ್ರೆಸ್,  ಶಿವಮೊಗ್ಗ